ಗರ್ಭಧರಿಸಲು ಪ್ರಯತ್ನಿಸುತ್ತಿರುವಾಗ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ.

ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೆ ಈ ತಪ್ಪನ್ನು ಎಂದಿಗೂ ಕೂಡ ಮಾಡಬೇಡಿ.ಗರ್ಭಧಾರಣೆ ಎಂಬುವುದು ಮಹಿಳೆಯರ ಜೀವನದಲ್ಲಿ ಬಹುದೊಡ್ಡ ಮಹತ್ತರವಾದಂತಹ ಘಟ್ಟ ಅಂತ ಹೇಳಬಹುದು ಪ್ರತಿಯೊಂದು ಹೆಣ್ಣು ಕೂಡ ತಾನು ತಾಯಿಯಾಗಬೇಕು ಅಂತ ಬಯಸುತ್ತಾರೆ. ಅದರಲ್ಲಿ ಕೂಡ ಹೊಸದಾಗಿ ಯಾರು ಮದುವೆಯಾಗಿರುತ್ತಾರೆ ಅಂತಹ ದಂಪತಿಗಳಲ್ಲಿ ಹೊಸ ಜೀವದ ನಿರೀಕ್ಷೆ ಎಂಬುದು ಇರುತ್ತದೆ. ಇತ್ತೀಚಿನ ದಿನದಲ್ಲಿ ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಮುಂತಾದವುಗಳಿಂದ ಗರ್ಭಧಾರಣೆ ಅಷ್ಟು ಸುಲಭವಾಗಿ ಆಗುತ್ತಿಲ್ಲ. ಹಾಗಾಗಿ ಸಾಕಷ್ಟು ದಂಪತಿಗಳು ಮದುವೆಯಾಗಿ ಬಹಳಷ್ಟು ವರ್ಷವಾಗಿದ್ದರೂ ಕೂಡ ಗರ್ಭಧಾರಣೆ ಯಾಗಿದೆ ತುಂಬಾನೇ ಪರಿತಪಿಸುವಂತಾಗಿದೆ. ಹಾಗಾಗಿ ಇಙದು ದಂಪತಿಗಳು ಮಕ್ಕಳನ್ನು ಪಡೆಯುವ ಅವಸರದಲ್ಲಿ ಮಾಡುವಂತಹ ಸಾಮಾನ್ಯವಾದ ತಪ್ಪುಗಳ ಬಗ್ಗೆ ತಿಳಿಸುತ್ತಿದ್ದೇವೆ ನೀವೇನಾದರೂ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಖಚಿತವಾಗಿಯೂ ಕೂಡ ಗರ್ಭಧಾರಣೆಯಾಗುವುದಿಲ್ಲ.

ಮೊದಲನೇದಾಗಿ ಹೊಸದಾಗಿ ಮದುವೆಯಾದಂತಹ ನೂತನ ಜೋಡಿಗಳಿಗೆ ಎದುರಾಗುವಂತಹ ಸಮಸ್ಯೆ ಅಂದರೆ ಇನ್ನು ಮಕ್ಕಳಾಗದೇ ಇರುವುದು ಅದರಲ್ಲಿಯೂ ಕೂಡ ನೆರೆಹೊರೆಯವರು ಅಥವಾ ಮನೆಯಲ್ಲಿ ಇರುವಂತಹ ಹಿರಿಯರು ಪದೇಪದೇ ಮಕ್ಕಳ ಬಗ್ಗೆ ಕೇಳುತ್ತಿದ್ದಾರೆ ಮದುವೆಯಾದಂತಹ ನವದಂಪತಿಗಳ ಮೇಲೆ ಅಧಿಕ ಒತ್ತಡವಿರುತ್ತದೆ ಮಕ್ಕಳಾಗದಿರುವುದಕ್ಕೆ ಇದು ಕೂಡ ಒಂದು ಮುಖ್ಯ ಕಾರಣ ಅಂತನೇ ಹೇಳಬಹುದು. ಗರ್ಭಧಾರಣೆ ಬಗ್ಗೆ ಇರುವಂತಹ ತಪ್ಪುಕಲ್ಪನೆ ಸಾಕಷ್ಟು ಮಂದಿ ಮದುವೆಯಾದ ತಕ್ಷಣ ಗರ್ಭವತಿಯಾಗುತ್ತಾಳೆ ಎಂದು ಕೊಳ್ಳುತ್ತಾರೆ ಆದರೆ ನಿಜಕ್ಕೂ ಕೂಡ ಇದು ಒಂದು ತಪ್ಪು ಕಲ್ಪನೆ ಅಂತ ಹೇಳಬಹುದು. ಮದುವೆಯಾಗಿ ನಿರ್ದಿಷ್ಟ ಸಮಯದ ನಂತರ ಒಬ್ಬರನ್ನೊಬ್ಬರು ಅರಿತುಕೊಂಡ ಮೇಲೆ ಮಕ್ಕಳು ಆಗುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಆದರೆ ಕೆಲವರು ಇಂತಹ ಸೂಕ್ಷ್ಮ ವಿಚಾರವನ್ನು ಅರಿತು ಕೊಳ್ಳುವುದಿಲ್ಲ.

WhatsApp Group Join Now
Telegram Group Join Now

ಮೂರನೆಯದಾಗಿ ಮದುವೆಯಾಗಿ ಒಂದು ವರ್ಷವಾದರೂ ಕೂಡಾ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ತಕ್ಷಣಕ್ಕೆ ಆಸ್ಪತ್ರೆಗೆ ಬಂದು 108 ಮಾದರಿಯ ಟೆಸ್ಟುಗಳನ್ನು ಮಾಡಿಸುವುದು. ನಾವು ಅರ್ಥಮಾಡಿಕೊಳ್ಳಬೇಕು ನೈಸರ್ಗಿಕವಾಗಿ ಮಕ್ಕಳಾಗುವುದಕ್ಕೆ ಕೆಲವೊಂದಷ್ಟು ವರ್ಷ ಕಾಯಬೇಕು ಆದರೆ ಕೆಲವರಿಗೆ ತಾಳ್ಮೆ ಎಂಬುದು ಇರುವುದಿಲ್ಲ ಮನೆಯವರ ಒತ್ತಾಯಕ್ಕೆ ಅಥವಾ ಬಂಧು-ಬಳಗದವರ ಕಾಟಕ್ಕೆ ಶೀಘ್ರವಾಗಿ ಮಕ್ಕಳನ್ನು ಪಡೆಯಬೇಕು ಅಂತ ತುಂಬಾನೇ ಒತ್ತಡದ ಜೀವನವನ್ನು ನಡೆಸುತ್ತಾರೆ. ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ ಹಾಗಾದರೆ ನೈಸರ್ಗಿಕವಾಗಿ ಗರ್ಭಧಾರಣೆಯಾಗಲು ಯಾವ ರೀತಿಯಾದಂತಹ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ.