ಚಿರಂಜೀವಿ ಸರ್ಜಾ ಹಾಗು ಮೇಘನಾ ರಾಜ್​ ಪುತ್ರನಿಗೆ ರಾಯನ್​ ರಾಜ್​ ಸರ್ಜಾ ಎಂದು ಹೆಸರು ಇಡಲಾಗಿದೆ. ನಾಮಕರಣದ ಬಳಿಕ ಮೊದಲ ಬಾರಿಗೆ ಕುಟುಂಬದವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮೇಘನಾ ರಾಜ್​ ತಾಯಿ ಪ್ರಮೀಳಾ ಜೋಷಾಯ್​ ಅವರು ಕೆಲವು ವಿಚಾರಗಳ ಬಗ್ಗೆ ಅಸಮಾಧಾನ ತೋಡಿಕೊಂಡರು. ನನ್ನ ಮಗಳು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ನಾವೇ ಅವಳನ್ನು ನೋಡಿ ಕೊಂಡಿರೋದು. ಬೇರೆ ಯಾರೋ ನೋಡಿಕೊಳ್ಳುವುದು ಬೇಕಾಗಿಯೂ ಇಲ್ಲ. ಇರುವ ವಿಷಯವನ್ನು ನಾನು ಹೇಳುತ್ತಿದ್ದೇನೆ ಎಂದು ಅವರು ನೇರವಾಗಿ ಮಾತು ಆರಂಭಿಸಿದರು. ಮೇಘನಾಳ ಎಲ್ಲ ಬೇಕು ಬೇಡ ಗಳ ಬಗ್ಗೆ ನಮಗೆ ಗೊತ್ತಿದೆ. ಅವರು ಕೊಟ್ರು, ಇವರು ಕೊಟ್ರು, ಅವರು ನೋಡಿಕೊಳ್ತಾರೆ, ಇವರು ನೋಡಿಕೊಳ್ತಾ ಎಂದು ಸುಮ್ಮನೆ ಏನೇನೋ ಪ್ರಚಾರ ಆಗುತ್ತಿದೆ. ಅದು ನನ್ನ ಮನಸ್ಸಿಗೆ ತುಂಬ ನೋವಾಯಿತು.

ನಮಗೆ ಪ್ರಚಾರ ಬೇಕಿಲ್ಲ ನಮಗೆ ಯಾರೂ ಏನೂ ಕೊಟ್ಟಿಲ್ಲ. ನಮ್ಮ ದನ್ನು ನಾವು ನೋಡಿಕೊಂಡು ಹೋಗುತ್ತಿದ್ದೇವೆ ಎಂದು ಪ್ರಮೀಳಾ ಜೋಷಾಯ್​ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸುಂದರ್​ ರಾಜ್​ ವಿವರಣೆ ನೀಡಿದರು. ಇದೆಲ್ಲ ಯೂಟ್ಯೂಬ್​ನ ಅವಾಂತ ರಗಳು. ಅದು ಇತ್ತೀಚೆಗೆ ಜಾಸ್ತಿ ಆಗಿದೆ ಯೂಟ್ಯೂಬ್​ನಲ್ಲಿ ಬರುವು ದನ್ನು ಜನರು ನಂಬುತ್ತಾರೆ ಕೆಲವರು ನಂಬುವುದಿಲ್ಲ ಎಂದು ಅವರು ಹೇಳಿದರು. ಇದನ್ನೆಲ್ಲ ಹೇಳಿಕೊಳ್ಳಲು ಇದು ಸಮಯವಲ್ಲ ಎಂದು ಮೇಘನಾ ಸುಮ್ಮನಾದರು. ಮಾಧ್ಯಮಗಳ ಮುಂದೆ ಮಾತನಾಡುವಾಗ ಅವರು ಚಿರಂಜೀವಿ ಅವರನ್ನು ನೆನೆಸಿಕೊಂಡು ಭಾವುಕರಾಗಿ ಕಣ್ಣೀರು ಇಟ್ಟಿದ್ದಾರೆ. ಈಗ ನಮ್ಮ ಮಗಳ ಹೊಣೆ ನಮ್ಮದೇ ಆಗಿದೆ ಎಂದು ಸುಂದರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರು

By admin

Leave a Reply

Your email address will not be published. Required fields are marked *