ಗಣಿತದಲ್ಲಿ 3 ಮಾರ್ಕ್ಸ್ ಆದರೆ ದುಡಿಯುತ್ತಿರುವುದು ಕೋಟಿಗಟ್ಟಲೆ ಹೇಗೆ ಗೊತ್ತಾ..?

ಸಾಮಾನ್ಯವಾಗಿ ನಾವು ಉತ್ತಮವಾದ ಜೀವನವನ್ನು ನಡೆಸಬೇಕಾದರೆ ಹಣ ಸಂಪಾದನೆ ಮಾಡಬೇಕಾದರೆ ವಿದ್ಯೆ ಮುಖ್ಯ ಅಂತ ಹೇಳುತ್ತೇವೆ. ಆದರೆ ಕೆಲವೊಮ್ಮೆ ವಿದ್ಯೆಗಿಂತ ಬುದ್ಧಿವಂತಿಕೆ ಹಾಗೂ ಶ್ರಮವಂತಿಕೆ ಮುಖ್ಯ ಎಂದು ತಿಳಿಸಿಕೊಟ್ಟಿದ್ದಾರೆ ಈ ಮಾಡ್ರನ್ ರೈತ. ಹೌದು ರೈತನ ಆಗಿದ್ದರೂ ಕೂಡ ಕೋಟಿಗಟ್ಟಲೆ ಲಾಭವನ್ನು ಪಡೆಯುತ್ತಿದ್ದಾರೆ ಈ ವ್ಯಕ್ತಿ. ಅಷ್ಟಕ್ಕೂ ಈ ವ್ಯಕ್ತಿ ಯಾವ ಮೂಲದಿಂದ ಕೋಟಿಗಟ್ಟಲೆ ಲಾಭವನ್ನು ಪಡೆಯುತ್ತಿದ್ದಾರೆ ಅಂತ ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು ಸಾಮಾನ್ಯವಾಗಿ ರೈತರ ಸ್ಥಿತಿ ಯಾವಾಗಲೂ ಕೂಡ ಕಷ್ಟಕರವಾಗಿರುತ್ತದೆ ಅವರಿಗೆ ಲಾಭಕ್ಕಿಂತಲೂ ಹೆಚ್ಚಾಗಿ ನಷ್ಟವಾಗುವ ಸಂಭವವೇ ಹೆಚ್ಚು ಅಂತ ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ರೈತ ಮಾತ್ರ ಕೃಷಿ ಇಂದ ಕೋಟಿಗಟ್ಟಲೆ ದುಡಿಯುತ್ತಿದ್ದಾನೆ ಅಂದರೆ ಎಂಥವರಿಗಾದರೂ ಆಶ್ಚರ್ಯ ಹಾಗೇ ಆಗುತ್ತದೆ ಅಲ್ಲವೇ. ಹೌದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅನಿಲ್ ಎಂಬ ವ್ಯಕ್ತಿ ತಮ್ಮ ತೋಟದಲ್ಲಿಯೇ ಹಲಸಿನಹಣ್ಣಿನ ಕೃಷಿಯನ್ನು ಮಾಡಿ ವರ್ಷಕ್ಕೆ ಕೋಟಿಗಟ್ಟಲೆ ಲಾಭ ಪಡೆಯುತ್ತಿದ್ದಾರೆ.

ಸಾಮಾನ್ಯವಾಗಿ ಹಲಸಿನಹಣ್ಣು ಸೀಸನ್ ನಲ್ಲಿ ಬಿಡುವಂತಹ ಹಣ್ಣಾಗಿದೆ ಆದರೆ ಅನಿಲ್ ಅವರು ತಮ್ಮ ಜಾಗದಲ್ಲಿ ಮಾಡಿರುವಂತಹ ಈ ಕೃಷಿ ಪದ್ಧತಿಯಲ್ಲಿ ಕೇವಲ ಸೀಸನ್‌ ನಲ್ಲಿ ಮಾತ್ರವಲ್ಲದೆ ವರ್ಷದ 365 ದಿನವೂ ಕೂಡ ಹಲಸಿನ ಹಣ್ಣನ್ನು ಇಲ್ಲಿ ಕಾಣಬಹುದಾಗಿದೆ. ಈ ಹಣ್ಣುಗಳು ಕೇವಲ ಕರ್ನಾಟಕ ಮತ್ತು ಭಾರತ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡ ರಪ್ತು ಆಗುತ್ತಿರುವುದು ನಿಜಕ್ಕೂ ವಿಶೇಷ ಅಂತಾನೇ ಹೇಳಬಹುದು. ಅನಿಲ್ ಅವರ ತೋಟದಲ್ಲಿ ಹಲಸಿನ ಹಣ್ಣುಗಳು ಹಾಗೂ ಅದರ ಸಸಿಗಳು ಹಾಗೂ ಈ ಒಂದು ಕೃಷಿಯನ್ನು ಮಾಡುವುದಕ್ಕೆ ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಿದ್ದಾರೆ. ನೀವೇನಾದರೂ ಕೃಷಿಯಲ್ಲಿ ಆಸಕ್ತಿ ಹೊಂದಿದ್ದರೆ ಹಾಗೂ ಅಧಿಕ ಲಾಭವನ್ನು ಪಡೆಯಬೇಕು ಅಂತ ಅಂದುಕೊಂಡಿದ್ದರೆ ಈ ಕೆಳಗಿನ ವಿಡಿಯೋ ನೋಡಿ ಎಲ್ಲ ಮಾಹಿತಿ ತಿಳಿಯುತ್ತದೆ

By admin

Leave a Reply

Your email address will not be published. Required fields are marked *