ಬಾಲಿವುಡ್ ಯಾಕೆ ಕಸದ ತೊಟ್ಟಿ ಆಗಿದೆ ಗೊತ್ತಾ ? ದಕ್ಷಿಣ ಭಾರತದ ಸಿನಿಮಾಗಳು ಆಕ್ರಮಿಸಿದ್ದು ಹೇಗೆ ಅಂತ ನೋಡಿದರೆ ಶಾಕ್ ಆಗ್ತೀರಾ ನಮ್ಮ ಪವರ್ ನೋಡಿ..

ಕಸದತೊಟ್ಟಿ ಆಯಿತಾ ಬಾಲಿವುಡ್, ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ಡನ್ನು ಆಕ್ರಮಿಸಿದ್ದು ಹೇಗೆ?ಸಿನಿಮಾ ಎನ್ನುವುದು ಎಲ್ಲಾ ಕಾಲದಲ್ಲಿಯೂ ಎಲ್ಲಾ ಜನರ ಸಶಕ್ತ ಮನರಂಜನೆ ಮಾಧ್ಯಮವಾಗಿದೆ. ಈಗಂತೂ ಪ್ಯಾನ್ ಇಂಡಿಯಾದ ಟ್ರೆಂಡ್ ಉತ್ತುಂಗದಲ್ಲಿದೆ. ಈಗ ಸಿನಿಮಾ ತಯಾರಿ ಹಾಗೂ ಮೇಕಿಂಗ್ ಬೇರೆ ಹಂತವನ್ನೇ ತಲುಪಿದೆ. ಈಗ ಭಾರತದಾದ್ಯಂತ ಎಲ್ಲೆಡೆ ಸೌತ್ ಇಂಡಿಯಾದ ಸಿನಿಮಾಗಳೇ ಆಕ್ರಮಿಸಿವೆ. ದಕ್ಷಿಣ ಭಾರತದ ಸಿನಿಮಾಗಳಿಗೆ ಹೋಲಿಸಿದರೆ ಈಗ ಉತ್ತರ ಭಾರತದ ಯಾವುದೇ ಸಿನಿಮಾಗಳು ಅಥವಾ ಬಾಲಿವುಡ್ ಸಿನಿಮಾಗಳು ಯಾರಿಗೂ ತಲುಪದೆ ಸಪ್ಪೆಯಾಗಿ ಪರಿಣಮಿಸುತ್ತಿವೆ. ಒಂದು ಕಾಲವಿತ್ತು ಆಗ ಬಾಲಿವುಡ್ ಸಿನಿಮಾಗಳು ಇಡೀ ಭಾರತವನ್ನೇ ಪ್ರತಿನಿಧಿಸುತ್ತ ದಕ್ಷಿಣ ಭಾರತದ ಸಿನಿಮಾಗಳ ಮೇಲೆ ಪ್ರಭಾವ ಬೀರುತ್ತಿತ್ತು. ಇದರ ಜೊತೆಗೆ ಕೋಟಿ ಕೋಟಿ ಹಣವನ್ನು ಬಾಚಿ ಮೊದಲನೇ ಸ್ಥಾನದಲ್ಲಿ ಯಾವಾಗಲೂ ಇರುತ್ತಿದ್ದವು. ಆದರೆ ಈಗ ಅದರ ವಾಸ್ತವತೆ ಸಂಪೂರ್ಣವಾಗಿ ಉಲ್ಟಾ ಆಗಿದೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.

WhatsApp Group Join Now
Telegram Group Join Now

ಬಾಲಿವುಡ್ ಉತ್ತಮ ಸದಭಿರುಚಿ ಸಿನಿಮಾಗಳನ್ನು ನೀಡಲು ಸೋಲುತ್ತಿದೆ. ಸದ್ಯಕ್ಕೆ ಸ್ವಂತಿಕೆಯನ್ನು ಕಳೆದುಕೊಂಡಿರುವ ಬಾಲಿವುಡ್ ಬಹುತೇಕ ಸೌತ್ ಇಂಡಿಯಾದ ಸಿನಿಮಾಗಳನ್ನು ರಿಮೇಕ್ ಮಾಡುತ್ತಿದೆ. ಸೌತ್ ಇಂಡಿಯಾ ಸಿನಿಮಾಗಳು ಹಿಂದಿಯಲ್ಲಿ ಡಬ್ ಆಗಿ ಒಳ್ಳೆಯ ರಿವ್ಯೂ ಪಡೆಯುತ್ತಿವೆ. ದಕ್ಷಿಣ ಭಾರತದ ಸಿನಿಮಾಗಳ ಆರ್ಭಟದ ಮುಂದೆ ಬಾಲಿವುಡ್ ಒಂದು ಗಾರ್ಬೆಜ್ ನಂತೆ ಆಗಿದೆ ಎನ್ನುವ ಅನಿಸಿಕೆ ಎಲ್ಲಾ ಕಡೆ ಕೇಳಿಬರುತ್ತಿದೆ. ಬಾಲಿವುಡ್ ನಲ್ಲಿ ಸಹ ಖಾನ್, ಕಪೂರ್ ಅಂತಹ ಲೆಜೆಂಡರಿ ನಟರುಗಳ ದಂಡೆ ಇದೆ. ಅಲ್ಲಿಯೂ ಸಹ ಕೋಟಿ ಕೋಟಿ ಹಣ ಬೇಕಾದರೂ ಸುರಿಯುವ ನಿರ್ಮಾಪಕರಿದ್ದಾರೆ. ಒಳ್ಳೆಯ ಹೆಸರು ಮಾಡಿರುವ ನಿರ್ದೇಶಕರು ಸಹ ಇದ್ದಾರೆ. ಆದರೂ ಸಹ ಬಾಲಿವುಡ್ ನ ಕಥೆಗಳು ಜನರಿಗೆ ಇಷ್ಟವಾಗುತ್ತಿಲ್ಲ. ಬಾಲಿವುಡ್ ಈಗ ಎಡವುತ್ತಿರುವುದೆಲ್ಲಿ? ಹಾಗೂ ಈಗ ಅಲ್ಲಿ ಕಥೆಗಳ ಕೊರತೆ ಉಂಟಾಗುವುದಕ್ಕೆ ಕಾರಣವಾದರೂ ಏನು? ಎನ್ನುವ ಪ್ರಶ್ನೆ ಎಲ್ಲರ ಮನದಲ್ಲಿ ಇದೆ.

See also  ಅಲ್ಲು ಅರ್ಜುನ್ ದುಡ್ಡಿನ ಕೋಟೆ ಒಳಗೆ ಏನೆನಿದೆ,ಪತ್ನಿ ಎಷ್ಟು ಶ್ರೀಮಂತೆ ಗೊತ್ತಾ ?

ಈಗ ಸೌತ್ ಇಂಡಿಯಾದ ಸಿನಿಮಾಗಳು ಬಾಲಿವುಡ್ ಸಿನಿಮಾಗಳನ್ನು ಹಿಂದಿಕ್ಕಿ ಅಲ್ಲಿನ ಜನರ ಹೃದಯವನ್ನು ಗೆಲ್ಲುವುದಕ್ಕೆ ಏನು ಕಾರಣ ಹಾಗೂ ಮುಖ್ಯವಾಗಿ ಬಾಲಿವುಡ್ ಜನ ಅಲ್ಲಿನ ಕಥೆಗಳನ್ನು ಯಾಕೆ ನಿರಾಕರಿಸುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಹಲವು ಜನರು ಉತ್ತರ ಹುಡುಕುತ್ತಿದ್ದಾರೆ. ಇದಕ್ಕೆ ಕಾರಣ ಹೀಗಿರಬಹುದು ಬಾಲಿವುಡ್ ಸಿನಿಮಾಗಳಿಗಿಂತ ಸೌತ್ ಇಂಡಿಯಾದ ಸಿನಿಮಾಗಳು ತುಂಬಾ ವಿಭಿನ್ನವಾಗಿವೆ. ಬಾಲಿವುಡ್ ಎಂದರೆ ಅವು ಮುಖ್ಯವಾಗಿ ಹಿಂದಿ ಭಾಷೆ ಒಂದರಲ್ಲೇ ತಯಾರಾಗಿ ಆಚೆ ಬರುವ ಸಿನಿಮಾಗಳು ಆದರೆ ಸೌತ್ ಸಿನಿಮಾಗಳ ಕಥೆ ಹಾಗಲ್ಲ. ಅವು ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ನಾನಾ ಭಾಷೆಗಳಲ್ಲಿ ಬಿಡುಗಡೆಯಾಗುತ್ತವೆ. ಇನ್ನು ಮುಖ್ಯವಾಗಿ ಹೇಳುವುದಾದರೆ ಚಿತ್ರದ ಕಂಟೆಂಟ್ ಪ್ರಮುಖ ಕಾರಣವಾಗುತ್ತದೆ ಯಾವುದೇ ಸಿನಿಮಾ ತೆಗೆದುಕೊಂಡರು ಆ ಸಿನಿಮಾದ ಕಂಟೆಂಟ್ ಜನರ ಮನಸ್ಸಿನಲ್ಲಿ ಬಿಗಿಯಾಗಿ ನೆಲೆಯೂರಲು ಪ್ರಮುಖ ಕಾರಣವಾಗುತ್ತದೆ.

[irp]