ಪಾತ್ರೆ ತೊಳೆಯುವ ಯಂತ್ರದ ಒಳಗೆ ಹೇಗೆ ತೊಳೆಯುತ್ತೆ ಅಂತ ನೋಡಿ..ಡಿಷ್ ವಾಷರ್ ನ ಸಂಪೂರ್ಣ ಕೆಲಸ..! - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಪಾತ್ರೆ ತೊಳೆಯುವ ಯಂತ್ರ ಒಳಗಡೆ ಹೇಗೆ ಕೆಲಸ ಮಾಡುತ್ತದೆ ಗೊತ್ತಾ?ಈಗಿನ ಕಾಲದಲ್ಲಿ ಮನುಷ್ಯ ಎಲ್ಲದಕ್ಕೂ ಮಿಷನ್ ಮೇಲೆ ಡಿಪೆಂಡ್ ಆಗುವ ಪರಿಸ್ಥಿತಿ ಇದೆ. ಯಾಕೆಂದರೆ ಕೆಲವೊಮ್ಮೆ ಸಮಯದ ಅಭಾವ ಹಾಗೂ ಕೆಲವೊಮ್ಮೆ ಆರೋಗ್ಯ ಸುಸ್ತುತಿಯಲ್ಲಿ ಇರುವುದೇ ಇಲ್ಲ ಹೀಗಾಗಿ ಈಗ ಮನುಷ್ಯನು ತಾನು ದೈಹಿಕ ಶಕ್ತಿ ಉಪಯೋಗಿಸಿ ಕೆಲಸ ಮಾಡುವುದಕ್ಕಿಂತ ಯಂತ್ರಗಳ ಸಹಾಯದಿಂದ ತನ್ನ ಕೆಲಸಗಳನ್ನು ಮಾಡಿಕೊಳ್ಳುತ್ತಾನೆ. ಮೊದಲು ಕೈಗಾರಿಕೆಗಳಲ್ಲಿ ಯಂತ್ರಗಳ ಸಹಾಯದಿಂದ ಮನುಷ್ಯ ಮಾಡಬೇಕಾದ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ಇದೀಗೆ ಅದು ಮನೆ ಕೆಲಸಕ್ಕೂ ಬಂದು ಅಡುಗೆ ಮನೆಗಳಲ್ಲೂ ಕೂಡ ಈಗ ಮಿಷನ್ ಗಳದ್ದೇ ರಾಜ್ಯಭಾರ ಶುರುವಾಗಿದೆ. ಅದರಲ್ಲೂ ಈಗಿನ ಕಾಲದ ಹೆಣ್ಣು ಮಕ್ಕಳು ಸಹ ಪುರುಷರಿಗೆ ಸಮಾನವಾಗಿ ಹೊರಗಡೆ ದುಡಿಯಲು ಹೋಗುತ್ತಿರುವುದರಿಂದ ಅವರಿಗೆ ಅನುಕೂಲವಾಗಲು ಈ ರೀತಿ ಮನೆಗಳಲ್ಲಿ ಮಿಷನ್ ಖರೀದಿಸುವುದು ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ ವಾಷಿಂಗ್ ಮಿಷನ್, ವ್ಯಾಕ್ಯೂಮ್ ಕ್ಲೀನರ್ ಇಂತಹ ಯಂತ್ರಗಳನ್ನು ಮನೆ ಕೆಲಸಕ್ಕಾಗಿ ಬಳಸಲಾಗುತ್ತಿತ್ತು.

ಇನ್ನು ಅಡುಗೆ ಮನೆ ವಿಚಾರವಾಗಿ ಹೇಳುವುದಾದರೆ ಆಡಿಸುವ ಗುಂಡಿನ ಬದಲಾಗಿ ಆ ಜಾಗವನ್ನು ಮಿಕ್ಸಿಗಳು ಹಾಗೂ ಗ್ರೈಂಡರ್ ಗಳು ತುಂಬಿಕೊಂಡು ನಾವು ದೈಹಿಕ ಶ್ರಮ ಉಪಯೋಗಿಸಿ ಮಾಡುವ ಸಮಯಕ್ಕಿಂತ ಕಡಿಮೆ ಸಮಯದಲ್ಲಿ ಮತ್ತು ಅದಕ್ಕಿಂತಲೂ ಉತ್ತಮವಾಗಿ ಇವುಗಳು ನಮ್ಮ ಕೆಲಸ ಮಾಡಿ ಕೊಡುತ್ತಿವೆ. ಹಾಗೂ ಮೈಕ್ರೋ ಓವೆನ್ ಮೈಕ್ರೋವೇವ್ ಇವುಗಳು ಸಹ ಗ್ಯಾಸ್ ಸ್ಟವ್ ರೀತಿ ಅಡುಗೆ ಮಾಡಲು ಹಾಗೂ ಮಾಡಿದ ಅಡುಗೆಯನ್ನು ಬಿಸಿ ಮಾಡಲು ಗೃಹಿಣಿಯರಿಗೆ ಸಹಾಯ ಮಾಡುತ್ತಿವೆ. ಇನ್ನು ರೆಫ್ರಿಜರೇಟರ್ಗಳು ಇಲ್ಲದ ಮನೆ ಇಲ್ಲವೇ ಇಲ್ಲ ಎನ್ನಬಹುದು, ಪ್ರತಿದಿನ ಮಾರ್ಕೆಟ್ ಗೆ ಹೋಗುವ ಸಮಯ ಉಳಿಸಲು ವಾರಕೊಮ್ಮೆ ಮಾರ್ಕೆಟಿಗೆ ಹೋಗಿ ವಾರಕ್ಕಾಗುವಷ್ಟು ಹಣ್ಣು ತರಕಾರಿ ದಿನಸಿಗಳ ತಂದು ಇದರಲ್ಲಿ ತುಂಬಿಟ್ಟುಕೊಳ್ಳುತ್ತಾರೆ. ಕುಕ್ಕರ್ಗಳಂತೂ ಅಕ್ಷಯ ಪಾತ್ರೆಗಳಿಗಾಗಿ ಎಷ್ಟು ಕೆಜಿ ಅನ್ನವಾದರೂ ಬೆಯಿಸಿ ಕೊಡುವ ಸಾಮರ್ಥ್ಯಗಳನ್ನು ಹೊಂದಿದೆ.

ಇನ್ನು ಇವುಗಳ ಜೊತೆ ಪಾತ್ರೆ ತೊಳೆಯಲು ಸಹಾಯವಾದರೆ ಸಾಕು ಎನ್ನುವುದು ಅನೇಕ ಹೆಣ್ಣು ಮಕ್ಕಳ ಆಸೆ ಆಗಿತ್ತು. ಈಗ ಆ ಜಮಾನ ಕೂಡ ಬಂದಿದೆ ಡಿಶ್ ವಾಶರ್ಗಳು ಈಗ ಮಾರ್ಕೆಟ್ ಗಳಲ್ಲಿ ಹೆಚ್ಚು ಪ್ರಚಲಿತವಾಗಿದ್ದು, ಹೆಂಗಸರು ಮುಗಿಬಿದ್ದು ಇವುಗಳನ್ನು ಖರೀದಿಸುತ್ತಿದ್ದಾರೆ. ಡಿಶ್ ವಾಶರ್ ಗಳಲ್ಲಿ ಸ್ಟೆಪ್ ಬೈ ಸ್ಟೆಪ್ ರ್ಯಾಕ್ ಗಳು ಇರುತ್ತವೆ. ಇಲ್ಲಿ ತಟ್ಟೆಗಳು ಹಾಗೂ ಪಾತ್ರೆಗಳನ್ನು ಅವುಗಳನ್ನು ತುಂಬಿಸುವ ಜಾಗದಲ್ಲಿ ವ್ಯವಸ್ಥಿತವಾಗಿ ಜೋಡಿಸಬೇಕು ಅಲ್ಲದೇ ಬೌಲ್ ಗಳು ಚಿಕ್ಕ ಚಿಕ್ಕ ಕಪ್ ಗಳು ಲೋಟಗಳು ಎಲ್ಲದಕ್ಕೂ ಕೂಡ ಪ್ರತ್ಯೇಕ ಸ್ಪೇಸ್ ಇರುತ್ತದೆ. ಆ ಜಾಗಗಳಲ್ಲಿ ಅವುಗಳನ್ನು ತುಂಬಿಸಿ ಕ್ಲೋಸ್ ಮಾಡಿ ಮಿಷನ್ ಅನ್ನು ಸೆಟ್ ಮಾಡಿ ಆನ್ ಮಾಡಿದರೆ ಸಾಕು ನಿಮ್ಮ ಪಾತ್ರಗಳೆಲ್ಲಾ ಕ್ಲೀನ್ ಆಗಿ ಹೊರಗಡೆ ಬರುತ್ತವೆ ಮತ್ತು ಇದಕ್ಕಾಗಿ ಹೆಚ್ಚು ನೀರು ಹಿಡಿಯುತ್ತದೆ ಎಂದು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಕೇವಲ ಒಂದು ಬಕೆಟ್ ನೀರಲ್ಲಿ ಅದನ್ನೇ ರೀ ಸೈಕಲ್ ಮಾಡಿಕೊಂಡು ಕ್ಲೀನ್ ಮಾಡಿ ಕೊಡುತ್ತವೆ.

Leave a Reply

Your email address will not be published. Required fields are marked *