ಹುಬ್ಬಳ್ಳಿಯಲ್ಲಿ ನಟ ಧನ್ವೀರ್ ಮೇಲೆ ದಾಳಿ ಆದರೆ ‌ಕೊನೆಗೆ ಏನಾಯ್ತು ಗೊತ್ತಾ‌? ವಿಡಿಯೊ ನೋಡಿ - Karnataka's Best News Portal

ಹುಬ್ಬಳ್ಳಿಯಲ್ಲಿ ನಟ ದನ್ವೀರ್ ಮೇಲೆ ದಾಳಿ? ಅಷ್ಟಕ್ಕೂ ನಡೆದದ್ದಾದರೂ ಏನು?ಕಳೆದ ನಾಲ್ಕೈದು ದಿನಗಳಿಂದ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವ ವಿಷಯ ನಟ ದನ್ವೀರ್ ಒಬ್ಬ ಅಭಿಮಾನಿಗೆ ಹಲ್ಲೆ ಮಾಡಿದ್ದಾರೆ ಎಂಬ ವಿಷಯ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಕಳೆದ ಶುಕ್ರವಾರ ನಟ ಧನ್ವೀರ್ ಹಾಗೂ ಶ್ರೀಲೀಲಾ ಅವರ ಅಭಿನಯದ ಬೈಟು ಲವ್ ಎಂಬ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು ಹಾಗೂ ಈ ಸಿನಿಮಾದ ರಿಲೀಸ್ ನ ಕ್ಲಿಪ್ಸ್ ನ ಕೆಲವು ವಿಡಿಯೋಗಳ ಸಲುವಾಗಿ ಶೂಟಿಂಗ್ ಮಾಡಲು ಅನುಪಮಾ ಥಿಯೇಟರ್ ಬಳಿ ಚಿತ್ರತಂಡದವರು ಹಾಗೂ ಆತನ ಸ್ನೇಹಿತರು ಹಾಗೂ ಕೆಲವು ಬಾಡಿಗಾರ್ಡ್ ಗಳು ಸಹ ತೆರಳಿದ್ದರು. ಈ ಸಮಯದಲ್ಲಿ ಶೂಟಿಂಗ್ನ ಬಿಸಿಯಲ್ಲಿದ್ದ ಸಮಯದಲ್ಲಿ ಧನ್ವೀರವರ ಜೊತೆಗೆ ಸೆಲ್ಫಿಗಾಗಿ ಅಭಿಮಾನಿಗಳು ಕೇಳುತ್ತಿದ್ದರು. ಸಾಕಷ್ಟು ಜನರೊಂದಿಗೆ ಇವರು ಫೋಟೋ ತೆಗೆಸಿಕೊಂಡಿದ್ದರು ಆದರೆ ಸಮಯವಾಗುತ್ತಿದ್ದಂತೆ ಫೋಟೋ ತೆಗೆದುಕೊಳ್ಳಲು ನಿರಾಕರಿಸಿದರು. ಅದೇ ಸಮಯದಲ್ಲಿ ಅವರ ಅಭಿಮಾನಿ ಎಂದು ಹೇಳಿಕೊಳ್ಳುವ ಈತ ತುಂಬಾ ಹೊತ್ತಿನಿಂದ ಅವರೊಂದಿಗೆ ಸೆಲ್ಫಿಗಾಗಿ ಕಾಯುತ್ತಿದ್ದ.

ಅವರು ನಿರಾಕಸಿದ ತಕ್ಷಣ ಕೋಪಗೊಂಡು ಕೆಟ್ಟ ಮಾತಿನಲ್ಲಿ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ದನ್ವೀರ್ ಅವರು ಅವನಿಗೆ ಹಲ್ಲೆ ನಡೆಸಿದ್ದಾರೆ ಎಂದು ಸಾಕಷ್ಟು ಸೋಶಿಯಲ್ ಮೀಡಿಯಾ ಗಳಲ್ಲಿ ವಿಡಿಯೋ ಬರಲಾಗಿತ್ತು ಹಾಗೂ ಅದರ ಪರ ಮತ್ತು ವಿರೋಧ ಚರ್ಚೆಗಳನ್ನು ಕೂಡ ನೆಟ್ಟಿಗರು ನಡೆಸುತ್ತಿದ್ದರು. ನಟ ಧನ್ವೀರ್ ರವರು ಒಂದು ಸೋಶಿಯಲ್ ಮೀಡಿಯಾ ಚಾನೆಲ್ ಗೆ ಕರೆ ಮಾಡಿ ಹೇಳಿಕೊಂಡಿರುವ ಪ್ರಕಾರ ಅವರು ಸಾಕಷ್ಟು ಅಭಿಮಾನ ಜೊತೆ ಸೆಲ್ಫಿ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಹಲ್ಲೆ ನಡೆದಿದೆ ಎಂದು ಆರೋಪ ಮಾಡುತ್ತಿರುವ ಈ ವ್ಯಕ್ತಿ ಯಾವುದೋ ಮಹಿಳೆಗೆ ಕೆಟ್ಟದಾಗಿ ನಿಂದಿಸುತ್ತಿದ್ದರು. ಇದರಿಂದ ಕೋಪಗೊಂಡ ನಾನು ಆತನನ್ನು ಕರೆಸಿ ಬುದ್ಧಿ ಹೇಳಿದೆ ಅಷ್ಟೇ ಇದು ನನ್ನ ವಿರುದ್ಧ ಯಾರೋ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಆದರೆ ಆರೋಪ ಮಾಡಿದ ವ್ಯಕ್ತಿ ನಟ ಹಾಗೂ ಆತನ ಸ್ನೇಹಿತರು ಕ್ಷುಲಕ ಕಾರಣಕ್ಕೆ ನನ್ನನ್ನು ಥಿಯೇಟರ್ ಒಳಗೆ ಕರೆದುಕೊಂಡು ಹೋಗಿ ಒಂದು ಗಂಟೆಯವರೆಗೆ ಸತತವಾಗಿ ಥಳಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ನೆನ್ನೆ ಹುಬ್ಬಳ್ಳಿಗೆ ಸಿನಿಮಾದ ಪ್ರಚಾರಕ್ಕೆಂದು ಹೋಗಿದ್ದ ಧನ್ವೀರ್ ಅವರನ್ನು ಸಾಕಷ್ಟು ಜನ ಮುತ್ತಿಗೆ ಹಾಕಿ ಅವರು ಅಭಿಮಾನಿಯೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

By admin

Leave a Reply

Your email address will not be published. Required fields are marked *