ಜಿರಳೆ ಓಡಿಸುವುದಕ್ಕೆ ಸೀಕ್ರೆಟ್ ಟಿಪ್ಸ್.ಸಾಮಾನ್ಯವಾಗಿ ಮನೆ ಅಂದ ಮೇಲೆ ಅಲ್ಲಿ ಜಿರಲೆಗಳ ವಾಸ ಇದ್ದೇ ಇರುತ್ತದೆ ಕೆಲವೊಮ್ಮೆ ಇಂತಹ ಜಿರಳೆಗಳಿಂದ ಆರೋಗ್ಯಕ್ಕೆ ತುಂಬಾನೆ ದುಷ್ಪರಿಣಾಮ ಉಂಟಾಗುವುದನ್ನು ನಾವು ನೋಡಬಹುದು. ಅದರಲ್ಲಿಯೂ ಕೂಡ ಮನೆಯಲ್ಲಿ ಒಂದು ವೇಳೆ ಚಿಕ್ಕ ಮಕ್ಕಳು ಇದ್ದರೆ ಅವರ ಆರೋಗ್ಯದ ಮೇಲೆ ಗಂಭೀರವಾದಂತಹ ಪರಿಣಾಮಗಳು ಬೀಳುತ್ತದೆ. ಹಾಗಾಗಿ ಇಂದು ಜಿರಳೆಗಳನ್ನು ಯಾವ ರೀತಿಯ ಮನೆಯಿಂದ ಹೊರಗೆ ಓಡಿಸಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಂದು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಕೆಲವೊಮ್ಮೆ ಮನೆಯಲ್ಲಿ ಜಿರಳೆ ಇದೆ ಎಂಬ ಮಾತ್ರಕ್ಕೆ ಕೆಮಿಕಲ್ ಸ್ಪ್ರೇಗಳನ್ನು ಹಾಕುತ್ತಾರೆ ಈ ರೀತಿ ಹಾಕುವುದರಿಂದ ಜಿರಳೆಗಳು ಹೋಗಬಹುದು ಆದರೆ ಇದರಿಂದ ತುಂಬಾನೇ ಅಡ್ಡಪರಿಣಾಮಗಳು ಉಂಟಾಗುತ್ತದೆ. ಒಂದು ವೇಳೆ ನಮಗೆ ತಿಳಿದೋ ಅಥವಾ ತಿಳಿಯದೆಯೋ ಕೆಮಿಕಲ್ಸ್ ಪ್ರಯೋಗಳು ನಮ್ಮ ಚರ್ಮಕ್ಕೆ ಅಥವಾ ನಾವು ಮಾಡುವಂತಹ ಊಟದ ಮೇಲೆ ಬಿದ್ದರೆ ಅದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.
ಹಾಗಾಗಿ ಇಂದು ಯಾವುದೇ ರೀತಿಯಾದಂತಹ ಕೆಮಿಕಲ್ ಗಳನ್ನು ಬಳಸದೆ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿಕೊಂಡು ಯಾವ ರೀತಿಯಾಗಿ ನೈಸರ್ಗಿಕ ವಿಧಾನದಿಂದ ಜಿರಳೆಯನ್ನು ಹೊರ ಹೋಗಿಸಬಹುದು ಎಂಬುದನ್ನು ತಿಳಿಸುತ್ತೇವೆ. ಈ ಮನೆಮದ್ದು ತಯಾರಿಸುವುದಕ್ಕೆ ನಿಮಗೆ ಬೇಕಾಗಿರುವುದು ಕೇವಲ ಮೂರೇ ಮೂರು ಪದಾರ್ಥಗಳು. ಹೌದು ಕರ್ಪೂರ ಗಂಧದ ಕಡ್ಡಿ ಹಾಗೂ ಸ್ಪ್ರೇ ಬಾಟಲ್ ಈ ಮೂರು ಕೂಡ ಮನೆಯಲ್ಲಿ ಇದ್ದೇ ಇರುತ್ತದೆ. ಮೊದಲಿಗೆ ಒಂದು ಬಟ್ಟಲಿಗೆ 5 ಕರ್ಪೂರವನ್ನು ಹಾಕಿ ತದನಂತರ ಮೂರು ಗಂಧದಕಡ್ಡಿಯನ್ನು ಹಾಕಿ ಇವೆಲ್ಲವನ್ನೂ ಕೂಡ ನುಣ್ಣಗೆ ಕುಟ್ಟಿ ಪುಡಿ ಮಾಡಿಕೊಳ್ಳಬೇಕು.
ಈಗ ಒಂದು ಬಟ್ಟಲಿಗೆ ಈ ಮಿಶ್ರಣವನ್ನು ಹಾಕಿ ಅರ್ಧ ಗ್ಲಾಸ್ ನೀರನ್ನು ಹಾಕಿ ಎಲ್ಲವನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನೀರಿನಲ್ಲಿ ಸಂಪೂರ್ಣವಾಗಿ ಕರ್ಪೂರ ಹಾಗೂ ಗಂಧದ ಕಡ್ಡಿ ಪುಡಿ ಎಲ್ಲವು ಕೂಡ ಕರಗಿ ಹೋಗಬೇಕು. ಈಗ ಈ ಮಿಶ್ರಣವನ್ನು ಒಂದು ಸ್ಪ್ರೇ ಬಾಟಲಿಗೆ ಶೋಧಿಸಿಕೊಳ್ಳಬೇಕು ತದನಂತರ ಜಿರಳೆಗಳು ಓಡಾಡುವಂತಹ ಜಾಗದಲ್ಲಿ ಈ ಮಿಶ್ರಣವನ್ನು ಸ್ಪ್ರೇ ಮಾಡಬೇಕು. ಈ ರೀತಿ ಮಾಡುವುದರಿಂದ ಜಿರಳೆ ಮನೆಯಿಂದ ಓಡಿ ಹೋಗುತ್ತದೆ ಈ ವಿಧಾನದಿಂದ ಯಾವುದೇ ರೀತಿಯಾದಂತಹ ಅಡ್ಡಪರಿಣಾಮಗಳು ಬೀಳುವುದಿಲ್ಲ. ಏಕೆಂದರೆ ನಾವು ಇಲ್ಲಿ ಯಾವುದೇ ರೀತಿಯಾದಂತಹ ಕೆಮಿಕಲ್ಸ್ ಗಳನ್ನು ಬಳಸಿಲ್ಲ ಹಾಗಾಗಿ ಇದೊಂದು ನೈಸರ್ಗಿಕ ಪದ್ಧತಿ ಅಂತಾನೆ ಹೇಳಬಹುದು.