ದಾಸ ಪುರಂದರ ಧಾರಾವಾಹಿಯ ಶ್ರೀನಿವಾಸ್ ನಿಜಕ್ಕೂ ಯಾರು ಗೊತ್ತಾ ಅವರ ಹಿನ್ನೆಲೆ ಕೇಳಿದರೆ ನಿಜಕ್ಕೂ ಕೂಡ ನಿಮಗೆ ಆಶ್ಚರ್ಯವಾಗುತ್ತದೆ.ಯಾವುದೇ ಒಂದು ಸೀರಿಯಲ್ ಹಿಟ್ ಆಗಬೇಕಾದರೂ ಕೂಡ ಆ ಒಂದು ಸೀರಿಯಲ್ ನಾ ಡೈಲಾಗ್, ಕಥೆ, ಇವುಗಳ ಜೊತೆಗೆ ಈ ಸೀರಿಯಲ್ ನಲ್ಲಿ ನಟನೆ ಮಾಡುವಂತಹ ನಟ-ನಟಿಯರ ಆಕ್ಟಿಂಗ್ ಕೂಡ ತುಂಬಾನೇ ಮುಖ್ಯವಾಗುತ್ತದೆ. ಆಗ ಮಾತ್ರ ಸೀರಿಯಲ್ ಗಳು ಜನರಿಗೆ ಇಷ್ಟ ಆಗುತ್ತದೆ ಕನ್ನಡದಲ್ಲಿ ಇಂತಹ ಸೀರಿಯಲ್ ಗಳು ಬಹಳಷ್ಟು ಈಗಾಗಲೇ ಇವೆ. ಆ ಧಾರವಾಹಿಗಳ ಜೊತೆಗೆ ಹೊಸದಾಗಿ ಈಗ ಮತ್ತೊಂದು ಧಾರವಾಹಿ ಸೇರ್ಪಡೆಯಾಗುತ್ತಿದೆ ಆ ಧಾರವಾಹಿ ಬೇರೆ ಯಾವುದೂ ಅಲ್ಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ದಾಸ ಪುರಂದರ ಎಂಬ ಧಾರಾವಾಹಿ. ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಕೂಡ ಜನರಿಗೆ ತುಂಬಾನೇ ಇಷ್ಟವಾಗಿದ್ದು ಇತ್ತೀಚಿಗೆ ಶ್ರೀನಿವಾಸ ಎಂಬ ಬಾಲಕನ ಪಾತ್ರವನ್ನು ಮಾಡುತ್ತಿರುವಂತಹ ವ್ಯಕ್ತಿಯ ನಟನೆ ಇತ್ತೀಚಿನ ದಿನದಲ್ಲಿ ಎಲ್ಲರಿಗೂ ಕೂಡ ತುಂಬಾನೇ ಇಷ್ಟವಾಗುತ್ತಿದೆ.
ಹಾಗಾಗಿ ಇಂದು ಶ್ರೀನಿವಾಸ ಎಂಬ ಬಾಲಕನ ಪಾತ್ರದಲ್ಲಿ ನಟನೆ ಮಾಡಿರುವಂತಹ ಹುಡುಗನ ನಿಜವಾದ ಹೆಸರೇನು ಅವರ ಹುಟ್ಟಿದ ದಿನಾಂಕ ಇವರು ಈ ಧಾರವಾಹಿಯಲ್ಲಿ ನಟನೆ ಮಾಡುವುದಕ್ಕಿಂತ ಮುಂಚೆ ಬೇರೆ ಯಾವ ಧಾರವಾಹಿಗಳಲ್ಲಿ ಅಥವಾ ಬೇರೆ ಯಾವ ರಿಯಾಲಿಟಿ ಶೋಗಳಲ್ಲಿ ಅಭಿನಯ ಮಾಡುತ್ತಿದ್ದರು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ. ಇವರು ಬಾಲನಟ ಅಷ್ಟೇ ಅಲ್ಲದೆ ವಾಯ್ಸ್ ಓವರ್ ಅನ್ನು ಕೂಡ ನೀಡುತ್ತಾರೆ. ಬಾಲನಟನಾಗಿ ಇವರು ನಟನೆ ಮಾಡಿದಂತಹ ಧಾರವಾಹಿ ಯಾವುದು ಅಂದರೆ ಜೊತೆ ಜೊತೆಯಲ್ಲಿ ಎಂಬ ಧಾರಾವಾಹಿಯಲ್ಲಿ ಆರ್ಯವರ್ಧನ್ ಎಂಬ ಪಾತ್ರವನ್ನು ಅವರು ಸಣ್ಣವಯಸ್ಸಿನಲ್ಲಿ ಇರುವಾಗ ಯಾವ ರೀತಿ ಮಾಡಿದರು ಎಂಬುದನ್ನು ಆಕ್ಟಿಂಗ್ ಮಾಡಿ ತೋರಿಸಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಜೂನಿಯರ್ ಆರ್ಯವರ್ಧನ್ ಆಗಿ ಇವರು ಕಾಣಿಸಿಕೊಂಡರು ಈ ಒಂದು ಧಾರವಾಹಿಯಲ್ಲಿ ಇವರ ಪಾತ್ರ ಕಡಿಮೆ ಸಮಯದ ಇದ್ದರೂ ಕೂಡ ತುಂಬಾ ಅಚ್ಚುಕಟ್ಟಾಗಿ ಇವರು ತಮ್ಮ ಅಭಿನಯವನ್ನು ಮಾಡಿದರು. ಈ ಒಂದು ಕಾರಣಕ್ಕಾಗಿಯೇ ಜೀ ಕನ್ನಡದಲ್ಲಿ ಮತ್ತೊಂದು ಧಾರವಾಹಿಯಲ್ಲಿ ಇವರನ್ನು ಅತಿಥಿಯಾಗಿ ಕೂಡಾ ಬರಮಾಡಲಾಗಿತ್ತು. ಹಿಟ್ಲರ್ ಕಲ್ಯಾಣ ಗಣೇಶ ಹಬ್ಬ ಎಂಬ ಒಂದು ಪ್ರೋಗ್ರಾಂಗೆ ಕೂಡ ಅವರನ್ನು ಕರೆಸಲಾಗಿತ್ತು. ಅಷ್ಟೇ ಅಲ್ಲದೆ ಜೀ ಕನ್ನಡ ವಾಹಿನಿಯಲ್ಲಿ ಮಹಾನಾಯಕ ಎಂಬ ಧಾರಾವಾಹಿಗೆ ಭೀಮ್ ರಾವ್ ಗೆ ಧ್ವನಿಯನ್ನು ನೀಡಿದ್ದು ಬೇರೆ ಯಾರು ಅಲ್ಲ ಅದು ಇವರೇ ಇವರ ನಿಜವಾದ ಹೆಸರು ಅನುರಾಗ್ ಇವರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯಲು ಕೆಳಗಿನ ವಿಡಿಯೋ ನೋಡಿ.