ಮೊಟ್ಟ ಮೊದಲ ಶ್ರೀ ಚಕ್ರ ಪ್ರತಿಷ್ಟಾಪಿಸಿದ್ದು ಹೇಗೆ ಗೊತ್ತಾ ? ಮಧುರೈ ಮೀನಾಕ್ಷಿಯನ್ನೇ ಶ್ರೀಚಕ್ರದಲ್ಲಿ ಬಂಧಿಸಿದ್ದರು ಶ್ರೀ ಶಂಕರಾಚಾರ್ಯರು.. » Karnataka's Best News Portal

ಮೊಟ್ಟ ಮೊದಲ ಶ್ರೀ ಚಕ್ರ ಪ್ರತಿಷ್ಟಾಪಿಸಿದ್ದು ಹೇಗೆ ಗೊತ್ತಾ ? ಮಧುರೈ ಮೀನಾಕ್ಷಿಯನ್ನೇ ಶ್ರೀಚಕ್ರದಲ್ಲಿ ಬಂಧಿಸಿದ್ದರು ಶ್ರೀ ಶಂಕರಾಚಾರ್ಯರು..

ಶ್ರೀಚಕ್ರ ಸ್ಥಾಪನೆಯಾಗಿದ್ದು ಹೇಗೆ ಗೊತ್ತಾ, ಭದ್ರಕಾಳಿ ಮಧುರೈ ಮೀನಾಕ್ಷಿ ಆದ ರೋಚಕ ಕಥೆ.ಯಂತ್ರಗಳಲ್ಲಿ ಅತ್ಯಂತ ಶ್ರೇಷ್ಠ ಎಂದರೆ ಅದು ಶ್ರೀಚಕ್ರ ಮೊಟ್ಟಮೊದಲು ಶಂಕರಾಚಾರ್ಯರು ಶ್ರೀಚಕ್ರವನ್ನ ಸ್ಥಾಪನೆ ಮಾಡಿದ್ದು ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ದೇವಿ ದೇವಾಲಯದಲ್ಲಿ ಹೆಚ್ಚು ಶ್ರೀ ಚಕ್ರ ಸ್ಥಾಪಿಸುತ್ತಾರೆ. ಅಂತಹ ಮನೆಗಳಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶಕ್ಕೆ ಆಸ್ವಾದ ಇರುವುದಿಲ್ಲ ಈ ಯಂತ್ರವು ಸ್ತ್ರೀ ಹಾಗೂ ಪುರುಷ ಶಕ್ತಿಗಳೆರಡರ ಪ್ರತೀಕ ಇದರ ಬಗ್ಗೆ ಉಪನಿಷತ್ ಗಳ ಕಾಲದಿಂದಲೂ ಉಲ್ಲೇಖ ಇದೆ. ಶ್ರೀ ಚಕ್ರವು ಜಗನ್ಮಾತೆಯಾದ ದೇವಿಯನ್ನು ಪ್ರತಿನಿಧಿಸುವ ಒಂದು ಯಂತ್ರ ಒಂಬತ್ತು ತ್ರಿಕೋನಗಳು ಒಂದಕ್ಕೊಂದು ಬೆಸೆದು ಕೊಂಡಂತೆ ಇರುವ ಈ ಯಂತ್ರವನ್ನು ನವಚಕ್ರವೆಂದು ಕರೆಯುತ್ತಾರೆ. ಈ ಎಲ್ಲಾ ತ್ರಿಕೋನಗಳು ಸೇರುವ ಮಧ್ಯದ ಬಿಂದುವಿನಲ್ಲಿ ನವಶಕ್ತಿ ಸ್ವರೂಪಳಾದ ದೇವಿ ನೆಲೆಸಿರುತ್ತಾಳೆ. ಅದರಿಂದಾಗಿಯೇ ಚಕ್ರಾಂತರ ವಾಸಿನಿ ಎಂದು ದೇವಿಯನ್ನು ವರ್ಣಿಸುತ್ತಾರೆ.

WhatsApp Group Join Now
Telegram Group Join Now

ಶ್ರೀ ಚಕ್ರ ಯಂತ್ರದ ಮೇಲ್ಮುಖಿ ಅಗ್ನಿ ತತ್ವವನ್ನು ಇದರ ಸುತ್ತಲೂ ಇರುವ ವೃತ್ತ ವಾಯುವ್ಯ ತತ್ವವನ್ನು ಹೊಂದಿದ್ದರೆ ಮಧ್ಯದ ಬಿಂದು ಜಲತತ್ವ ಮತ್ತು ಅದರ ತಳ ಭೂತತ್ವವನ್ನು ಪ್ರತಿಪಾದಿಸುತ್ತದೆ. ಶ್ರೀಚಕ್ರದ ಮೇಲೆ ಕಟ್ಟಿರುವ ಹಲವಾರು ದೇವಾಲಯಗಳಲ್ಲಿ ತುಮಕೂರು ತಾಲೂಕಿನ ಹೆಬ್ಬುರಿನ ಕಾಮಾಕ್ಷಿ ಶಾರದಾ ದೇವಾಲಯ ಹಾಗೂ ಬೋರ ಬುಧರ್ ನಲ್ಲಿ ಇರುವ ಬೌದ್ಧ ದೇವಾಲಯಗಳು ಸೇರಿವೆ. ಶ್ರೀ ಚಕ್ರವನ್ನು ಶಂಕರಾಚಾರ್ಯರು ಭಾರತದ ಹಲವಾರು ದೇವಾಲಯಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ ಅದರಲ್ಲಿಯೂ ಮುಖ್ಯವಾಗಿ ವಿಜಯವಾಡ ಕನಕದುರ್ಗ ದೇವಾಲಯದಲ್ಲಿ, ಶೃಂಗೇರಿ ಶಾರದಾಂಬ, ಕೊಲ್ಲಾಪುರ ಮಹಾಲಕ್ಷ್ಮಿ, ಕಂಚಿಯ ಕಾಮಾಕ್ಷಿ, ನಿಲ್ಲೂರು ಆಂಧ್ರ ಚೆನ್ನೈ ಕಾಮಾಕ್ಷಿ, ಶ್ರೀರಂಗಪಟ್ಟಣ ನಿಮಿಷಾಂಬ, ಶಿವನಸಮುದ್ರ ಮೀನಾಕ್ಷಿ, ಕೊಲ್ಲೂರು ಮೂಕಾಂಬಿಕಾ, ಶ್ರೀ ಶೈಲದ ಭ್ರಮರಾಂಬ, ತಿರುವತ್ತಿಯೂರ್ ಕಾಳಿ, ಕಟೀಲು ದುರ್ಗಾಪರಮೇಶ್ವರಿ, ಗೌಹತಿಯ ಕಾಮಾಕ್ಯ, ಕಾಶ್ಮೀರಿಯಾ ಜಗದಂಬ ಮುಖ್ಯವಾದವು.

ಇದಲ್ಲದೆ ಭಾರತದಲ್ಲಿ ಬೇರೆ ಬೇರೆ ಕಡೆಗಳಲ್ಲಿಯೂ ಹಾಗೂ ನೇಪಾಳದ ಪಶುಪತಿನಾಥ ದೇವಾಲಯದಲ್ಲಿಯೂ ಶ್ರೀ ಚಕ್ರಸ್ಥಾಪನೆಯಾಗಿದೆ. ಉತ್ತರಖಂಡದ ಅಲ್ಮೊರಾ ಜಿಲ್ಲೆಯ ನಾಮಗಡದಲ್ಲಿ ಶ್ರೀಕಲ್ಯಾಣಿಯಲ್ಲಿ 1600 ಕಿಲೋ ಗ್ರಾಂ ತೂಕದ ಯಂತ್ರಯಿದೆ. ಕ್ರಮಬದ್ಧವಾಗಿ ರಚಿಸಿದ ಶ್ರೀಚಕ್ರದ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಿದಾಗ ಶ್ರೀ ಲಲಿತಾ ದೇವಿಯ ಚಿತ್ರ ಗೋಚರಸಿರುವುದು ದಾಖಲಾಗಿದೆ. ಶಂಕರಾಚಾರ್ಯ ರಿಂದ ಶ್ರೀ ಚಕ್ರ ಮೊದಲು ಸ್ಥಾಪನೆಗೊಂಡದ್ದು ಮಧುರೈನಲ್ಲಿ, ಶಂಕರಾಚಾರ್ಯರು ಉಗ್ರಶಕ್ತಿ ಸೌಪಾನವಾಗಿದ್ದ ಶ್ರೀ ಚಕ್ರವನ್ನು ಪರಿಷ್ಕರಿಸಿ ಮಂಗಳ ಕರ ಶಕ್ತಿ ದೇವತೆಯ ಸಾತ್ವಿಕ ರೂಪವು ಉಗಮಿಸುವಂತೆ ಮಾಡಿದರು. ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ವಿಡಿಯೋ ನೋಡಿ.

[irp]


crossorigin="anonymous">