ಮನೆಯಲ್ಲಿ ರೇಷ್ಮೆ ಸೀರೆ ಇದ್ದರೆ ತಪ್ಪದೇ ಈ ವಿಡಿಯೋ ನೋಡಿ.ರೇಷ್ಮೆ ಸೀರೆ ಒಗೆಯುವ ಸುಲಭ ವಿಧಾನ.

ರೇಷ್ಮೆ ಸೀರೆ ಮನೆಯಲ್ಲಿ ಒಗೆಯುವ ಸುಲಭ ವಿಧಾನ….ಭಾರತೀಯ ಹೆಣ್ಣು ಮಕ್ಕಳಿಗೆ ರೇಷ್ಮೆ ಸೀರೆ ಎಂದರೆ ತುಂಬಾ ಇಷ್ಟ ಹೌದು ಮದುವೆಗಳು, ಫಂಕ್ಷನ್ ಇನ್ನಿತರ ಯಾವುದೇ ಕಾರ್ಯಕ್ರಮಗಳು ಆದರೂ ಸಹ ನಮ್ಮ ಹೆಣ್ಣು ಮಕ್ಕಳು ಈ ರೇಷ್ಮೆ ಸೀರೆಯನ್ನು ದುಬಾರಿ ಬೆಲೆಯನ್ನು ಕೊಟ್ಟು ಕೊಂಡುಕೊಂಡು ಅದನ್ನು ಹಾಕಿಕೊಳ್ಳುತ್ತಾರೆ. ಈ ರೇಷ್ಮೆ ಸೀರೆ ಉಟ್ಟಾಗ ಅಷ್ಟೇ ಲಕ್ಷಣವಾಗಿ ಸಹ ಕಾಣುತ್ತಾರೆ. ನಾವು ರೇಷ್ಮೆ ಸೀರೆಯನ್ನು ಹಾಕಿಕೊಂಡಾಗ ಸೀರೆಗೆ ಕಲೆ, ಕೊಳೆ ಆಗುವುದು ಸಹಜ ಅಂತಹ ಸಂದರ್ಭದಲ್ಲಿ ನಾವು ಡ್ರೈ ಕ್ಲೀನ್ ಗೆ ಕೊಡುತ್ತೇವೆ ಈ ಸೀರೆಗಳನ್ನು ನಾವು ಮನೆಯಲ್ಲೆ ಸುಲಭವಾಗಿ ಕ್ಲೀನ್ ಮಾಡಬಹುದು. ಮೊದಲಿಗೆ ಬಕೆಟ್ ನಲ್ಲಿ ಕಾಲು ಭಾಗದಷ್ಟು ನೀರನ್ನು ತೆಗೆದುಕೊಂಡು ಅದಕ್ಕೆ 2 ಟೇಬಲ್ ಸ್ಪೂನ್ ಕಲ್ಲು ಉಪ್ಪು ಅಥವಾ ಪುಡಿ ಉಪ್ಪನ್ನು ಹಾಕಿ ಕರಗುವ ತನಕ ಬಿಡಿ ನಂತರ ರೇಷ್ಮೆ ಸೀರೆಯನ್ನು ತೆಗೆದುಕೊಂಡು ನೆರಿಗೆಗಳ ರೀತಿಯಲ್ಲಿ ಫೋಲ್ಡ್ ಮಾಡಿಕೊಳ್ಳಿ ನಂತರ ನೀರಿನಲ್ಲಿ ಮೂರು ನಿಮಿಷಗಳ ಕಾಲ ಅದ್ದಿ ಬಿಡಿ ತದನಂತರ ಮತ್ತೊಂದು

ಬಕೆಟ್ ನೀರಿನಲ್ಲಿ 2 ಕ್ಲಿನಿಕ್ ಪ್ಲಸ್ ಶಾಂಪು ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮೂರು ನಿಮಿಷಗಳ ಕಾಲ ಸೀರೆಯನ್ನು ಅದ್ದಿಯಿಡಿ ನಂತರ ಸೀರೆಯನ್ನು ಹೊರಗೆ ತೆಗೆದುಕೊಂಡು ನಿಮಗೆ ಎಲ್ಲಿ ಕಲೆಗಳು ಆಗಿರುತ್ತದೆ ಅಥವಾ ಕೊಳೆಯು ಉಂಟಾಗಿರುತ್ತದೆ ಅಂತಹ ಜಾಗದಲ್ಲಿ ಅದೇ ಶಾಂಪು ನೀರನ್ನು ತೆಗೆದುಕೊಂಡು ಚೆನ್ನಾಗಿ ಕೈಯಿಂದ ಉಜ್ಜಿ. ನಂತರ ಶುದ್ದವಾದ ನೀರನ್ನು ತೆಗೆದುಕೊಂಡು ನೊರೆ ಹೋಗುವ ತನಕ ಸೀರೆಯನ್ನು ಚೆನ್ನಾಗಿ ಜಾಲಿಸಿ. ಮತ್ತೊಂದು ಬಕೆಟ್ ನಲ್ಲಿ ನೀರು ತೆಗೆದುಕೊಂಡು ಸ್ಟಿಫ್ ಅಂಡ್ ಶೈನ್ ಲಿಕ್ವಿಡ್ ಹಾಗೆ ನಿಮಗೆ ಬೇಕಾದರೆ ಕಂಫರ್ಟ್ ಹಾಕಿ ಸೀರೆಯನ್ನು ಅದ್ದಿ ತೆಗೆಯಿರಿ. ಸ್ಟಿಫ್ ಅಂಡ್ ಶೈನ್ ಹಾಕುವುದರಿಂದ ನಮ್ಮ ಸೀರೆ ಶೈನಿಂಗ್ ಆಗಿರುತ್ತದೆ. ಸೀರೆಯನ್ನು ನೆರಳಿನಲ್ಲಿ ಹಾಕಿ ಒಣಗಿಸಬೇಕು ಬಿಸಿಲಿನಲ್ಲಿ ಹಾಕಿದರೆ ಹಾಳಾಗಬಹುದು ನಂತರ ನೀವು ಮನೆಗೆ ತಂದು ಐರನ್ ಮಾಡಿಕೊಳ್ಳಬೇಕು, ಐರನ್ ಮಾಡಲು ಮೊದಲು ಸೀರೆಯನ್ನು 4 ಫೋಲ್ಡ್ ಮಾಡಿ ಅದರ ಮೇಲೆ ಒಂದು ಕಾಟನ್ ಬಟ್ಟೆ ಹಾಕಿ ನಂತರ ಐರನ್ ಮಾಡಬೇಕು.

WhatsApp Group Join Now
Telegram Group Join Now