ನೀವು ಯಾವುದೇ ಒಂದು ಪರೀಕ್ಷೆಗಳನ್ನು ಬರೆಯಲು ಆಸ ಸಾಮಾನ್ಯ ಜ್ಞಾನ ರಸಪ್ರಶ್ನೆ ಅತ್ಯವಶ್ಯಕ….ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಇದಕ್ಕೆ ಜನರಲ್ ನಾಲೆಡ್ಜ್ ತುಂಬಾನೇ ಅವಶ್ಯಕ ಇದರಿಂದ ನೀವು ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತಯಾರಿ ನಡೆಸಿ ಪರೀಕ್ಷೆ ಅಟೆಂಡ್ ಮಾಡಬಹುದು. ನಮಗೆಲ್ಲರಿಗೂ ತಿಳಿದಿರುವ ಹಾಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದರೆ ನಾವು ಸಾಮಾನ್ಯ ಜ್ಞಾನದ ಪ್ರಶ್ನೆಗಳಲ್ಲಿ ಬಹಳ ನುರಿತರಾಗಿರುವುದು ಅವಶ್ಯಕ. ಸಾಮಾನ್ಯ ಜ್ಞಾನವು ವಸ್ತುಗಳ ಮೂಲಕ ನೋಡುವ ಮತ್ತು ಪ್ರಾಯೋಗಿಕ ಮತ್ತು ಸಂವೇದನಾಶೀಲ ತೀರ್ಪು ನೀಡಲು ಅವುಗಳ ನೈಜ ಸ್ವರೂಪವನ್ನು ಹೊಂದುವ ಸಾಮರ್ಥ್ಯವಾಗಿದೆ. ಈ ತಿಳುವಳಿಕೆಗೆ ಜ್ಞಾನದ ಅಗತ್ಯವಿರುವುದಿಲ್ಲ ಆದರೆ ವಿಷಯದ ಬಗ್ಗೆ ತಿಳಿಯುವ ಸಹಜ ಸಾಮರ್ಥ್ಯ ಬೇಕು.
ಕಾಮನ್ ಸೆನ್ಸ್ ಎಂದರೆ ಹದಿನೆಂಟನೇ ವಯಸ್ಸಿನಲ್ಲಿ ಪಡೆದ ಪೂರ್ವಾಗ್ರಹಗಳ ಸಂಗ್ರಹ ಎಂದು ಐನ್‌ಸ್ಟೈನ್ ಹೇಳಿರುವುದನ್ನು ನೀವು ಎಲ್ಲೋ ಕಾಣಬಹುದಾಗಿದೆ.ಈ ಸಾಮಾನ್ಯ ಜ್ಞಾನ ತಿಳಿಯಲು ಎರಡು ಮಾರ್ಗಗಳಿವೆ ಓದುವುದು ಮತ್ತು ಕಲಿತವರನ್ನು ಕೇಳುವುದು. ನಿಮ್ಮ ಮೆದುಳು ಎಲ್ಲದರ ಅರ್ಥವನ್ನು ನೀಡುತ್ತದೆ ಮತ್ತು ತಾರ್ಕಿಕ ತಪ್ಪುಗಳು ಮತ್ತು ಪೂರ್ವಾಗ್ರಹಗಳನ್ನು
ತೆಗೆದುಹಾಕುವ ಮೂಲಕ ನಿಮಗೆ ಸಾಮಾನ್ಯ ಜ್ಞಾನವನ್ನು ನೀಡುತ್ತದೆ, ನಂತರ ನೀವು ಅದಕ್ಕೆ ಉತ್ತಮ ವ್ಯಾಯಾಮವನ್ನು ನೀಡಬೇಕಾಗಿದೆ. ಆದ್ದರಿಂದ ವಿವಿಧ ದೃಷ್ಟಿಕೋನಗಳ ಮೂಲಕ ಯೋಚಿಸಲು ಪ್ರಾರಂಭಿಸಿ. ನಾವು ಯಾವುದೇ ಒಂದು ಪರೀಕ್ಷೆಗೆ ಮಾಡಿಕೊಳ್ಳಬೇಕು ಎಂದರು ಅದಕ್ಕೆ ಸಾಮಾನ್ಯ ಜ್ಞಾನ ಎನ್ನುವಂತಹದ್ದು ತುಂಬಾ ಮುಖ್ಯ.
ಈಗಿನ ಕಾಲದಲ್ಲಿ ಯಾವುದೇ ಒಂದು ಕೆಲಸಗಳಿಗೆ ಅಪ್ಲೈ ಮಾಡುವುದಾದರೆ ಮೊದಲು ಸಾಮಾನ್ಯ ಜ್ಞಾನದ ಪರೀಕ್ಷೆ ನಡೆದ ನಂತರವೇ ನಮಗೆ ಯಾವುದಾದರೂ ಒಂದು ಕೆಲಸಗಳು ದೊರೆಯುತ್ತದೆ. ಉದಾಹರಣೆಗೆ ಐಎಎಸ್, ಕೆಎಎಸ್, ಐಪಿಎಸ್ ಇನ್ನುಳಿದ ಇಂತಹ ಯಾವುದೇ ಒಂದು ಹುದ್ದೆಗಳಿಗೆ ನಾವು ಅರ್ಜಿಯನ್ನು ಹಾಕಬೇಕು ಎಂದರೆ ಸಾಮಾನ್ಯ ಜ್ಞಾನದ ಅರಿವು ಇರಬೇಕು. ನಮ್ಮೊಳಗೆ ನಾವು ಛಲವನ್ನು ಇಟ್ಟುಕೊಂಡು ಮನಸ್ಸನ್ನು ಕೇವಲ ಓದಿನ ಕಡೆ ಕೇಂದ್ರೀಕರಿಸಿ ನಾವು ಪಣತೊಟ್ಟರೆ ಯಾವುದು ಅಸಾಧ್ಯವಲ್ಲ ಎಲ್ಲ ನಮ್ಮ ಮನಸ್ಸಿನ ಮೇಲೆ ಕೇಂದ್ರೀಕರಿಸಿರುತ್ತದೆ. ಏಕಾಗ್ರತೆಯನ್ನು ಕೇಂದ್ರೀಕರಿಸಲು ಕೆಲವೊಂದಷ್ಟು ಯೋಗಗಳನ್ನು ಸಹ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.