ನಮ್ಮ ದೇಹದಲ್ಲಿ ಮುಖ್ಯ ಅಂಗಗಳಲ್ಲಿ ಲಿವರ್ ಸಹ ಒಂದು ಮುಖ್ಯ ಅಂಗವಾಗಿದೆ ದೇಹದ ಎಲ್ಲಾ ಅಂಗಗಳು ಕೆಲಸಕ್ಕೆ ಹೋಲಿಸಿದರೆ ಎಲ್ಲಾ ಅಂಗಗಳ ಕೆಲಸಕ್ಕಿಂತ ನೂರುಪಟ್ಟು ಜಾಸ್ತಿ ಲಿವರ್ ಕೆಲಸ ಮಾಡುತ್ತದೆ. ಲಿವರ್ ಪ್ರೋಪರ್ ಆಗಿ ಕೆಲಸ ಮಾಡಲಿಲ್ಲ ಅಂದರೆ ತುಂಬಾ ಕಾಯಿಲೆಗಳು ಬರಬಹುದು. ನಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಿ ನಮ್ಮ ದೇಹವನ್ನು ಆರೋಗ್ಯವಾಗಿ ಇರುವಂತೆ ಮಾಡುತ್ತದೆ. ನಮ್ಮ ದೇಹಕ್ಕೆ ಅವಶ್ಯಕವಾಗಿ ಬೇಕಾಗಿರುವ ಆರೋಗ್ಯವನ್ನು ನಾವು ಆರು ತಿಂಗಳಿಗೊಮ್ಮೆ ಈ ರೀತಿ ಮನೆಮದ್ದು ಮಾಡಿಕೊಂಡು ಕುಡಿಯುವುದರಿಂದ ಲಿವರ್ ಅನ್ನು ಫ್ರೇಶ್ ಮಾಡಬಹುದು ಅದು ಇನ್ನೂ ಚೆನ್ನಾಗಿ ಆರೋಗ್ಯವಾಗಿ ಇರುತ್ತದೆ. ಮೊದಲಿಗೆ 9 ಅಮೃತಬಳ್ಳಿ ಎಲೆಗಳನ್ನು ತೆಗೆದುಕೊಂಡು ಆ ಎಲೆಗಳನ್ನು ಚೆನ್ನಾಗಿ ತೊಳೆದು ಚೆನ್ನಾಗಿ ಜಜ್ಜಿ ಇದರ ರಸವನ್ನು ತೆಗೆದುಕೊಳ್ಳಿ. ನಂತರ ಒಂದು ಸೋರೇ ಕಾಯಿ ತೆಗೆದುಕೊಂಡು ಅದನ್ನು ಮಿಕ್ಸಿಗೆ ಹಾಕಿ ಅದರಿಂದ ಒಂದು ಗ್ಲಾಸ್ ಜ್ಯೂಸ್ ಮಾಡಿಕೊಳ್ಳಿ.
ಈಗ ಪಾತ್ರೆಗೆ ಅಮೃತಬಳ್ಳಿ ರಸವನ್ನು 30ml ತೆಗೆದುಕೊಂಡು, ಒಂದು ಗ್ಲಾಸ್ ಸೋರೆ ಕಾಯಿ ಜ್ಯೂಸ್ ಅದಕ್ಕೆ ಹಾಕಿ ನಂತರ ಕೊತ್ತಂಬರಿ ಕಾಳಿನ ಪೌಡರ್ 2 ಟೇಬಲ್, ಸ್ಪೂನ್ 1 ಟೇಬಲ್ ಸ್ಪೂನ್ ಅರಿಶಿಣದ ಪುಡಿ, 1 ಟೇಬಲ್ ಸ್ಪೂನ್ ನಿಂಬೆ ಹಣ್ಣಿನ ರಸ, ಬ್ಲಾಕ್ ಸಾಲ್ಟ್ ರುಚಿಗೆ ತಕ್ಕಷ್ಟು, ಇವೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಡ್ರಿಂಕ್ಸ್ ತೆಗೆದುಕೊಳ್ಳುವ ಎರಡು ದಿನದ ಮುಂಚೆ ಲೈಟ್ ಫುಡ್ ಅನ್ನು ತೆಗೆದುಕೊಳ್ಳಬೇಕು. ನಂತರ ಬೆಳ್ಳಗೆ ಎದ್ದು ತಿಂಡಿ ತಿನ್ನುವ ಮುಂಚೆ ಈ ಒಂದು ಜ್ಯೂಸ್ ಅನ್ನು ಸೇವಿಸಬೇಕು ಈ ಅಭ್ಯಾಸವನ್ನು ಆರು ತಿಂಗಳಿಗೊಮ್ಮೆ ಎರಡರಿಂದ ಮೂರು ದಿನ ಮಾಡಿದರೆ ಒಳ್ಳೆಯದು. ನಿಮ್ಮ ಆರೋಗ್ಯವೃದ್ಧಿಯಾಗುತ್ತದೆ ನಿಶ್ಯಕ್ತಿ ಕಮ್ಮಿಯಾಗುತ್ತದೆ, ಎಲ್ಲಾ ರೋಗಗಳಿಂದ ಮುಕ್ತವನ್ನಾಗಿ ಮಾಡಲು ಈ ಮನೆಮದ್ದನ್ನು ನೀವು ಆರು ತಿಂಗಳಿಗೊಮ್ಮೆ ಸೇವಿಸಬೇಕಾಗುತ್ತದೆ.
