ನೆನಪಿದ್ದಾರ ನಟಿ ಚಾರುಲತ ಈಗ ಹೇಗಿದ್ದಾರೆ ಗೊತ್ತಾ? ನೀವೇ ನೋಡಿ. - Karnataka's Best News Portal

ನೆನಪಿದ್ದಾರ ನಟಿ ಚಾರುಲತ ಈಗ ಹೇಗಿದ್ದಾರೆ ಗೊತ್ತಾ? ನೀವೇ ನೋಡಿ.

1997 ರಲ್ಲಿ ಸಂಗೀತ ನಿರ್ದೇಶಕ ವಿ ಮನೋಹರ್ ಅವರ ನಿರ್ದೇಶ pನದಲ್ಲಿ ತೆರೆಕಂಡ ಓ ಮಲ್ಲಿಗೆ ಚಿತ್ರ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿತ್ತು. ರಮೇಶ್ ಅರವಿಂದ್ ನಾಯಕರಾಗಿ ಮತ್ತು ಚಾರುಲತಾ ನಾಯಕಿಯಾಗಿ ಚಿತ್ರದಲ್ಲಿ ಅಭಿನಯಿಸಿದ್ದರು, ನಟಿ ಚಾರುಲತಾ ಅವರಂತೂ ತಮ್ಮ ಮುಗ್ಧ ಅಭಿನಯದಿಂದ ತನ್ನ ನಟನೆಯ ಮೊದಲ ಚಿತ್ರದಲ್ಲಿಯೇ ಪ್ರೇಕ್ಷಕರಿಂದ ಹಾಗು ಸಿನಿ ಪಂಡಿತರಿಂದ ಪ್ರಶಂಸೆ ಪಡೆದುಕೊಂಡರು. ಪಂಜಾಬ್ ನಲ್ಲಿ ಜನಿಸಿದ ನಟಿ ಚಾರುಲತಾ ಅವರು ಬೆಳೆದದ್ದು ಕೇರಳದಲ್ಲಿ ಅವರ ಮೂಲ ಹೆಸರು ಸೋನಿಯಾ ಎಂದು ಅವರ ಓ ಮಲ್ಲಿಗೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಚಾರುಲತ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೋಡಿಹಕ್ಕಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು.

ನಂತರ ಚಾರುಲತಾ ಅವರು ಮದುವೆ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತಿಗಳಿಸಿದರು ಅದಾದ ನಂತರದಲ್ಲಿ ಜಗತ್ ಕಿಲಾಡಿ, ಗಡಿಬಿಡಿ, ಸಿಂಹದ ಗುರಿ, ಸುವ್ವಿ ಸುವ್ವಾಲಿ ಇನ್ನು ಮುಂತಾದ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು. ಚಾರುಲತಾ ಅವರು ಕನ್ನಡದಲ್ಲಿ 23 ಚಿತ್ರಗಳಲ್ಲಿ ನಟಿಸಿದ್ದಾರೆ ಹಾಗೂ ಅಲ್ಲದೆ ತಮಿಳು, ತೆಲುಗು, ಮಲೆಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಕ್ರವರ್ತಿ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗೆ ಚಾರುಲತಾ ಅವರು ತಮ್ಮ ನಟನೆಯ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಲು ಮತ್ತು ಕನ್ನಡ ಚಲನಚಿತ್ರ ರಂಗದಲ್ಲಿ ಇನ್ನೂ ಹೆಚ್ಚಿನ ಹೆಸರು, ಕೀರ್ತಿಯನ್ನು ಗಳಿಸಲು ಇನ್ನೂ ಹೆಚ್ಚಿನ ಸಿನಿಮಾಗಳಲ್ಲಿ ಬಂದು ನಟಿಸಬೇಕು.

See also  ಕನ್ನಡ ಚಿತ್ರರಂಗವನ್ನೇ ಶೇಕ್ ಮಾಡಿದ ಶಾಕಿಂಗ್ ಸಾವುಗಳು..ಇವರ ಕೊನೆ ಕ್ಷಣಗಳು ಹೇಗಿತ್ತು ಗೊತ್ತಾ ?
[irp]


crossorigin="anonymous">