ಕೆಜಿಎಫ್ ಸಿನಿಮಾ ನೋಡಿದಂತಹ ಪ್ರೇಕ್ಷಕರ ಅಭಿಪ್ರಾಯ ಹೇಗಿತ್ತು ನೋಡಿ ಲೈವ್ ರಿಸಲ್ಟ್.ಕಳೆದ ಮೂರು ವರ್ಷಗಳಿಂದಲೂ ಕೂಡ ಸೆಟ್ಟು ಏರೀದ ಕೆಜಿಎಫ್ ಚಾಪ್ಟರ್ 2 ಸಿನಿಮಾ ನೆನೆಯಷ್ಟೇ ಬಿಡುಗಡೆಯಾಗಿದೆ ಇದು ಯಶ್ ಅವರ ಬಹುನಿರೀಕ್ಷಿತ ಸಿನಿಮಾ ಅಂತಾನೇ ಹೇಳಬಹುದು. ಯಶ್ ಸಿನಿಮಾ ನಿಜಕ್ಕೂ ಕೂಡ ಕನ್ನಡ ಇಂಡಸ್ಟ್ರಿಗೆ ಒಂದು ಹೆಗ್ಗಳಿಕೆ ಅಂತಾನೆ ಹೇಳಬಹುದು. ಏಕೆಂದರೆ ಹಿಂದೆಂದೂ ಕಂಡರಿಯದಂತಹ ಯಶಸ್ಸನ್ನು ಈ ಒಂದು ಸಿನಿಮಾ ಕನ್ನಡ ಇಂಡಸ್ಟ್ರಿಗೆ ತಂದುಕೊಟ್ಟಿದೆ. ಇಡೀ ಭಾರತೀಯ ಚಿತ್ರರಂಗವೇ ಒಮ್ಮೆ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಈ ಸಿನಿಮಾ ತಯಾರಾಗಿದೆ. ನಿಜಕ್ಕೂ ಕೂಡ ಈ ಸಿನಿಮಾವನ್ನು ಸಿದ್ಧಪಡಿಸಿದಂತಹ ಪ್ರಶಾಂತ್ ನೀಲ್ ಆಗಿರಬಹುದು ಅಥವಾ ಈ ಸಿನಿಮಾಗೆ ಹಂಡ್ರೆಡ್ ಪರ್ಸೆಂಟ್ ಎಫರ್ಟ್ ಹಾಕಿದಂತಹ ಯಶ್ ಹಾಗೂ ಚಿತ್ರತಂಡ ಎಲ್ಲರಿಗೂ ಕೂಡ ಗೌರವವನ್ನು ಸಲ್ಲಿಸಬೇಕು.ನೆನ್ನೆಯಷ್ಟೇ ಕೆಜಿಎಫ್ ಚಪ್ಟರ್ 2 ಸಿನಿಮಾ ಇಡೀ ಪ್ರಪಂಚದ ಅತ್ಯಂತ ಬಿಡುಗಡೆಯಾಗಿದ್ದು ಉತ್ತಮ ರೀತಿಯಲ್ಲಿ ಪ್ರದರ್ಶನಗೊಂಡಿದೆ ಈ ಸಿನಿಮಾ ನೋಡಿದಂತಹ ಪ್ರೇಕ್ಷಕ ಮಹಾಪ್ರಭುಗಳು ಏನಂತ ಹೇಳಿದರು ಅಂತ ನೋಡುವುದಾದರೆ.
ಈ ಸಿನಿಮಾ ವೀಕ್ಷಣೆ ಮಾಡುವಾಗ ಎಲ್ಲಿಯೂ ಕೂಡ ಒಂದು ನಿಮಿಷವೂ ಕೂಡ ಬೋರಾಗುವುದಿಲ್ಲ. ಪ್ರತಿಕ್ಷಣವೂ ಕೂಡ ಯಾವುದಾದರೂ ಒಂದು ಹೊಸ ತಿರುವನ್ನು ಪಡೆದುಕೊಳ್ಳುತ್ತದೆ ನಿಜಕ್ಕೂ ಕೂಡ ಈ ಸಿನಿಮಾ ನೋಡುವುದಕ್ಕೆ ಬಹಳ ಥ್ರಿಲ್ ಆಗಿದೆ. ಅದರಲ್ಲಿಯೂ ಕೂಡ ರಾಕಿಂಗ್ ಸ್ಟಾರ್ ಯಶ್ ಹಾಗೂ ಅದಿರನ ಎಂಟ್ರಿ ಆಗುವಾಗ ತುಂಬಾನೇ ಕ್ರೇಜ್ ಇರುತ್ತದೆ ಈ ಸಿನಿಮಾ ನೋಡಿದಾಗ ನಿಜಕ್ಕೂ ಕೂಡ ಕನ್ನಡದಲ್ಲಿಯೂ ಕೂಡ ಇಂತಹ ಟೆಕ್ನಾಲಜಿಯನ್ನು ಬಳಕೆ ಮಾಡಬಹುದು ಎಂಬ ಅನುಮಾನ ಮೂಡಿದೆ. ಈ ಸಿನಿಮಾದಲ್ಲಿ ಇರುವಂತಹ ಡೈಲಾಗ್ ಆಗಿರಬಹುದು ಅಥವಾ ಸಾಂಗ್ ಆಗಿರಬಹುದು ಅಥವಾ ಸ್ಕ್ರೀನ್ ಪ್ಲೇ ಆಗಿರಬಹುದು ಎಲ್ಲವೂ ಕೂಡ ತುಂಬಾ ಅಚ್ಚುಕಟ್ಟಾಗಿ ಮೂಡಿಬಂದಿದೆ.
ಸಿನಿಮಾದ ಮೊದಲ ಅರ್ಧಭಾಗವು ತುಂಬಾ ಚೆನ್ನಾಗಿದೆ ಎರಡನೇ ಅರ್ಧಭಾಗವನ್ನು ಯಾರೂ ಕೂಡ ಊಹೆ ಮಾಡುವುದಕ್ಕೆ ಸಾಧ್ಯವಿಲ್ಲ ಅಂತಹ ರೋಚಕ ದೃಶ್ಯವನ್ನು ಒಳಗೊಂಡಿದೆ. ಈ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಕರ್ನಾಟಕದಲ್ಲಿಯೇ 20 ಕೋಟಿಗೂ ಅಧಿಕ ಕಲೆಕ್ಷನ್ ಪಡೆದಿರುವುದು ನಿಜಕ್ಕೂ ಕೂಡ ಬಾಕ್ಸಾಫೀಸನ್ನು ಧೂಳೆಬ್ಬಿಸುವಂತೆ ಮಾಡಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶಾದ್ಯಂತ ಈ ಸಿನಿಮಾವನ್ನು ಪ್ರತಿಯೊಬ್ಬರೂ ಕೂಡ ವೀಕ್ಷಣೆ ಮಾಡುತ್ತಿದ್ದಾರೆ. ಕೆಜಿಎಫ್ ಸಿನಿಮಾ ಕಲೆಕ್ಷನ್ ಮಾಡುತ್ತಿರುವಂತಹ ಈ ಪರಿಯನ್ನು ನೋಡಿದರೆ ಖಂಡಿತವಾಗಿಯೂ ಕೂಡ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತದೆ ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿದೆ.