ಯುಗಾದಿ ತಾರಾಬಲ 2022….2022 ರ ಚಂದ್ರಮಾನ ಯುಗಾದಿ ಚೈತ್ರ ಶುದ್ಧ ಪಾಡ್ಯಮಿ ಶನಿವಾರ ಏಪ್ರಿಲ್ 2 ರಂದು ಇದೆ. ಖಗೋಳ ಶಾಸ್ತ್ರದ ಪ್ರಕಾರ ಯುಗಾದಿ ಹಬ್ಬ ಬಹಳ ಪ್ರಮುಖವಾದದ್ದು. ಇದು ಶುಭಕೃತನಾಮ ಸಂವತ್ಸರ ಇಲ್ಲಿಗೆ ಕಳೆದ ವರ್ಷದ ಫ್ಲವ ನಾಮ ಸಂವತ್ಸರ ಅಂತ್ಯವಾಗುತ್ತದೆ ಫ್ಲವರ್ ಎಂದರೆ ಒಂದು ಪಕ್ಷ ಅಥವಾ ಕೊಕ್ಕರೆ ಪಕ್ಷಿ ಎಂದು ಹೇಳಲಾಗುತ್ತದೆ. ಈ ವರ್ಷದ ಯುಗಾದಿ ಹೇಗಿರುತ್ತದೆ ಎಂದರೆ ಆ ಸಸ್ಯಗಳು ಚೆನ್ನಾಗಿ ಬೆಳೆಯುತ್ತದೆ ಸುಭೀಕ್ಷೆ ಉಂಟಾಗುತ್ತದೆ ಪ್ರಜೆಗಳು ಆರೋಗ್ಯದಿಂದ ಇರುತ್ತಾರೆ. ಯುಗಾದಿ ಎಂದರೆ ಕಲಿಯುಗದ ಹುಟ್ಟುಹಬ್ಬ ಎಂದೇ ಹೇಳಲಾಗುತ್ತದೆ. ಗ್ರಹ ಸ್ಥಿತಿಗಳ ಪ್ರಕಾರ ಯುಗಾದಿ ಹಾಗೂ ದೀಪಾವಳಿ ಅಷ್ಟು ಒಳ್ಳೆಯದಲ್ಲ ಎಂದು ತಿಳಿಯಲಾಗುತ್ತದೆ ಗ್ರಂಥಗಳ ಪ್ರಕಾರ ಬ್ರಹ್ಮ ಇದೇ ದಿನ ಸೃಷ್ಟಿಯನ್ನು ಶುರುಮಾಡಿದ್ದ ಎನ್ನಲಾಗುತ್ತದೆ. ಭಾರತದ ಗಣಿತಶಾಸ್ತ್ರಜ್ಞರ ಪ್ರಕಾರ ಒಂದು ವೈಜ್ಞಾನಿಕ ಹಿನ್ನೆಲೆಯಿದೆ ವಸಂತ ಋಉತುವಿಗೆ ಗಿಡ ಮರಗಳು ಚಿಗುರಿ ಹೊಸ ಎಲೆಗಳು ಚಿಗುರುತ್ತದೆ.
ರೈತ ಬಾಂಧವರಿಗೆ ಮೋಕ್ಷ ದಿನ ಯಾಕೆಂದರೆ ಬೆಳೆಗಳು ಸಿಗುವಂತಹ ಕಾಲ, ಹಾಗೆಯೆ ಮಲ್ಲಿಗೆ ಹೂವಿನ ಪರಿಮಳ ಹೆಚ್ಚುತ್ತದೆ. ಗ್ರಂಥಗಳ ಪ್ರಕಾರ ಭಕ್ತಿಯಿಂದ ಯಾರು ಪ್ರತ್ಯೇಕವಾಗಿ ಈಶ್ವರನಿಗೆ ಮಲ್ಲಿಗೆಯ ಹೂವು ಅರ್ಪಿಸಿ ಸ್ತೋತ್ರ, ಸಹಸ್ರನಾಮ ಹೇಳುತ್ತಾರೆ ಅಂತವರಿಗೆ ಐದು ಜನ್ಮದ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಹಿಂದಿನ ಕಾಲದಲ್ಲಿ ಈ ದಿನ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು ಇದಕ್ಕೆ ಪಂಚಾಂಗಶ್ರವಣ ಎಂದು ಹೇಳಲಾಗುತ್ತಿತ್ತು. ನಮ್ಮ ಜನರು ಪಂಚಾಂಗ ಶ್ರವಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು. ದೇಗುಲದಲ್ಲಿ ಪಂಡಿತರು ಹಾಗೂ ಜನಸಾಮಾನ್ಯರನ್ನು ಸೇರಿಸಿ ಆ ವರ್ಷದ ಭವಿಷ್ಯ ನುಡಿಗಳನ್ನು ಹೇಳುತ್ತಿದ್ದರು.
ಮಳೆ ಬೆಳೆ, ರೋಗಗಳು ಹೀಗೆ ನಾನಾ ವಿಷಯಗಳನ್ನು ತಿಳಿಸುತ್ತಿದ್ದರು ಪಂಚಾಂಗ ಶ್ರವಣದಲ್ಲಿ 5 ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು ಅವುಗಳೆಂದರೆ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಅಂದರೆ ಪಂಚಾಂಗಶ್ರವಣ ಕೇಳುವುದರಿಂದ ಈ ಲಾಭಗಳು ಉಂಟಾಗುತ್ತದೆ ತಿಥಿಯ ಬಗ್ಗೆ ತಿಳಿದುಕೊಳ್ಳು ವುದರಿಂದ ಒಳ್ಳೆಯದಾಗುತ್ತೆ, ವಾರದ ಬಗ್ಗೆ ತಿಳಿದುಕೊಳ್ಳುವುದರಿಂದ ಆಯಸ್ಸು ವೃದ್ಧಿಸುತ್ತದೆ, ನಕ್ಷತ್ರಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಪಾಪಗಳು ನಿವಾರಣೆಯಾಗುತ್ತದೆ, ಯೋಗದ ಬಗ್ಗೆ ತಿಳಿದುಕೊಳ್ಳುವುದರಿಂದ ರೋಗಗಳು ದೂರವಾಗುತ್ತದೆ. ಕರಣದ ಬಗ್ಗೆ ತಿಳಿದುಕೊಳ್ಳು ವುದರಿಂದ ಕಾರ್ಯಸಿದ್ದಿ ಲಭಿಸುತ್ತದೆ. ಮನುಷ್ಯನ ಜೀವನದಲ್ಲಿ ಬರಿ ಸಿಹಿಮಾತ್ರ ಇದ್ದರೆ ಒಳ್ಳೆಯದಲ್ಲ ಸ್ವಲ್ಪ ಕಹಿ ಕೂಡ ಇರಬೇಕು ಆಗಲೇ ಸಿಹಿ ಎಂದರೆ ಏನು ಎನ್ನುವುದು ನಮಗೆ ಅರ್ಥವಾಗುತ್ತದೆ.
ವಿಡಿಯೋ & ಸಂಪೂರ್ಣ ರಾಶಿ ಫಲ : ಖ್ಯಾತ ಜ್ಯೋತಿಷಿಗಳು ಶ್ರೀ ಸಚ್ಚಿದಾನಂದ ಬಾಬು