ಕನ್ನಡದ ಹಲವಾರು ಸ್ಟಾರ್ ನಟ ನಟಿಯರಲ್ಲಿ ಮೇಘನ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಜೋಡಿ ಕೂಡ ಒಂದಾಗಿತ್ತು. ಇವರು ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿದರು ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು ಒಬ್ಬರನ್ನೊಬ್ಬರು ಇಷ್ಟ ಪಟ್ಟು ಮದುವೆಯಾಗಿದ್ದರು. ಆದರೆ ವಿಧಿಯಾಟ ಎಂಬಂತೆ ಮೇಘನ ರಾಜ್ ಅವರು ಗರ್ಭಿಣಿಯಾಗಿದ್ದಾಗ ಚಿರಂಜೀವಿ ಸರ್ಜಾ ಅವರು ಇಹಲೋಕವನ್ನು ತ್ಯಜಿಸಿದರು. ಚಿರಂಜೀವಿ ಅವರು ಇಹಲೋಕವನ್ನು ತ್ಯಜಿಸಿದಾಗ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಎರಡು ಕುಟುಂಬವೂ ನೋವಿನಲ್ಲಿ ಮುಳುಗಿತು. ಆದರೆ ಮೇಘನಾ ರಾಜ್ ಅವರಿಗೆ ಗಂಡು ಮಗು ಜನಿಸಿದ ಕಾರಣ ಚಿರಂಜೀವಿ ಸರ್ಜಾ ಅವರು ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಎರಡು ಕುಟುಂಬಗಳು ಕೂಡ ಖುಷಿ ಪಟ್ಟಿದ್ದರು.

ಆದರೆ ಇದಾದ ಒಂದು ತಿಂಗಳ ನಂತರ ಮೇಘನ ರಾಜ್ ಮತ್ತು ಅವರ ಮಗುವಿಗೆ ಹಾಗೂ ತಂದೆ ಸುಂದರ್ ರಾಜ್ ಮತ್ತು ತಾಯಿ ಪ್ರಮೀಳಾ ಜೋಷಾಯ್ ಗೆ ಚೀನಾದ ಮಹಾಮಾರಿ ಒಕ್ಕರಿಸಿತು ಈ ವೇಳೆಯಲ್ಲಿ ಮೇಘನ ರಾಜ್ ಮತ್ತು ಅವರ ಮಗು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಸುಂದರ್ ರಾಜ್ ಮತ್ತು ಪ್ರಮೀಳ ಜೋಷಾಯ್ ಗೆ ವಯಸ್ಸಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು ಇದೀಗ ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಮೇಘನ ರಾಜ್ ರವರು ಇತ್ತೀಚಿಗೆ ಕೆಲವು ದಿನಗಳಿಂದ ಸೋಷಿಯಲ್ ಮಿಡಿಯಾದಲ್ಲಿ ಸದಾಕಾಲ ಸಕ್ರಿಯರಾಗಿದ್ದು ಇಡೀ ಕುಟುಂಬಕ್ಕೆ ಮಹಾಮಾರಿ ಕಾಯಿಲೆ ಬಂದಿದ್ದನ್ನು ಅವರೇ ಸ್ವತಃ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

By admin

Leave a Reply

Your email address will not be published. Required fields are marked *