ಚಾರ್ಲಿ ಸಿನಿಮಾ ನೋಡಿ ರಶ್ಮಿಕಾಗೆ ಕ್ಯಾಕರಿಸಿ ಉಗಿದ ರಕ್ಷಿತ್ ಶೆಟ್ಟಿ ಅಭಿಮಾನಿಗಳು.ರಶ್ಮಿಕಾ ಮಧ್ಯಾಹ್ನ ಸದ್ಯಕ್ಕೆ ನ್ಯಾಷನಲ್ ಕ್ರಶ್ ಅಂತಾನೆ ಹೆಸರು ಪಡೆದುಕೊಂಡಿದ್ದಾರೆ ಅಷ್ಟೇ ಅಲ್ಲದೆ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಎಂಬ ಹೆಸರಿಗೂ ಕೂಡ ಪಾತ್ರರಾಗಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಇವರನ್ನು ಇಷ್ಟಪಡುವವರು ಕಡಿಮೆ ಸಂಖ್ಯೆ ಅಂತ ಹೇಳಬಹುದು. ಇದಕ್ಕೆ ಮುಖ್ಯ ಕಾರಣ ರಶ್ಮಿಕಾ ಮದ್ದಣ್ಣ ಅವರು ಕರ್ನಾಟಕಕ್ಕೆ ಮಾಡಿದಂತಹ ಅವಮಾನ ಹಾಗೂ ರಕ್ಷಿತ್ ಶೆಟ್ಟಿ ಗೆ ಮಾಡಿದಂತಹ ಮೋಸ ಈ ಒಂದು ಕಾರಣಕ್ಕಾಗಿಯೇ ಕರ್ನಾಟಕದ ಬಹಳಷ್ಟು ಜನ ರಶ್ಮಿಕಾ ಮಂದಣ್ಣ ಅವರನ್ನು ಇಷ್ಟಪಡುವುದಿಲ್ಲ. ರಶ್ಮಿಕಾ ಅವರು ಸಿನಿಮಾರಂಗಕ್ಕೆ ಕಿರಿಕ್ ಪಾರ್ಟಿ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಮೊಟ್ಟ ಮೊದಲ ಬಾರಿಗೆ ಹೀರೋಯಿನ್ ಆಗಿ ಪಾದರ್ಪಣೆ ಮಾಡಿದ್ದರು. ತದನಂತರ ತೆಲುಗಿನ ಗೀತ ಗೋವಿಂದಂ ಎಂಬ ಸಿನಿಮಾದಲ್ಲಿ ನಟಿಯಾದರು ಈ ಒಂದು ಸಿನಿಮಾ ಸಕ್ಸಸ್ ಆದ ನಂತರ ತೆಲುಗು ತಮಿಳು ಹೀಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಒಂದರ ಹಿಂದೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತ ಹೋದರು.

ತದನಂತರ ಕನ್ನಡದ ಮೇಲೆ ಇವರಿಗೆ ಅಸಡ್ಡೆ ಪ್ರಾರಂಭವಾಯಿತು ಅಂತ ಹೇಳಿದರೂ ಕೂಡ ತಪ್ಪಾಗಲಾರದು ಯಾವುದೇ ವೇದಿಕೆಗೆ ಹೋದರೂ ಕೂಡ ಬಹಳಷ್ಟು ನಟನಟಿಯರು ಕನ್ನಡದಲ್ಲಿ ಮೊದಲು ಮಾತನಾಡುತ್ತಾರೆ. ಆದರೆ ರಶ್ಮಿಕಾ ಅವರಿಗೆ ಕನ್ನಡ ಸರಿಯಾಗಿ ಮಾತನಾಡಲು ಕಷ್ಟವಾಗುತ್ತದೆ ಕನ್ನಡ ಭಾಷೆಗಿಂತ ನಾನು ಬೇರೆ ಭಾಷೆಯಲ್ಲಿ ಚೆನ್ನಾಗಿ ಮಾತನಾಡುತ್ತೇನೆ ಎಂದು ಹೇಳುವುದರ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರು. ಮತ್ತೊಂದೆಡೆ ರಕ್ಷಿತ್ ಶೆಟ್ಟಿ ಅವರ ಜೊತೆಯೂ ಕೂಡ ಬ್ರೇಕಪ್ ಮಾಡಿಕೊಂಡರು ಇವರಿಬ್ಬರಿಗೂ ಕೂಡ ನಿಶ್ಚಿತಾರ್ಥವಾಗಿತ್ತು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರೆ ಆದರೆ ಯಾವಾಗ ರಶ್ಮಿಕಾ ಮದ್ದಣ್ಣ ಅವರಿಗೆ ಸಿನಿಮಾಗಳಲ್ಲಿ ಆಫರ್ ಹೆಚ್ಚಾಯಿತೋ ಆಗ ಸಂಪೂರ್ಣವಾಗಿ ರಕ್ಷಿತ್ ಶೆಟ್ಟಿ ಅವರನ್ನು ಕಡೆಗಣಿಸಿದರು.

ಆದರೆ ರಕ್ಷಿತ್ ಶೆಟ್ಟಿ ಅವರು ಮಾತ್ರ ತಮ್ಮ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಕೂಡ ಅವೆಲ್ಲವನ್ನೂ ಕೂಡ ಬದಿಗಿಟ್ಟು ಒಂದರ ಹಿಂದೆ ಮತ್ತೊಂದು ಸಿನಿಮಾಗಳನ್ನು ಮಾಡಿದರೂ ಇದೀಗ ರಕ್ಷಿತ್ ಶೆಟ್ಟಿಯವರ ಚಾರ್ಲಿ ಎಂಬ ಸಿನಿಮಾ ರಾಜ್ಯದ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ ಸಿನಿಮಾ ನೋಡಿ ಬರುವಂತಹ ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ ಏಕೆಂದರೆ ಅಷ್ಟು ಅದ್ಭುತವಾಗಿದೆ ಈ ಸಿನಿಮಾ ನೋಡಿದಂತಹ ಅಭಿಮಾನಿಗಳು ರಶ್ಮಿಕಾ ಮದ್ದಣ್ಣ ಅವರಿಗಿಂತ ಮೂಕಪ್ರಾಣಿಯ ಎಷ್ಟೋ ವಾಸಿ ಅಂತ ಹೇಳುತ್ತಿದ್ದಾರೆ.

By admin

Leave a Reply

Your email address will not be published. Required fields are marked *