2021 ಸ್ವಂತ ಮನೆ ಇಲ್ಲದವರಿಗೆ ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಇಂದೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ... - Karnataka's Best News Portal

ಸ್ವಂತ ಮನೆ ಇಲ್ಲದವರಿಗೆ, ಸ್ವಂತ ಜಾಗ ಇಲ್ಲದವರಿಗೆ ಮತ್ತು ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಇದೀಗ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಬಂದಿದ್ದು ,2,60,000 ರೂಪಾಯಿಗಳನ್ನು ಸಹಾಯ ಧನವನ್ನಾಗಿ ನೀಡುತ್ತಿದ್ದಾರೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಮೂಲಕ ಹಣವನ್ನು ಪಡೆಯಬಹುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದಂತಹ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಇಲ್ಲದವರಿಗೆ, ಸ್ವಂತ ಇಲ್ಲದವರಿಗೆ, ಹಾಗೂ ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಇದೀಗ ಮನೆಯನ್ನು ನಿರ್ಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2021 ರ ಜನವರಿಯಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಯೋಜನೆಗೆ ಗ್ರಾಮೀಣಭಾಗದ ಜನರು ಮತ್ತು ನಗರ ಪ್ರದೇಶದ ಜನಸಾಮಾನ್ಯರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕನಿಷ್ಠ 21 ವರ್ಷ ಹಾಗೂ ಗರಿಷ್ಠ 55 ವರ್ಷದ ಒಳಗಿನ ಅಭ್ಯರ್ಥಿಗಳು ಈ ಒಂದು ಯೋಜನೆಯನ್ನು ಪಡೆಯಬಹುದಾಗಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ, ಯಾವುದೇ ವರ್ಗದ ತಾರತಮ್ಯ ಇರುವುದಿಲ್ಲ ವಾರ್ಷಿಕ ಆದಾಯ 5 ಲಕ್ಷದ ಒಳಗೆ ಇರಬೇಕು, ಎಸ್ಸಿ, ಎಸ್ಟಿ ಸಾಮಾನ್ಯ ವರ್ಗ, 2ಎ, 2ಬಿ, ಪ್ರವರ್ಗ ಮತ್ತು ಜನರಲ್ ಕ್ಯಾಟಗಿರಿ ವರ್ಗದವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಇದಕ್ಕೆ ಬೇಕಾಗುವ ದಾಖಲಾತಿಗಳು ಆಧಾರ್ ಕಾರ್ಡ್, ಬಿಪಿಎಲ್ ರೇಷನ್ ಕಾರ್ಡ್, ಹಾಗೂ ಕ್ಯಾಸ್ಟ್ ಮತ್ತು ಇನ್ ಕಮ್ ಸರ್ಟಿಫಿಕೇಟ್, ಎರಡು ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಇದ್ದರೆ ಸಾಕು.

By admin

Leave a Reply

Your email address will not be published. Required fields are marked *