ಗುಲಾಬಿ ಹೂವು ಗಿಡದಲ್ಲಿ ಹೆಚ್ಚು ಹೂಗಳು ಆಗಲು ಈ ಟಿಪ್ಸ್ ಫಾಲೋ ಮಾಡಿ.... - Karnataka's Best News Portal

ಗುಲಾಬಿಹೂಗಳನ್ನು ಕಟ್ ಮಾಡುವಾಗ ಎರಡು ಎಲೆಗಳನ್ನು ಬಿಟ್ಟು ಕಟ್ ಮಾಡಬೇಕು ಏಕೆಂದರೆ ಮುಂದೆ ಚಿಗುರು ಬರಲು ಅದು ಸಹಾಯಮಾಡುತ್ತದೆ ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಅಕ್ಕಿ, ಬೇಳೆ ಎಲ್ಲವನ್ನು ತೊಳೆದೆ ತೊಳೆಯುತ್ತೇವೆ ಆದರೆ ಆ ನೀರನ್ನು ವೇಸ್ಟ್ ಮಾಡುತ್ತೇವೆ, ಆದರೆ ಆ ನೀರನ್ನು ನಾವು ಗುಲಾಬಿ ಗಿಡಗಳಿಗೆ ಅಥವಾ ಬೇರೆ ಗಿಡಗಳಿಗೆ ಹಾಕುವುದರಿಂದ ಅದರಿಂದ ತುಂಬಾ ಪೋಷಕಂಶಗಳು ಗಿಡಗಳಿಗೆ ಸಿಗುತ್ತದೆ. ಬರಿ ಅಕ್ಕಿ ತೊಳೆದ ನೀರು ಮಾತ್ರವಲ್ಲದೆ ಬೇಳೆ ನೀರು, ಅಕ್ಕಿಯ ಗಂಜಿ, ಸೊಪ್ಪು ತೊಳೆದ ನೀರು ಅದನ್ನು ಸಹ ಹಾಕಬಹುದು ನಾವು ಹಣ್ಣು ತಿಂದು ಸಿಪ್ಪೆ ಬಿಸಾಡುತ್ತೇವೆ ಅದೇ ಹಸಿ ಕಸದಿಂದ ನಾವು ಫರ್ಟಿಲೈಸೇಷನ್ ಮಾಡಿ ಹೆಚ್ಚು ಹೂ ಗಳನ್ನು ಬೆಳೆಸಬಹುದು.

ಮೊದಲಿಗೆ ಪಕ್ಕದಲ್ಲಿರುವ ಕಳೆತೆಗೆದು ಮಣ್ಣನ್ನು ಸಡಿಲಗೊಳಿಸಬೇಕು ಮಣ್ಣು ಸಡಿಲವಾದಾಗಲೆ ಗಿಡಕ್ಕೆ ಆಮ್ಲಜನಕ ಪೂರೈಕೆಯಾಗುತ್ತದೆ. ಮೈನ್ ಆಗಿ ಕಸಿ ಮಾಡಿರುವಂತಹ ಫಾಟ್ ಕೆಳಗೆ ಚಿಗುರು ಬರುವುದನ್ನು ಯಾವುದೇ ಕಾರಣಕ್ಕೂ ಬೆಳೆಯಲು ಬಿಡಬಾರದು, ಯಾಕೆಂದರೆ ಅದನ್ನು ಬೆಳೆಯಲು ಬಿಟ್ಟರೆ ಗಿಡಕ್ಕಿಂತ ಜಾಸ್ತಿ ಅದೇ ಬೆಳೆಯುತ್ತದೆ ನಾವು ಹಾಕುವ ಪೋಷಕಾಂಶವನ್ನು ಅದೇ ಹೀರಿಕೊಳ್ಳುತ್ತದೆ. ನಂತರ ಪೋಷಕಾಂಶಗಳನ್ನು ಹಾಕಬೇಕು ಉದಾಹರಣೆಗೆ ಮೊಟ್ಟೆಯ ಸಿಪ್ಪೆ, ದಾಳಿಂಬೆ ಹಣ್ಣಿನ ಸಿಪ್ಪೆ, ಈರುಳ್ಳಿ ಸಿಪ್ಪೆ, ಬಾಳೆಹಣ್ಣಿನ ಸಿಪ್ಪೆ ಎಲ್ಲವನ್ನು ಹಾಕಿ ಮಣ್ಣಿನ ಜೊತೆ ಮಿಕ್ಸ್ ಮಾಡಿ ಕೊಳೆಯಲು ಬಿಡಬೇಕು. ನಂತರ ಅಕ್ಕಿ, ಬೇಳೆ ನೀರನ್ನು ಹಾಕಬೇಕು ಎಷ್ಟು ಬೇಕೋ ಅಷ್ಟನ್ನು ಮಾತ್ರ ಬುಡಕ್ಕೆ ಹಾಕಬೇಕು. ಗುಲಾಬಿ ಗಿಡಗಳು ಅತಿ ಹೆಚ್ಚು ಬಿಸಿಲು ಬೇಕಾಗುತ್ತದೆ ಆದ್ದರಿಂದ ಬಿಸಿಲಿನಲ್ಲಿ ಇಡಬೇಕು.

By admin

Leave a Reply

Your email address will not be published. Required fields are marked *