ಕನ್ನಡದ ಹೊಚ್ಚ ಹೊಸ ಬಿಗ್ ಬಾಸ್ ಮನೆಗೆ ಹೋಗುವವರು ಯಾರು ಯಾರು ಗೊತ್ತಾ...? - Karnataka's Best News Portal

ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಬಿಗ್ ಬಾಸ್ ಶೋ ಈ ಬಾರಿ ನಡೆಯುತ್ತದೋ ಇಲ್ಲವೋ ಎಂಬ ಗೊಂದಲದಲ್ಲಿ ಇತ್ತು. ಮಹಾಮಾರಿ ಕೋರೋನಾ ಈ ರೀತಿಯ ಸ್ಥಿತಿಯನ್ನು ನಿರ್ಮಾಣ ಮಾಡಿದೆ ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಇತ್ತೀಚಿಗಷ್ಟೇ ಬಿಗ್ ಬಾಸ್-8 ರ ತಯಾರಿ ಪ್ರಗತಿಯಲ್ಲಿದೆ ಎಂದು ಕಲರ್ಸ್ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಆದಂತಹ ಪರಮೇಶ್ವರ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕಿಚ್ಚ ಸುದೀಪ್ ಜೊತೆ ಮಾತನಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಹೊಸ ಸೀಸನ್ ಪ್ರಾರಂಭದ ಹಂತದಲ್ಲಿ ಇದೆ ಎಂದು ಬರೆದು ಕೊಂಡಿದ್ದಾರೆ. ಈ ಮೂಲಕ ಪ್ರೇಕ್ಷಕರಿಗೆ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಸೀಸನ್ ಎಂಟು ನಡೆಯಲಿದೆ ಎಂಬುದನ್ನು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ‌. ಈಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಚಾಲನೆ ಸಿಕ್ಕಿದ್ದು ಎಂದು ಹೇಳಲಾಗುತ್ತಿದೆ ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಾರಿ ದೊಡ್ಡಮನೆಗೆ ಹೋಗುವವರ ಹೆಸರು ಹರಿದಾಡುತ್ತಿದೆ.

ಸೆಲೆಬ್ರೇಟಿ ಗಳ ಅಥವಾ ಕಾಮನ್ ಪೀಪಲ್ಸ್ ಇರುತ್ತಾರೆ ಎಂಬುದು ಗೊತ್ತಿಲ್ಲ. ಆದರೆ ಜೊತೆ ಜೊತೆಯಲ್ಲಿ ಸೀರಿಯಲ್ ನಲ್ಲಿ ನಟಿಸುತ್ತಿರುವ ಆರ್ಯವರ್ಧನ್ ಹಾಗೂ ನ್ಯೂಸ್ ರೀಡರ್ ರಾಧಾ ಹಿರೇಗೌಡ, ನಿತ್ಯಾನಂದ, ಟಿಕ್ ಸ್ಟಾರ್ ಆಗಿರುವಂತಹ ಸೋನು ಗೌಡ, ಬಿಂದು ಗೌಡ ಸೇರಿದಂತೆ ಹಲವಾರು ಜನರು ಬರಬಹುದು ಸೋಶಿಯಲ್ ಮೀಡಿಯಾದಲ್ಲಿ ಇವರ ಹೆಸರುಗಳು ಹರಿದಾಡುತ್ತಿದೆ. ಇನ್ನು ಈಗಾಗಲೇ ಬಿಗ್ ಬಾಸ್ ತೆಲುಗು, ತಮಿಳು, ಹಿಂದೂ, ಶೋಗಳು ಆರಂಭವಾಗಿದ್ದು ಪ್ರೇಕ್ಷಕರಿಗೆ ಮನರಂಜನೆಯನ್ನು ಕೊಡುತ್ತಿದ್ದಾರೆ. ಇನ್ನೂ ಕೊರೋನಾ ಮದ್ಯ ಸರಿಯಾದ ಕ್ರಮಗಳನ್ನು ಕೈಗೊಂಡು ಮತ್ತು ಸುರಕ್ಷಿತವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಮೊನ್ನೆ ತಾನೇ ಕಿಚ್ಚ ಸುದೀಪ್ ತೆಲುಗು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಸಂಚಲನವನ್ನು ಮೂಡಿಸಿದ್ದಾರೆ.

By admin

Leave a Reply

Your email address will not be published. Required fields are marked *