ದರ್ಶನ್ ಹೇಳಿದ ಆ ಒಂದು ಮಾತಿನಿಂದ ಅಪ್ಪು ಮನೆ ಅಭಿಮಾನಿಗಳು ಇಷ್ಟು ರೊಚ್ಚಿಗೆದ್ದಿರುವುದು ಯಾಕೆ?ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಇರುವುದು ಮೊದಲಿನಿಂದಲೂ ಎಲ್ಲರಿಗೂ ಗೊತ್ತೇ ಇದೆ. ಆದರೆ ಯಾವುದೇ ಸ್ಟಾರ್ ಅಭಿಮಾನಿಗಳ ನಡುವೆ ಈ ರೀತಿ ಗಲಾಟೆ ಆದರೂ ಕೂಡ ಅಪ್ಪು ಅಭಿಮಾನಿಗಳು ಅಪ್ಪು ಅಂತೆ ಎಲ್ಲರಿಗೂ ಒಂದೇ ರೀತಿ ಇರುತ್ತಿದ್ದರು ಹಾಗೂ ಎಲ್ಲರನ್ನೂ ಪ್ರೀತಿಸುತ್ತಿದ್ದರು ಎಲ್ಲರಿಗೂ ಸಪೋರ್ಟ್ ಮಾಡುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಅಪ್ಪು ಅಭಿಮಾನಿಗಳು ದರ್ಶನ್ ಅವರ ವಿರುದ್ಧ ಹೋರಾಟ ಮಾಡುತ್ತ ಬೀದಿಗಳಿದಿದ್ದಾರೆ. ದರ್ಶನ್ ಅವರು ಅಪ್ಪು ಅಭಿಮಾನಿಗಳಿಗೆ ಅವಮಾನ ಮಾಡಿದ್ದಾರೆ, ಅಪ್ಪು ಸಾವನ್ನು ಟೀಕಿಸಿದ್ದಾರೆ ಎಂದು ಇವರು ಆರೋಪ ಮಾಡುತ್ತಿದ್ದಾರೆ. ಹಾಗಾದರೆ ಕರ್ನಾಟಕದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದು ಕರೆಸಿಕೊಂಡಿರುವ ಕೋಟ್ಯಾಂತರ ಹೃದಯಗಳನ್ನು ಗೆದ್ದಿರುವ ದಚ್ಚು, ಅಪ್ಪು ಬಗ್ಗೆ ಅಷ್ಟೊಂದು ಅಭಿಮಾನ ಇಟ್ಟುಕೊಂಡಿದ್ದ ಡಿ ಬಾಸ್ ನಿಜಕ್ಕೂ ಈ ರೀತಿ ಮಾತನಾಡಿದ್ದಾರಾ ಅಥವಾ ಅವರ ಮಾತನ್ನು ತಿರುಚಲಾಗಿದೆಯಾ ಎನ್ನುವ ಅನುಮಾನ ಮೂಡುತ್ತದೆ.

ಕಳೆದ ವಾರ ಕ್ರಾಂತಿ ಸಿನಿಮಾಗೆ ಸಂಬಂಧಪಟ್ಟ ಹಾಗೆ ಸಂದರ್ಶನದಲ್ಲಿ ಮಾತನಾಡುವಾಗ ಮಾಧ್ಯಮದವರು ನನಗೆ ಸಪೋರ್ಟ್ ಮಾಡದಿದ್ದರೂ ಕ್ರಾಂತಿ ಸಿನಿಮಾದ ಬಗ್ಗೆ ಪ್ರಚಾರಕ್ಕೆ ಬಾರದೇ ಇದ್ದರೂ ನನ್ನ ಅಭಿಮಾನಿಗಳು ಅವರೇ ಸ್ವಯಂ ಚಾಲಿತವಾಗಿ ಸ್ಟ್ಯಾಂಡ್ ತೆಗೆದುಕೊಂಡು ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಮ್ಮ ಅಭಿಮಾನಿಗಳ ಬಗ್ಗೆ ಹೇಳಿಕೊಳ್ಳುತ್ತಿರುವಾಗ ಮಾತಿನ ಭರದಲ್ಲಿ ನಾವೆಲ್ಲರೂ ಒಬ್ಬ ಕಲಾವಿದ ಸತ್ತ ನಂತರ ಅವರ ಬಗ್ಗೆ ಅಲ್ಲಿ ಇಲ್ಲಿ ಕಾರ್ಯಕ್ರಮಗಳನ್ನು ಮಾಡುವುದು ಮತ್ತು ಅವರ ಬಗ್ಗೆ ಅಭಿಮಾನಿ, ಪ್ರೀತಿ ತೋರುವುದನ್ನು ನೋಡಿದ್ದೇವೆ. ಇತ್ತೀಚೆಗೆ ಪುನೀತ್ ರಾಜಕುಮಾರ್ ಅವರು ತೀರಿಕೊಂಡಾಗ ಅಭಿಮಾನಿಗಳು ಎಷ್ಟು ಪ್ರೀತಿ ಕೊಟ್ಟರು ಎನ್ನುವುದನ್ನು ನೋಡಿದ್ದೇವೆ ಆದರೆ ನನಗೆ ಆ ಪ್ರೀತಿಯನ್ನು ಬದುಕಿರುವಾಗಲೇ ನನ್ನ ಅಭಿಮಾನಿಗಳು ಕೊಟ್ಟಿದ್ದಾರೆ ಇದನ್ನೆಲ್ಲ ನೋಡುತ್ತಿದ್ದರೆ ಬದುಕಿನಲ್ಲಿ ಇಷ್ಟೇ ಸಾಕು ಎನಿಸಿಬಿಡುತ್ತದೆ ಎಂದಿದ್ದಾರೆ.

ಅವರು ಹೇಳಿದ ಈ ಮಾತುಗಳನ್ನು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಅದನ್ನು ನೋಡಿದ ಅಪ್ಪು ಅಭಿಮಾನಿಗಳು ಹಾಗಾದರೆ ಅಪ್ಪು ಇದ್ದಾಗ ನಾವು ಪ್ರೀತಿ ತೋರಿಸಲೇ ಇಲ್ಲವಾ ಎಂದು ಮಾತುಗಳನ್ನು ಅಪಾರ್ಥ ಮಾಡಿಕೊಂಡು ಕ್ರಾಂತಿ ಸಿನಿಮಾವನ್ನು ರಿಲೀಸ್ ಆಗಲು ಬಿಡುವುದಿಲ್ಲ ಎಂದು ಹೊಸದುರ್ಗ, ಬೆಂಗಳೂರು, ವಿಜಯನಗರ ಮುಂತಾದ ಕಡೆ ರೋಡಿಗಿಳಿದು ಕ್ಷಮೆ ಕೇಳಿ ಎಂದು ಹೋರಾಟ ಮಾಡುತ್ತಿದ್ದಾರೆ. ಅದೇ ಇಂಟರ್ವ್ಯೂ ಅಲ್ಲಿ ಅಪ್ಪು ಅವರ ಬಗ್ಗೆ ಹಲವು ಒಳ್ಳೆಯ ಮಾತುಗಳನ್ನು ದರ್ಶನ್ ಹೇಳಿದ್ದಾರೆ ಆದರೆ ಅವರು ಹೇಳಿದ ಆ ಮಾತುಗಳನ್ನು ಬಿಟ್ಟು ಈ ಒಂದು ಮಾತನ್ನು ಅಪ್ಪು ಅಭಿಮಾನಿಗಳು ದೊಡ್ಡದು ಮಾಡುತ್ತಿದ್ದಾರೆ. ಇತ್ತ ದರ್ಶನ್ ಅಭಿಮಾನಿಗಳು ನಮ್ಮ ಬಾಸ್ ಮಾತನಾಡುವುದರಲ್ಲಿ ತಪ್ಪೇ ಇಲ್ಲ ಎಂದು ವಾದಿಸುತ್ತಿದ್ದಾರೆ.

Leave a Reply

Your email address will not be published. Required fields are marked *