ಮಕರ ರಾಶಿಯವರಿಗೆ ಕಾಲಿಗೆ ಮಹಾ ಕಾಳಸರ್ಪದೋಷ. ಈ ಕಾರಣದಿಂದಲೇ ಇನ್ನು ಮೂರು ತಿಂಗಳು ನಿಮ್ಮನ್ನು ಕಾಡಲಿದೆ ಬಹಳ ಪರೀಕ್ಷೆಗಳು. ಇದಕ್ಕಿರುವ ಪರಿಹಾರವಾದರೂ ಏನು?
ಮಕರ ರಾಶಿಯವರಿಗೆ ಕಾಡುತ್ತಿದೆ ಮಹಾ ಕಾಳಸರ್ಪದೋಷ. ಮಕರ ರಾಶಿಯವರು ಹೇಳುವ ಸಾಮಾನ್ಯ ಸಮಸ್ಯೆ ಎಂದರೆ ನಮ್ಮ ರಾಶಿಯಲ್ಲಿ ಗುರು ಇದ್ದರೂ ಸಹ ನಮಗೆ ಮದುವೆ ಆಗುತ್ತಿಲ್ಲ, ಉದ್ಯೋಗ ಸಿಗುತ್ತಿಲ್ಲ, ಕೈಗೊಂಡ ಕಾರ್ಯಗಳು ಪೂರ್ಣಗೊಳ್ಳುತ್ತಿಲ್ಲ, ವ್ಯಾಪಾರ ನಷ್ಟವಾಗುತ್ತಿದೆ ಎಂದು. ಯಾಕೆಂದರೆ ಇದಕ್ಕೆಲ್ಲ ಕಾರಣ ಅವರ ರಾಶಿಗೆ ಮಹಾ ಕಾಳ ಸರ್ಪ ದೋಷ ಕಾಡುತ್ತಿದೆ . ಮಹಾ ಕಾಳಸರ್ಪ ದೋಷ ಎಂದರೆ ಆದಿತ್ಯಾದಿ ಸಪ್ತ ಗ್ರಹಗಳು ರಾಹು ಕೇತುವಿನ ನಡುವೆ ಇರುವುದು ಈ ರೀತಿ ರಾಹು ಮತ್ತು ಕೇತುಗಳ ನಡುವೆ ಸೂರ್ಯ, ಚಂದ್ರ, ಬುಧ, ಕುಜ, ಮಂಗಳ, ಶುಕ್ರ ಹಾಗೂ ಶನಿ ಗ್ರಹಗಳು ಇದ್ದರೆ ಅದನ್ನು ಮಹಾ ಕಾಳ ಸರ್ಪ ದೋಷ ಯೋಗ ಎನ್ನುತ್ತಾರೆ. ಈ ರೀತಿ ಇರುವವರಿಗೆ ಸರ್ವ ಸಂಪತ್ತು ಕೂಡ ನಾಶವಾಗುತ್ತದೆ ಎಂದು ಹೇಳುತ್ತಾರೆ.
ಈ ಕಾರಣದಿಂದಲೇ ನಿಮಗೆ ಮದುವೆ ಲೇಟಾಗಿ ಆಗಬಹುದು ಅಥವಾ ಸಂಸಾರದಲ್ಲಿ ಸಮಸ್ಯೆ ಇರಬಹುದು ಅಥವಾ ವ್ಯಾಪಾರಗಳು ನಷ್ಟವಾಗಬಹುದು, ಉದ್ಯೋಗದಲ್ಲಿ ಸಮಸ್ಯೆಯಾಗಬಹುದು, ಆರೋಗ್ಯದಲ್ಲಿ ಸಮಸ್ಯೆ ಬರಬಹುದು ಈ ರೀತಿ ಸರ್ವಸಂಪತ್ತಿಗೂ ತೊಂದರೆ ಕೊಡುತ್ತದೆ ಈ ದೋಷ. ಎಲ್ಲರೂ ಕೇಳುವ ಒಂದು ಸಾಮಾನ್ಯ ಪ್ರಶ್ನೆ ಎಂದರೆ ಮೊದಲು ಯಾಕೆ ಹೀಗಿರಲಿಲ್ಲ ಈಗಲೇ ಯಾಕೆ ಇದು ಹೆಚ್ಚು ಎಂದು ಇದಕ್ಕೆಲ್ಲ ಕಾರಣ ಇಷ್ಟೇ. ನಭೋ ಮಂಡಲದಲ್ಲಿ ಈಗ ಗೋಚಾರ ರೀತಿಯಲ್ಲಿ ಕಾಳಸರ್ಪಯೋಗ ನಡೆಯುತ್ತಾ ಇದೆ. ಈಗಾಗಲೇ ಆರಂಭಗೊಂಡಿರುವ ಇದು ಏಪ್ರಿಲ್ 30ರ ತನಕ ಇದೆ. ಬುಧ ಗ್ರಹವು ವೃಷಭ ರಾಶಿಗೆ ಬರುವವರೆಗೂ ಇದೆ. ರಾಹು ಮೇಷಕ್ಕೆ ಬರುವಾಗ ಬುಧನು ವೃಷಭ ರಾಶಿಗೆ ಹೋಗುತ್ತಾರೆ. ಅಲ್ಲಿಯವರೆಗೂ ನಭೋಮಂಡಲದಲ್ಲಿ ಈ ಮೂರು ತಿಂಗಳು ಈ ರೀತಿ ನಡೆಯುತ್ತಿರುತ್ತದೆ. ಆದಕಾರಣ ಮಕರ ರಾಶಿಯವರಿಗೆ ಎಲ್ಲಿಯವರೆಗೆ ಗುರು ಬಲ ಇರುತ್ತದೆಯೋ ಅಲ್ಲಿಯವರೆಗೂ ಈ ಮೂರು ತಿಂಗಳುಗಳ ಕಾಲ ಮಹಾಕಾಳಸರ್ಪದೋಷ ಯೋಗದ ಪ್ರಭಾವ ಸಹ ಇರುತ್ತದೆ.
ನಿಮ್ಮ ವೈಯಕ್ತಿಕ ಜಾತಕದಲ್ಲಿರುವ ಸರ್ಪದೋಷ ಹಾಗೂ ನಭೋ ಮಂಡಲದಲ್ಲಿ ಈಗ ಇರುವ ಸರ್ಪದೋಷ ಎರಡು ಸೇರಿ ನಿಮ್ಮ ಕೆಲಸ ಕಾರ್ಯಗಳನ್ನು ಅಡ್ಡಿಪಡಿಸುತ್ತವೆ ಮತ್ತು ನಿಮ್ಮ ಗುರುಬಲ ಫಲವನ್ನು ಕಡಿಮೆ ಮಾಡುತ್ತಿದೆ. ಇದರ ಜೊತೆಗೆ ಇನ್ನೊಂದು ಪ್ರಮುಖ ಕಾರಣ ನಿಮಗಿರುವ ಸಾಡೇಸಾತಿ ಯು ಕೂಡ ಹೌದು. ಇದೆಲ್ಲದರ ಬಗ್ಗೆ ಇನ್ನಷ್ಟು ವಿಚಾರಗಳು ಹಾಗೂ ಇವುಗಳಿಗೆ ಇರುವ ಪರಿಹಾರಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ಕೆಳಗಿನ ವೀಡಿಯೋವನ್ನು ಪೂರ್ತಿಯಾಗಿ ನೋಡಿ.