ಅಪ್ಪಳ ತಣ್ಣೀರಲ್ಲಿ ಹಾಕಿ ಈ ರೀತಿ ಮಾಡಿ ಒಳ್ಳೆಯ ರುಚಿ ಕೊಡುತ್ತದೆ ಯಾರು ಕೂಡ ಈ ರೀತಿ ಮಾಡಿರುವುದಿಲ್ಲ ಇದೇ ಮೊದಲು.ಸಾಮಾನ್ಯವಾಗಿ ನೀವು ಸಮೋಸವನ್ನು ತಿನ್ನುತ್ತೀರಾ ಅಷ್ಟೇ ಅಲ್ಲದೆ ಮನೆಯಲ್ಲಿ ಒಂದು ಬಾರಿಯಾದರೂ ಕೂಡ ಸಮೋಸ ಮಾಡಬೇಕು ಅಂತ ಅಂದುಕೊಂಡಿದ್ದಿರ. ಆದರೆ ಸಮೋಸ ಮಾಡುವುದು ಸುಲಭವಾದ ಕೆಲಸವಲ್ಲ ಹಾಗಾಗಿ ಇಂದು ಸುಲಭ ವಿಧಾನದಲ್ಲಿ ಹಪ್ಪಳದಿಂದ ಯಾವ ರೀತಿಯಾಗಿ ಸಮೋಸ ಮಾಡಬಹುದು ಎಂಬುದನ್ನು ಸಂಕ್ಷಿಪ್ತವಾಗಿ ನಿಮಗೆ ಲೇಖನದಲ್ಲಿ ತಿಳಿಸಿಕೊಡುತ್ತೇವೆ ನೋಡಿ. ಮೊದಲಿಗೆ ಸಮೋಸ ಮಸಾಲವನ್ನು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಈಗ ಒಂದು ಬಾಣಲಿಗೆ 2 ಟೇಬಲ್ ಸ್ಪೂನ್ ಎಣ್ಣೆಯನ್ನು ಹಾಕಿ ತದನಂತರ ಒಂದು ಟೇಬಲ್ ಸ್ಪೂನ್ ಚಿಕ್ಕದಾಗಿ ಕತ್ತರಿಸಿದ ಬೆಳ್ಳುಳ್ಳಿ ಚಿಕ್ಕದಾಗಿ ಕತ್ತರಿಸಿದ ಶುಂಠಿಯನ್ನು ಹಾಕಿ ಇವರನ್ನು ಕೂಡ ಫ್ರೈ ಮಾಡಿಕೊಳ್ಳಿ. ತದನಂತರ ಇದಕ್ಕೆ ಒಂದು ಹಸಿಮೆಣಸಿನಕಾಯಿಯನ್ನು ಕತ್ತರಿಸಿ ಹಾಕಿ ಇವೆರಡು ಕೂಡ ಬೆಂದ ನಂತರ ಇದಕ್ಕೆ ಸಣ್ಣದಾಗಿ ಉದ್ದವಾಗಿ ಕತ್ತರಿಸಿದಂತಹ ಈರುಳ್ಳಿಯನ್ನು ಹಾಕಿ.
ತದನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ ಈಗ ಇದಕ್ಕೆ ಅರ್ಧ ಟೇಬಲ್ ಸ್ಪೂನ್ ಅಚ್ಚಕಾರದ ಪುಡಿ, ಕಾಲು ಟೇಬಲ್ ಸ್ಪೂನ್ ಅರಿಶಿಣದ ಪುಡಿ, ಅರ್ಧ ಟೇಬಲ್ ಸ್ಪೂನ್ ಧನಿಯ ಪುಡಿ, ಕಾಲು ಟೇಬಲ್ ಸ್ಪೂನ್ ಕಾಳುಮೆಣಸಿನ ಪುಡಿ, ಕಾಲು ಟೇಬಲ್ ಸ್ಪೂನ್ ಜೀರಿಗೆ ಪುಡಿ, ಅರ್ಧ ಟೇಬಲ್ ಸ್ಪೂನ್ ಗರಂ ಮಸಾಲ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಚೂರೇ ಚೂರು ನೀರನ್ನು ಹಾಕಿ ಎಣ್ಣೆಯಲ್ಲಿ ಚೆನ್ನಾಗಿ ಎಲ್ಲವನ್ನೂ ಕೂಡ ಎರಡರಿಂದ ಮೂರು ನಿಮಿಷಗಳ ಕಾಲ ಬೇಯಿಸಿ ನಂತರ ಗ್ಯಾಸ್ ಆಫ್ ಮಾಡಿ. ಒಂದು ಬಟ್ಟಲಿಗೆ ಒಂದು ಗ್ಲಾಸ್ ತಣ್ಣೀರನ್ನು ಹಾಕಿ ಆರರಿಂದ ಏಳು ಹಪ್ಪಳವನ್ನು ತೆಗೆದುಕೊಂಡು ಹಪ್ಪಳಗಳನ್ನು ಒಂದೊಂದಾಗಿ ತಣ್ಣೀರಿನಲ್ಲಿ ಮುಳುಗಿಸಬೇಕು ಹೀಗೆ ಮಾಡುವುದರಿಂದ ಅಪ್ಪಳ ಸಾಫ್ಟ್ ಆಗುತ್ತದೆ.
ಮತ್ತೊಂದು ಕಡೆ ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಮೈದವನ್ನು ಹಾಕಿ ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಪೇಸ್ಟ್ ಮಾದರಿಯಲ್ಲಿ ಕಲಸಿಕೊಳ್ಳಿ. ಈಗ ಹಪ್ಪಳ ಸಾಫ್ಟ್ ಆದನಂತರ ಇದ್ದನ್ನು ಸುರುಳಿ ಆಕಾರಕ್ಕೆ ಸುತ್ತಿ ಒಳಗೆ ತಯಾರಿಸಿಕೊಂಡಂತಹ ಮಸಾಲವನ್ನು ಹಾಕ ಕ್ಲೋಸ್ ಮಾಡಬೇಕು. ನಂತರ ಒಂದೊಂದಾಗಿ ಕಾದ ಎಣ್ಣೆಯಲ್ಲಿ ಬಿಡಬೇಕು ಈ ರೀತಿ ಮಾಡುವುದರಿಂದ ಸಮೋಸ ಮಸಾಲ ಸಿದ್ಧವಾಗುತ್ತದೆ. ತುಂಬಾ ಸುಲಭವಾಗಿ ಕೇವಲ ಐದರಿಂದ ಹತ್ತು ನಿಮಿಷದಲ್ಲಿ ಈ ರೀತಿ ನೀವು ಮಾಡಬಹುದಾಗಿದೆ.