ಮೇಘನಾ ರಾಜ್ ಈಡಿ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ ಮನ ಮಿಡಿಯುವ ಮಾಹಿತಿ ..!! - Karnataka's Best News Portal

ಮೇಘನಾ ರಾಜ್ ಅವರು ಕೆಲವು ತಿಂಗಳ ನೋವಿನ ಬಳಿಕ ಮಗುವಿನ ಆಗಮನದಿಂದ ಸಂತೋಷದಿಂದ ಕಾಲ ಕಳೆಯುತ್ತಿದ್ದರೆ ಹಾಗೂ ಮೇಘನಾ ರಾಜ್ ಅವರ ಮುಂದಿನ ಜೀವನದ ಭರವಸೆ ಯನ್ನು ಹೆಚ್ಚಿಸಿ ಕೊಳ್ಳುತ್ತಿರುವಾಗಲೇ ಮೇಘನ ರಾಜ್ ಅವರಿಗೆ ಮತ್ತೊಂದು ನೋವಿನ ವಿಷಯವಾಗಿದೆ. ಹೌದು ಮೇಘನಾ ರಾಜ್ ಅವರ ತಾಯಿ ಪ್ರಮೀಳ ಜೋಷಾಯಿ ಅವರ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿರಿಯ ನಟ ಸುಂದರ್ ರಾಜ್ ಅವರ ಪತ್ನಿ ಪ್ರಮೀಳಾ ಜೋಷಾಯಿ ಅವರಿಗೆ ತೀವ್ರ ಅನಾರೋಗ್ಯದ ಕಾರಣ ಜಯನಗರದ ಎಕ್ಸ್.ಎಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿನ್ನೆ ತಡರಾತ್ರಿ ಪ್ರಮೀಳ ಜೋಷಾಯಿ ಅವರು ತೀವ್ರ ಅಸ್ವಸ್ಥರಾಗಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಮೂಲಗಳ ಪ್ರಕಾರ ಪ್ರಮೀಳಾ ಜೋಶಿಯಿ ಅವರಿಗೆ ಚೀನಾದ ಸೋಂಕಿನ ಲಕ್ಷಣಗಳು ತೆಗುಲಿದೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕೃತವಾಗಿ ಕುಟುಂಬ ದವರು ಇನ್ನೂ ಬಿಟ್ಟುಕೊಟ್ಟಿಲ್ಲ. ಇನ್ನೂ ಸುಂದರ ರಾಜ್ ಅವರು ಕೂಡ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಚಿರಂಜೀವಿ ಸರ್ಜಾರ ಅಗಲಿಕೆ ನಂತರ ಬಹಳಷ್ಟು ಮುಖ್ಯವಾಗಿ ಪ್ರಮೀಳ ಜೋಷಾಯಿ ಅವರಿಗೆ ಮೇಘನ ರಾಜ್ ಅವರ ಧೈರ್ಯ ತುಂಬುತ್ತಿದ್ದರು ಎಂದು ಈ ಹಿಂದೆ ಹೇಳಿಕೊಂಡಿದ್ದರು. ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮೇಘನಾ ರಾಜ್ ಹಾಗೂ ಮಗುವಿನ ಬಗ್ಗೆ ಹೆಚ್ಚು ಆರೈಕೆಯಲ್ಲಿ ತೊಡಗಿದ್ದರು ಬಹುಶಹ ಅತಿಯಾದ ಕೆಲಸದ ಕಾರಣದಿಂದಾಗಿ ಅನಾರೋಗ್ಯಕ್ಕೆ ಇಡಾಗಿದ್ದರೋ ಅಥವಾ ಮತ್ಯಾವುದೋ ಕಾರಣ ಇದೆಯೋ ಎಂಬುದು ಇನ್ನಷ್ಟು ತಿಳಿಯಬೇಕಾಗಿದೆ. ಇದೀಗ ಬಂದ ಮಾಹಿತಿಯ ಪ್ರಕಾರ ಮೇಘನ್ ರಾಜ್ ಮತ್ತು ಅವರ ಮಗುವಿಗೂ ಸಹ ಕೊರೊನಾ ಸೋಂಕು ತಗಲಿದೆ ಎಂದು ತಿಳಿದು ಬಂದಿದೆ ಆಸ್ಪತ್ರೆಯಲ್ಲಿ ದಾಖಲಾ ಗಿದ್ದಾರೆ ಇಡೀ ಕುಟುಂಬವೇ ಇದೀಗ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

By admin

Leave a Reply

Your email address will not be published. Required fields are marked *