ಕೆಜಿಎಫ್ ಸಿನಿಮಾ ನೋಡಿದಂತಹ ಪ್ರೇಕ್ಷಕರು ಹೇಳಿದ್ದೇನು ಗೊತ್ತಾ ನಿಜಕ್ಕೂ ಒಂದು ಕ್ಷಣ ಶಾಕ್ ಆಗ್ತೀರಾ.ಈಗ ಇಡೀ ದೇಶಾದ್ಯಂತ ಪ್ರಚಾರದಲ್ಲಿ ಇರುವಂತಹದ್ದು ಒಂದೇ ಒಂದು ಅದು ಕೆಜಿಎಫ್ ಸಿನಿಮಾ ಕೆಜಿಎಫ್ ಸಿನಿಮಾ ನೋಡಿದ ಪ್ರೇಕ್ಷಕರು ಹೇಳುತ್ತಿರುವ ತಮ್ಮ ಅನುಭವವನ್ನು ಕೇಳುತ್ತಿದ್ದರೆ ನಮಗೆ ಆಶ್ಚರ್ಯವಾಗುತ್ತದೆ. ಈ ಒಂದು ಸಿನಿಮಾ ಇಷ್ಟರ ಮಟ್ಟಿಗೆ ಒಂದು ಹವಾ ವನ್ನು ಕ್ರಿಯೇಟ್ ಮಾಡುತ್ತಿದೆ ಅಂದರೆ ಅದಕ್ಕೆ ನಿಜಕ್ಕೂ ಕೂಡ ನಾವು ಮೆಚ್ಚುಗೆಯನ್ನು ವ್ಯಕ್ತಪಡಿಸಲೇ ಬೇಕು. ಹೌದು ಒಂದು ಕಾಲದಲ್ಲಿ ಕನ್ನಡ ನಟರು ಹಾಗೂ ಕನ್ನಡ ಇಂಡಸ್ಟ್ರಿಯನ್ನು ಕೀಳು ಮಟ್ಟದಲ್ಲಿ ನೋಡುತ್ತಿದ್ದಂತೆ ಭಾರತೀಯ ಚಿತ್ರರಂಗ ಇದ್ದರೆ ಕನ್ನಡ ಸಿನಿಮಾ ಇಂಡಸ್ಟ್ರಿ ತರ ಇರಬೇಕು ಸಿನಿಮಾವನ್ನು ಮಾಡಿದರೆ ಕೆಜಿಎಫ್ ಸಿನಿಮಾದಂತೆ ಮಾಡಬೇಕು ಅಂತ ಹಾಡಿ ಹೊಗಳುತ್ತಿದ್ದಾರೆ. ನಿಜಕ್ಕೂ ಕೂಡ ಇಂತಹ ಮಾತುಗಳನ್ನು ಕೇಳುತ್ತಿದ್ದರೆ ಒಂದು ಕ್ಷಣ ಆನಂದ ಭಾಷ್ಪವಾಗುತ್ತದೆ ಕನ್ನಡ ಸಿನಿಮಾರಂಗಕ್ಕೆ ಯಾರು ಕೂಡ ತಂದುಕೊಡದಂತಹ ಯಶಸ್ಸು, ಗೌರವ, ಕೀರ್ತಿಯನ್ನು ಕೆಜಿಎಫ್ ಸಿನಿಮಾ ತಂಡ ತಂದುಕೊಟ್ಟಿದೆ.
ಕೆಜಿಎಫ್ ಸಿನಿಮಾವನ್ನು ಕರ್ನಾಟಕದಲ್ಲಿ ಒಪ್ಪಿಕೊಳ್ಳುತ್ತಾರೆ ಇದರಲ್ಲಿ ಬೇರೆ ಮಾತೇ ಇಲ್ಲ ಏಕೆಂದರೆ ಕನ್ನಡಿಗರೂ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಬೆಳೆಸಬೇಕು ಅಂತ ಹೇಳಬಹುದು. ಆದರೆ ಪರಭಾಷೆಯಲ್ಲೂ ಕೂಡ ಕೆಜಿಎಫ್ ಸಿನಿಮಾದ ಹವಾ ಇಷ್ಟರ ಮಟ್ಟಿಗೆ ಇದೆ ಎಂಬುದನ್ನು ನಾವು ಊಹೆ ಕೂಡ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕನ್ನಡ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದಲ್ಲಿಯೇ ಈ ಒಂದು ಸಿನಿಮಾ ಹೆಗ್ಗಳಿಕೆಗೆ ಪಾತ್ರವಾಗಿದೆ ಅದರಲ್ಲಿಯೂ ಕೂಡ ಕೆಜಿಎಫ್ ಸಿನಿಮಾ ಮಾಡಿದ ಮೇಲೆ ಯಶ್ ಗೆ ಫ್ಯಾನ್ ಫಾಲೋವರ್ಸ್ ಓವರ್ ಆಲ್ ಇಂಡಿಯಾದಲ್ಲಿ ಆಗಿರುವುದನ್ನು ನಾವು ನೋಡಬಹುದು. ಅದರಲ್ಲಿಯೂ ಕೂಡ ತೆಲುಗು ಇಂಡಸ್ಟ್ರಿ, ತಮಿಳು ಇಂಡಸ್ಟ್ರಿ, ಮಲಯಾಳಂ, ಹಿಂದಿ ಎಲ್ಲಾ ಭಾಷೆಯಲ್ಲೂ ಕೂಡ ಇದೀಗ ಕೆಜಿಎಫ್ ಗೆ ಹವಾ.
ಈ ಸಿನಿಮಾದ ಇಂಚಿಂಚಿನ್ನಲ್ಲೂ ಕೂಡ ರೋಚಕತೆ ಇದೆ ಪ್ರೇಕ್ಷಕರನ್ನು ತನ್ನ ಕಡೆ ಗಮನ ಸೆಳೆಯುವಂತಹ ಕೆಲಸವನ್ನು ಮಾಡಿದ್ದಾರೆ ಪ್ರಶಾಂತ್ ನೀಲ್ ಅವರ ಅವರ ಬುದ್ಧಿವಂತಿಕೆಯನ್ನು ನಾವು ಮೆಚ್ಚಲೇಬೇಕು. ಅದಕ್ಕೆ ತಕ್ಕಂತೆ ಯಶ್ ಅವರು ಕೂಡ ಅದ್ಭುತವಾಗಿ ನಟನೆ ಮಾಡಿದ್ದಾರೆ ಅದಿರನ ಪಾತ್ರ ಹಾಗೂ ಅವರ ಯಶ್ ಪಾತ್ರ ಇವೆರಡನ್ನು ಕೂಡ ಯಾರಿಂದಲೂ ಕೂಡ ಮಾಡಲು ಸಾಧ್ಯವೇ ಇಲ್ಲ. ಇವರಿಬ್ಬರಿಗೆ ಇವರೆ ಸರಿಸಾಟಿ ಆದರೆ ಈ ಸಿನಿಮಾದಲ್ಲಿ ಕೇವಲ ಎರಡೇ ಎರಡು ಹಾಡುಗಳು ಇರುವುದರಿಂದ ಸಿನಿ ಪ್ರೇಕ್ಷಕರಿಗೆ ಸ್ವಲ್ಪ ನಿರಾಸೆ ಉಂಟಾಗಿದೆ ಅಂತಾನೇ ಹೇಳಬಹುದು. ಅದನ್ನು ಹೊರತುಪಡಿಸಿ ಈ ಸಿನಿಮಾ ನೋಡಿದಂತಹ ಪ್ರೇಕ್ಷಕ ಮಹಾಪ್ರಭುಗಳು ತಮ್ಮ ಅನುಭವವನ್ನು ಯಾವ ರೀತಿ ವ್ಯಕ್ತಪಡಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ.