ಕಪ್ಪು ಕಲೆ ಪಿಂಪಲ್ಸ್ ಮಾರ್ಕ್ ಬಂಗು ಇವೆಲ್ಲವೂ ಕೂಡ ಒಂದೇ ವಾರದಲ್ಲಿ ಕಡಿಮೆಯಾಗುತ್ತದೆ... - Karnataka's Best News Portal

ಇತ್ತೀಚಿನ ದಿನಗಳಲ್ಲಿ ಮುಖದ ಸೌಂದರ್ಯ ಸೂರ್ಯನ ಬಿಸಿಲಿನಿಂದ ಹಾಳಾಗುತ್ತಿದೆ ಅಷ್ಟೇ ಅಲ್ಲದೆ ನಾವು ಹೊರಗಡೆ ತಿರುಗಾಡುತ್ತಿರುವಾಗ ಧೂಳಿನಿಂದಲೂ ಕೂಡ ಈ ರೀತಿಯ ತೊಂದರೆಗಳು ಸಂಭವಿಸುತ್ತದೆ. ಈ ಎಲ್ಲಾ ಕಾರಣಗಳಿಂದ ನಮ್ಮ ತ್ವಚೆಯ ಹಾಳಾಗುತ್ತದೆ ಹಾಗಾಗಿ ಮನೆಯಲ್ಲಿ ಸಿಗುವಂತಹ ಕೆಲವೊಂದಷ್ಟು ಪದಾರ್ಥಗಳನ್ನು ಬಳಸಿಕೊಂಡು ಮುಖದಲ್ಲಿ ಇರುವಂತಹ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳುವ ವಿಧಾನವನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ‌ ಮೊದಲನೇದಾಗಿ ಇದಕ್ಕೆ ಬೇಕಾಗುವ ಪದಾರ್ಥಗಳು ಮೊಸರು, ಆಪಲ್, ಆರೆಂಜ್, ಬಾಳೆಹಣ್ಣು, ಕಲ್ಲು ಸಕ್ಕರೆ, ಚಂದನದ ಪುಡಿ, ಗ್ಲಿಸರಿನ್ ಇದಿಷ್ಟು ಬೇಕಾಗುವ ಪದಾರ್ಥಗಳು. ಮಾಡುವ ವಿಧಾನ ಮೊದಲನೇದಾಗಿ ಒಂದು ಮಿಕ್ಸಿ ಜಾರಿಗೆ 2 ಟೇಬಲ್ ಸ್ಪೂನ್ ಮೊಸರನ್ನು ಹಾಕಿ ಅದಕ್ಕೆ 2 ಪೀಸ್ ಆಪಲ್, ಅರ್ಧ ಆರೆಂಜ್, ಕಾಲು ಬಾಳೆಹಣ್ಣು ಇವೆಲ್ಲವನ್ನು ಕೂಡ ಸಿಪ್ಪೆ ಹಾಕಬೇಕು. ನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ಸಕ್ಕರೆಯನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಬೇಕು.

ಯಾವುದೇ ಕಾರಣಕ್ಕೂ ಇದಕ್ಕೆ ನೀರನ್ನು ಹಾಕಬೇಡಿ ನಿಮಗೆ ನೀರಿನ ಅವಶ್ಯಕತೆ ಇದ್ದರೆ ಆರೆಂಜ್ ರಸವನ್ನು ಹಾಕಿಕೊಳ್ಳಿ. ನಂತರ ಇದನ್ನು ಒಂದು ಬಟ್ಟಲಿಗೆ ಹಾಕಿ ಈಗ ಇದಕ್ಕೆ ಎರಡು ಟೇಬಲ್ ಸ್ಪೂನ್ ಚಂದನದ ಪುಡಿಯನ್ನು ಹಾಕಿ ಮತ್ತೊಮ್ಮೆ ಎಲ್ಲವನ್ನೂ ಮಿಕ್ಸ್ ಮಾಡಿ ನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ಗ್ಲೀಸರಿನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಒಂದು ಮಿಶ್ರಣವನ್ನು ಒಂದು ಗಾಜಿನ ಬಟ್ಟಲಿಗೆ ಹಾಕಿ 15 ದಿನಗಳವರೆಗೆ ಕೂಡ ನೀವು ಶೇಖರಣೆ ಮಾಡಿ ಇಟ್ಟುಕೊಳ್ಳಬಹುದು. ಈಗ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದು ಕೊಂಡು ಬಟ್ಟೆಯಲ್ಲಿ ವರಿಸಿಕೊಂಡು ತಯಾರಿಸಿದ ಮಿಶ್ರಣವನ್ನು ಸ್ವಲ್ಪ ತೆಗೆದುಕೊಂಡು ಮುಖಕ್ಕೆ ಹಚ್ಚಿ ಎಲ್ಲಾ ಕಡೆ ಮಸಾಜ್ ಮಾಡಿ ಐದು ನಿಮಿಷ ಹಾಗೆ ಬಿಟ್ಟು ನಂತರ ಮುಖವನ್ನು ತೊಳೆದುಕೊಳ್ಳಿ ರೀತಿ ಮಾಡಿದರೆ ನಿಮ್ಮ ಸ್ಕಿನ್ ತುಂಬಾನೇ ಗ್ಲೋಯಿಂಗ್ ಆಗಿ ಕಾಣುತ್ತದೆ‌.

By admin

Leave a Reply

Your email address will not be published. Required fields are marked *