ಜೀ ಕನ್ನಡದಿಂದ ಹನುಮಂತನಿಗೆ ಸಿಕ್ಕಿದ್ದೇನು? ಕೊನೆಗೂ ಸ್ಪಷ್ಟನೆ ನೀಡಿದ ಹನುಮಂತು. - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ಬೆಳಿಗ್ಗೆ ಯಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್ ಆಗಿತ್ತು.. ಸರಿಗಮಪ ಖ್ಯಾತಿಯ ಹನುಮಂತ ನಿಗೆ ಏನೂ ಸಿಕ್ಕಿಲ್ಲ.. ಕ್ಯಾಮರಾ ಮುಂದೆ ಮಾತ್ರ ಎಲ್ಲವನ್ನು ಕೊಟ್ಟ ರೀತಿ‌ ಇತ್ತು.. ಬಹುಮಾನವಾಗಿ ಕೊಟ್ಟ ಮನೆಯೂ ಕೂಡ ರಿಜಿಸ್ಟ್ರೇಷ ನ್ ಆಗಿಲ್ಲ ಎಂದಿದ್ದನು.ಆ ಬಗ್ಗೆ ದೊಡ್ಡ ಸುದ್ದಿಯಾಗಿ ರಿಯಾಲಿಟಿ ಶೋ ಗಳೆಲ್ಲಾ ಇಷ್ಟೇ ಎನ್ನುವಂತಾಗಿತ್ತು ಆದರೀಗ ಖುದ್ದು ಹನುಮಂತ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಜೀ ಕನ್ನಡ ವಾಹಿನಿ ವೀಡಿಯೋವೊಂದನ್ನು ಬಿಡುಗಡೆ ಮಾಡಿದೆ.ಗೋಕರ್ಣ ಗೆ ಪ್ರವಾಸ ತೆರಳಿ ಮರಳಿ ಬರುವಾಗ ಕುಮುಟಾದ ಒಂದು ಬೇಕರಿ ಬಳಿ ತಿಂಡಿ ತೆಗೆದುಕೊಳ್ಳಲು ಹೋದಾಗ ಹನುಮಂತನನ್ನು ಮಾತನಾಡಿಸಿದವರಿಗೆ ಪ್ರತಿಕ್ರಿಯೆ ನೀಡಿದ್ದ ಹನುಮಂತ “ಜೀ ಕನ್ನಡದಲ್ಲಿ ಹಾಡಲು ಅವಕಾಶ ಸಿಕ್ಕಿದ್ದು ಹೊಸ ಅನುಭವ ಎಲ್ಲರೂ ನನ್ನನ್ನು ಗುರುತಿಸುತ್ತಾರೆ.. ಇದು ಸಂತೋಷ ಆದರೆ ಬೆಲೆ ಮಾತ್ರ ಸಿಗಲಿಲ್ಲ ಸರಿಗಮಪದಲ್ಲಿ ರನ್ನರ್ ಅಪ್ ಆದ ನನಗೆ ಬೆಂಗಳೂರಿನಲ್ಲಿ ಮನೆ ಕೊಡಿಸುತ್ತೇನೆ ಎಂದಿದ್ದರು ಆದರೆ ಈಗಲೂ ಅದರ ರಿಜಿಸ್ಟ್ರೇಷನ್ ಆಗಿಲ್ಲ ಎಲ್ಲವೂ ಕ್ಯಾಮರಾ ಮುಂದೆ ಮಾತ್ರ ಹೇಳುವ ಆಶ್ವಾಸನೆ ಎಮಿಸುತ್ತದೆ ನಮ್ಮ ಕಲೆಯನ್ನು ಮೆಚ್ಚಿ ಪ್ರೋತ್ಸಾಹ ನೀಡಿದರೆ ಸಾಕು ಆದರೆ ಅದೆಲ್ಲವನ್ನು ಬಿಟ್ಟು ಕ್ಯಾಮರಾ ಮುಂದೆ ಆಸೆ ಹುಟ್ಟಿಸುತ್ತಾರೆ.ಹೀಗೆ ಮಾತನಾಡಿದ್ದರು ಇದನ್ನು ಅಲ್ಲಿಯ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿತ್ತು ಇದು ಸಾಮಾಜಿಕ ಜಾಲತಾಣದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು.ಈಗ ಇದರ ಬಗ್ಗೆ ಖುದ್ದು ಹನುಮಂತ ಸ್ಪಷ್ಟನೆ ನೀಡಿದ್ದು ಜೀ ಕನ್ನಡ ವಾಹಿನಿ ವೀಡಿಯೋ


ಅಪ್ಲೋಡ್ ಮಾಡಿದೆ.. “ನಮಸ್ಕಾರ ಎಲ್ಲಾ ಕನ್ನಡ ಜನತೆಗೆ ನಮಸ್ಕಾರ ನಾನು ನಿಮ್ಮ ಹನುಮಂತ ವಿಷಯ ಏನಪ್ಪಾ ಅಂದ್ರೆ ಇವತ್ತು ಬೆಳಿಗ್ಗೆ ಒಂದು ನ್ಯೂಸ್ ಪೇಪರ್ ನಲ್ಲಿ ಬಂದ ಸುದ್ದಿ ಕೇಳಿದೆ ಅದ್ಯಾವುದೂ ಸತ್ಯ ಅಲ್ಲ ಆತರ ಏನು ಆಗಿಲ್ಲ ಜೀ ಕನ್ನಡ ವತಿಯಿಂದ ಏನೇನು ಸಿಗಬೇಕೋ ಎಲ್ಲಾ ಸಿಕ್ಕಿದೆ ನಾನು ಅವತ್ತು ಒಂದನೇ ತಾರೀಕು ಗೋಕರ್ಣಗೆ ಹೋಗಿದ್ದೆ ಬರುವಾಗ ಕುಮುಟಾ ಬಳಿ ಒಂದು ಬೇಕರಿ ಇತ್ತು.ಆ ಬೇಕರಿ ಹತ್ರ ನಿಲ್ಲಿಸಿ ನೀರು ತಗೋಂಡು ಐಸ್ ಕ್ರೀಮ್ ತಿಂದು ಕೇಕ್ ತಿಂದು ಬರುವಾಗ ಅವರೆಲ್ಲಾ ಸೆಲ್ಫಿ ತಗೊಂಡ್ರು ಎಲ್ಲಾ ಚನಾಗೇ ಮಾತನಾಡಿದ್ರು ಆದರೆ ಈಗ ಈ ರೀತಿ ಸುದ್ದಿ ಹಾಕಿದ್ದಾರೆ. ಅವರು ಯಾಕ್ ಹಾಕಿದ್ರು ಅಂತ ಗೊತ್ತಿಲ್ಲ ಆ ಸುದ್ದಿ ಕೇಳಿ ಬಹಳ ಬೇಜರಾಯ್ತು ನನ್ನ ಹಾಗೂ ಜೀ ಕನ್ನಡ ವಾಹಿನಿಯ ಒಡನಾಟ ಬಹಳ ಚೆನ್ನಾಗಿದೆ ನಾನ್ ಮಾತ್ರ ಅಲ್ಲ ಇಲ್ಲಿ ಬರೋ ಎಲ್ಲಾ ಸ್ಪರ್ಧಿಗಳನ್ನು ಸಹ ಅವರು ಬಹಳ ಚೆನ್ನಾಗಿ ನೋಡ್ಕೊಳ್ತಾರೆ ದಯವಿಟ್ಟು ಈ ರೀತಿ ಸುದ್ದಿ ಹಾಕಬೇಡಿ ಎಲ್ಲರಿಗೂ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *