ನಾವು ಬಡವರು ನಮ್ಮತ್ರ ದುಡ್ಡಿಲ್ಲ ಎಂದುಕೊಳ್ಳುವವರು ತಪ್ಪದೇ ಈ ವಿಡಿಯೋ ಒಂದು ಸಲ ನೋಡಿ,ಈ ಕಥೆಯಿಂದ ಬದಲಾವಣೆ..ನೋಡಿ.

ನಾವು ಬಡವರು ನಮ್ಮತ್ರ ದುಡ್ಡಿಲ್ಲ ಅಂದುಕೊಳ್ಳುತ್ತೀರಾ.? ಹಾಗಾದರೆ ಇದನ್ನು ಒಮ್ಮೆ ನೋಡಿ.ನಾವು ನಮಗಿಂತ ಹೆಚ್ಚು ಶ್ರೀಮಂತರನ್ನು ನೋಡಿ ಹಣ ಆಸ್ತಿ ಎಲ್ಲವೂ ಇದೆ ಆದರೆ ನಮ್ಮ ಬಳಿ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲ ಎಂದು ಕೊರಗಬಾರದು. ಬೇರೆಯವರ ಆಸ್ತಿ ಅಂತಸ್ತು ನೋಡಿ ನಾವು ಹೊಟ್ಟೆಕಿಚ್ಚು ಪಡಬಾರದು ನಮ್ಮ ಪಾಲಿಗೆ ಬಂದದ್ದನ್ನು ನಾವು ಸ್ವೀಕರಿಸಬೇಕು ಈ ವಿಚಾರದ ಬಗ್ಗೆ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ. ಒಂದು ಕತೆಯ ಮೂಲಕ ತಿಳಿಯೋಣ, ಒಂದು ಚಿಕ್ಕ ಹಳ್ಳಿ ಒಬ್ಬ ಬಡವ ಬೆಳಗ್ಗೆಯಿಂದ ಸಂಜೆವರೆಗೂ ಬಿಡುವಿಲ್ಲದೆ ಕೆಲಸ ಮಾಡುತ್ತಿರುತ್ತಾನೆ ಅವನಿಗೊಂದು ಕೆಲಸ ಬಂಡೆ ಹೊಡೆಯುವ ಕೆಲಸವಾಗಿರುತ್ತದೆ ಈ ಕೆಲಸವನ್ನು ಸೂರ್ಯ ಉದಯಿಸುವ ಹೊತ್ತಿಗೆ ಶುರುಮಾಡಿದರೆ ಸೂರ್ಯ ಮುಳುಗೋ ವರೆಗೂ ಒಂದು ಕೆಲಸದಲ್ಲಿ ನಿರತನಾಗಿ ಕಷ್ಟ ಪಡುತ್ತಿದ್ದನು.ಸಾಯಂಕಾಲ ಕೆಲಸ ಮುಗಿಸಿಕೊಂಡು ಒಂದಷ್ಟು ಹಣವನ್ನು ಸಂಪಾದನೆ ಮಾಡುತ್ತಾರೆ ನಂತರ ಸಂಜೆ ವೇಳೆಗೆ ಮನೆಗೆ ಬರುತ್ತಾನೆ ಊಟ ಮಾಡಿ ಮಲಗುತ್ತಾನೆ ಈ ಒಂದು ರೀತಿ ಇವನ ದಿನಚರಿ ಯಾಗಿರುತ್ತದೆ ಅವನ ಜೀವನ ನಡೆಯುತ್ತಿರುತ್ತದೆ. ಒಂದು ದಿನ ಕೆಲಸವನ್ನು ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಅವನು ದಾರಿಯಲ್ಲಿ ಹೋಗಬೇಕಾದರೆ ಯೋಚಿಸಲು ಶುರು ಮಾಡುತ್ತಾನೆ. ನನ್ನ ಜೀವನದಲ್ಲಿ ಪ್ರತಿನಿತ್ಯವೂ

ಕಷ್ಟಪಟ್ಟು ದುಡಿಯುತ್ತಿದ್ದೇನೆ ಆದರೆ ಇದರಿಂದ ಸಿಗುವ ಹಣ ಸ್ವಲ್ಪ ಮಾತ್ರ ಇದರಿಂದ ತನ್ನ ಸಂಸಾರವನ್ನು ಮಾತ್ರ ಸಾಗಿಸುತ್ತಿದ್ದೇನೆ ಅಷ್ಟೇ. ದೇವರಿಂದ ನನಗೆ ವರ ಸಿಕ್ಕಿಬಿಟ್ಟರೆ ನಾನು ಹೇಗೆ ಅಂದುಕೊಂಡಿರುತ್ತಾರೆ ಹಾಗೆ ಆಗಲಿ ಎಂದು ಕೇಳಿಕೊಳ್ಳುತ್ತಾನೆ.ಇದೇ ರೀತಿ ಪ್ರತಿದಿನವೂ ಅವನ ಅವನ ಕೆಲಸದಲ್ಲಿ ನಿರತನಾಗಿ ಜೀವನವನ್ನು ಹೆಂಡತಿ ಮಕ್ಕಳ ಜೊತೆ ಜೀವನ ಸಾಗಿಸುತ್ತಾ ಹೋಗುತ್ತಾರೆ.ಹೀಗೆ ಒಂದು ದಿನ ಅವನಿಗೆ ಒಂದು ಕನಸು ಬೀಳುತ್ತದೆ ಅದರಲ್ಲಿ ಒಂದು ದೊಡ್ಡ ಬಂಗಲೆ ಕಾಣಿಸಿಕೊಳ್ಳುತ್ತದೆ ಆ ಸಂದರ್ಭದಲ್ಲಿ ಇದು ನನ್ನ ಮನೆ ಆಗಬಾರದಿತ್ತು ಎಂದುಕೊಳ್ಳುತ್ತಾನೆ ಇದು ನನ್ನ ಮನೆಯಾದರೆ ನಾನು ಇದರ ಮಾಲೀಕನ ಆಗುತ್ತೇನೆ ಎಂದು ಅಂದುಕೊಳ್ಳುತ್ತಿರುವಾಗಲೇ ಅವನು ಮನೆಯ ಮಾಲಿಕನ ಆಗುತ್ತಾನೆ. ಕನಸಿನಿಂದ ಎಚ್ಚರವಾಗಿ ಮನೆಗೆ ಕಿಟಕಿಯಲ್ಲಿ ಯಲ್ಲಿ ನೋಡುತ್ತಾನೆ ರಾಜಕಾರಣಿಯ ಮನೆಯ ಮುಂದೆ ಜನಗಳು ಜೈಕಾರ ಹಾಕುತ್ತಾ ಇರುತ್ತಾರೆ ಆಗ ಅವನು ರಾಜಕಾರಣಿ ಆಗಬಾರದಿತ್ತ ಎಂದುಕೊಳ್ಳುತ್ತಾ ರಾಜಕಾರಣಿಯೂ ಆಗುತ್ತಾನೆ ಒಂದು ದಿನ ಜನರು ಜೈಕಾರ ಹಾಕುತ್ತಾ ಇರುತ್ತಾರೆ ಸಂದರ್ಭದಲ್ಲಿ ಸೂರ್ಯನ ಬಿಸಿಲು ಇದ್ದ ಕಾರಣ ಜನರು ಹೊರಟು ಹೋಗುತ್ತಾರೆ ಆಗ ಅವನು ಸೂರ್ಯನ ಆಗಬೇಕು ಎಂದುಕೊಳ್ಳುತ್ತಾನೆ ಸೂರ್ಯನು ಆಗುತ್ತಾನೆ.

WhatsApp Group Join Now
Telegram Group Join Now
[irp]