ಯಾವ ವ್ಯಕ್ತಿಗೆ ಮುಂಜಾನೆ 3:00ರಿಂದ 5:00ವರೆಗೆ ಎಚ್ಚರ ಆಗುತ್ತೋ. ಏನಾಗುತ್ತದೆ ನಿಮಗೆ ಗೊತ್ತು..?ನಮಸ್ತೆ ಸ್ನೇಹಿತರೆ, 3:00 ಯಿಂದ 5:00 ರವರೆಗೆ ಎಚ್ಚರವಾದವರಿಗೆ ಏನಾಗುತ್ತದೆ ಎಂಬುದನ್ನು ಈ ಒಂದು ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಈ ಸಮಯದಲ್ಲಿ ಹೇಳುವವರು ಎಲ್ಲರಿಗಿಂತ ಸ್ವಲ್ಪ ಭಿನ್ನವಾಗಿಯೇ ಇರುತ್ತಾರೆ, ಬ್ರಹ್ಮಾಂಡ ಸೃಷ್ಟಿಸುವ ಮೊದಲು ಪರಮೇಶ್ವರನ ಕೆಲವು ವಿಷಯಗಳನ್ನು ಮಾತ್ರ ಬಗೆಹರಿಸಿ ಕೆಲವು ವಿಷಯಗಳನ್ನು ಹಾಗೆಯೇ ಬಿಟ್ಟಿದ್ದಾರೆ ಎಂಬ ಒಂದು ಮಾತಿದೆ ಹೋಗೆ ಬಿಟ್ಟ ವಿಷಯಗಳನ್ನು ಮನುಷ್ಯರೇ ಅರಿತುಕೊಳ್ಳಲಿ ಎಂಬುದು ಪರಮೇಶ್ವರ ಆಶಯವಾಗಿದೆ. ಪ್ರತಿನಿತ್ಯದ ನಮ್ಮ ಒಳ್ಳೆಯ ಮತ್ತು ಕೆಟ್ಟ ಕೆಲಸಗಳಲ್ಲಿ ಪರಮೇಶ್ವರನ ಯಾವುದಾದರೂ ಸಂಕೇತ ಅಥವಾ ಸೂಚನೆ ಅಡಗಿರುತ್ತದೆ. ಆ ದೇವರ ಮೇಲೆ ನಮಗೆ ಶ್ರದ್ಧೆ ಮತ್ತು ನಂಬಿಕೆ ಇದ್ದರೆ ಮಾತ್ರ ಆ ಸಂಕೇತಗಳು ನಮಗೆ ತಿಳಿಯುತ್ತದೆ ಎನ್ನಬಹುದು.ನಾವು ಪರಮೇಶ್ವರನ ಸಂಕೇತಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ.
ನಮ್ಮ ಮನೆಯಲ್ಲಿರುವ ಹಿರಿಯರ ಮೂಲಕ ಅಥವಾ ನಾವು ಮಾಡುವ ಕೆಲಸಗಳ ಮೂಲಕ ಆ ದೇವರು ನಮಗೆ ಸಂಕೇತಗಳನ್ನು ನೀಡುತ್ತಿರುತ್ತಾನೆ ಆದರೆ ನಾವು ಅದನ್ನು ಕೆಲವು ಸಂದರ್ಭಗಳಲ್ಲಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ದೇವರು ಸಹ ಒಂದು ಮಾತು ಹೇಳಿದ್ದಾರೆ ಅದು ಏನೆಂದರೆ, ಪರಮೇಶ್ವರನು ಸೃಷ್ಟಿಯ ಕಣಕಣದಲ್ಲೂ ನೆಲೆಸಿರುತ್ತಾನೆ ಇದರಿಂದಾಗಿ ಪರಮೇಶ್ವರನು ಸೃಷ್ಟಿ ಮಾಡಿದ ನಡೆಯುವಂತಹ ಸಣ್ಣಪುಟ್ಟ ಘಟನೆಗಳ ಮೇಲೆ ಜ್ಞಾನವನ್ನು ಕೇಂದ್ರೀಕರಿಸುವ ಅವಶ್ಯಕತೆ ಇರುತ್ತದೆ. ಆದ್ದರಿಂದ ಪರಮೇಶ್ವರನು ಪ್ರಕೃತಿಯ ಮೂಲಕ ನೀಡುವಂತಹ ಸೂಚನೆಗಳನ್ನು ನಾವು ಪಾಲಿಸಬೇಕಾಗುತ್ತದೆ. ಮುಂಜಾನೆಯ 3:00 ಯಿಂದ 5:00 ರವರೆಗೆ ಇರುವ ಸಮಯವನ್ನು ನಾವು ಬ್ರಹ್ಮ ಮುಹುರ್ತ ಎಂದು ಕರೆಯುತ್ತೇವೆ.
ಈ ಬ್ರಹ್ಮ ಮುಹೂರ್ತದ ಸಮಯವನ್ನು ಸರ್ವಶ್ರೇಷ್ಠ ಸಮಯ ಎಂದು ಶ್ರೀಕೃಷ್ಣದೇವರು ಹೇಳಿದ್ದಾರೆ, ಈ ಸಮಯದಲ್ಲಿ ನಾವು ಎದ್ದರೆ ನಮ್ಮ ದೇಹದಲ್ಲಿ ಶಕ್ತಿ ಗಳು ಹೆಚ್ಚಾಗುವುದು ಎಂಬ ನಂಬಿಕೆಯಿದೆ. ಇತ್ತೀಚಿನ ದಿನಗಳಲ್ಲಿ ತುಂಬಾ ಕೆಲಸ ಇರುವ ವ್ಯಕ್ತಿಗಳು ಅ ಮೂರ್ತದಲ್ಲಿ ಹೇಳುವುದು ಕಷ್ಟ ಆದ್ದರಿಂದ ನಮಗೆ ಬ್ರಹ್ಮ ಮುಹೂರ್ತದಲ್ಲಿ ಅಚಾನಕ್ಕಾಗಿ ಏನಾದರೂ ಎಚ್ಚರವಾದರೆ ನಾವು ತುಂಬಾನೇ ಭಾಗ್ಯಶಾಲಿಗಳು ಎಂದು ಹೇಳಬಹುದು. ವೈಜ್ಞಾನಿಕವಾಗಿ ಬ್ರಹ್ಮ ಮುಹೂರ್ತದ ಬಗ್ಗೆ ಹೇಳುವುದಾದರೆ ಗ್ರಹ ಮತ್ತು ನಕ್ಷತ್ರಗಳ ನಡುವೆ ಕೆಲವು ವಿಷಯಗಳು ನಡೆಯುತ್ತವೆ, ವಾಯುಮಂಡಲವು ಸಹ ಸ್ವಚ್ಛ ಮತ್ತು ನಿಶಬ್ದದಿಂದ ಕೂಡಿರುತ್ತದೆ. ಈ ಒಂದು ಬ್ರಹ್ಮ ಮುಹೂರ್ತದಲ್ಲಿ ಆಕಾಶದಲ್ಲಿ ದೇವಾನುದೇವತೆಗಳು ಬಂದು ತನ್ನ ಭಕ್ತರ ಮೇಲೆ ತನ್ನ ಒಂದು ಕೃಪಾಕಟಾಕ್ಷವನ್ನು ನೀಡುತ್ತಾರೆ ಎಂಬ ನಂಬಿಕೆಯನ್ನು ಬ್ರಹ್ಮ ಮುಹುರ್ತ ಹೊಂದಿದೆ.