ಡಿಸ್ಕೊ ಶಾಂತಿ ಈಗ ಎಲ್ಲಿದ್ದಾರೆ. ಅವರ ಪರಿಸ್ಥಿತಿ ಏನಾಗಿದೆ ಗೊತ್ತಾ? ನೋಡಿದ್ರೆ ಶಾಕ್ ಆಗ್ತೀರಾ... - Karnataka's Best News Portal

ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತ ಆಳಿದ ತಾರೆ ಎಂದರೆ ಡಿಸ್ಕೋ ಶಾಂತಿ ಇವರು ಅಧಿಕವಾಗಿ ಡಿಸ್ಕೋ ಡಾನ್ಸ್ ಮಾಡುತ್ತಿದ್ದರಿಂದ ಇವರಿಗೆ ಡಿಸ್ಕೋ ಶಾಂತಿ ಎಂಬ ಹೆಸರು ಬಂತು. ಒಂದು ಕಾಲದಲ್ಲಿ ಇವರಿಗೆ ಇದ್ದಂತಹ ಬೇಡಿಕೆಯನ್ನು ನಾವು ಊಹಿಸಲು ಸಾಧ್ಯವಿಲ್ಲ ಯಾವ ನಟ ನಟಿಯರಿಗೂ ಕೂಡ ಇಷ್ಟು ಬೇಡಿಕೆ ಇರಲಿಲ್ಲ, ಇವರು ಹುಟ್ಟಿದ್ದು ತಮಿಳುನಾಡಿನಲ್ಲಿ ಆಗಸ್ಟ್ 28 1966 ರಂದು ಹುಟ್ಟಿದರು ಇವರ ತಂದೆ CL ಆನಂದ್, ಡಿಸ್ಕೋ ಶಾಂತಿ 1985 ರಲ್ಲಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಮೊದಲಿಗೆ ಹೊಟ್ಟೆ ಪಾಡಿಗಾಗಿ ಚಿತ್ರರಂಗಕ್ಕೆ ಬಂದವರು ನಟಿಯಾಗಿ 2 ಚಿತ್ರಗಳಲ್ಲಿ ನಟಿಸಿದರು ಆದರೆ ಈ ಚಿತ್ರಗಳು ಅವರಿಗೆ ಅದೃಷ್ಟ ತಂದುಕೊಡಲಿಲ್ಲ ನಂತರ ವಿಧಿಯಿಲ್ಲದೆ ಡಿಸ್ಕೋ ಡಾನ್ಸ್ ಪಾತ್ರವನ್ನು ಮಾಡಲೇಬೇಕಾಯಿತು ನಂತರ ಇದರ ಪ್ರತಿಫಲ 1985 ರಿಂದ 1996 ರವರೆಗೆ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಾರೆ.

ಇವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕುಣಿದು ಕುಪ್ಪಳಿಸಿ ಜನರ ಚಪ್ಪಾಳೆ ಗಿಟ್ಟಿಸಿಕೊಂಡರು. ಅಂಬರೀಶ್ ಅವರ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದು. ಇವರು 1992ರಲ್ಲಿ ಶ್ರೀಹರಿ ಎಂಬ ತೆಲುಗು ನಾಯಕನಟನಿಗೆ ಕುಟುಂಬದ ಒಪ್ಪಿಗೆಯ ಮೇರೆಗೆ ಜ್ಯೋತಿಷ್ಯದ ದೋಷ ಕಾರಣ ಯಾರಿಗೂ ಗೊತ್ತಾಗದಂತೆ ಪ್ರೇಮ ವಿವಾಹವಾಗುತ್ತಾರೆ 1996 ರಲ್ಲಿ ಮತ್ತೆ ಎಲ್ಲರ ಸಮ್ಮುಖದಲ್ಲಿ ಮದುವೆಯಾಗುತ್ತಾರೆ. ಮದುವೆಯ ನಂತರ ಇವರಿಗೆ ಎರಡು ಗಂಡು ಒಂದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ ಮಗಳ ಹೆಸರು ಅಕ್ಷರ ಆದರೆ ಹೆಣ್ಣುಮಗು ಹೆಚ್ಚು ದಿನ ಉಳಿಯಲಿಲ್ಲ ಮಗಳ ನೆನಪಿನಲ್ಲಿ ಅಕ್ಷರ ಫೌಂಡೇಶನ್ ಶುರುಮಾಡಿದರು. ಇದರ ಮೂಲಕ ಅನೇಕ ಹಳ್ಳಿಗಳಿಗೆ ನೀರು ಮತ್ತು ಬಡಮಕ್ಕಳಿಗೆ ಶಿಕ್ಷಣ ಒದಗಿಸುತ್ತಾರೆ. 2013ರಲ್ಲಿ ಆರೋಗ್ಯ ಸರಿಯಿಲ್ಲದ ಕಾರಣ ಶ್ರೀಹರಿ ಅವರು ಸಾವನ್ನಪ್ಪುತ್ತಾರೆ, ಈ ದುಃಖದಿಂದ ಹೊರಬರಲಾಗದೆ ಒಂಟಿ ಜೀವನ ನಡೆಸುತ್ತಿದ್ದಾರೆ.

By admin

Leave a Reply

Your email address will not be published. Required fields are marked *