ಪುನೀತ್ ರಾಜ್ ಕುಮಾರ್ ಅವರನ್ನು ಆದರ್ಶವಾಗಿಟ್ಟುಕೊಂಡ ಈ ಹುಡುಗಿಯ ಕುಟುಂಬ.ಸಾವಿನಲ್ಲೂ ಸಾರ್ಥಕತೆ ರಕ್ಷಿತಾ ಅಂಗಾಂಗಳು ದಾನ. - Karnataka's Best News Portal

ಪುನೀತ್ ರಾಜಕುಮಾರ್ ಸಾಧನೆ ನಮಗೆ ಪ್ರೇರಣೆ ರಕ್ಷಿತಾ ಅಂಗಾಂಗಗಳು ದಾನ ||ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಮಾಡುತ್ತಿದ್ದಂತಹ ರಕ್ಷಿತಾ ಎಂಬ 17 ವರ್ಷದ ಯುವತಿ ನಗರದ ಎಐಟಿ ವೃತ್ತದ ಸಮೀಪ ಬಸ್ ಇಳಿಯುವಾಗ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿತು ನಂತರ ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದರಿಂದ ರಕ್ಷಿತಾ ಅವರನ್ನು ಉಳಿಸಿ ಕೊಳ್ಳಲು ಆಗಲಿಲ್ಲ ಆದರೆ ಇವರ ದೇಹದಲ್ಲಿರು ವಂತಹ ಪ್ರತಿಯೊಂದು ಅಂಗಾಂಗಗಳನ್ನು ಕೂಡ ದಾನ ಮಾಡುವುದಕ್ಕಾಗಿ ಇವರ ಅಣ್ಣ ಮತ್ತು ರಕ್ಷಿತಾ ಅವರ ಪೋಷಕರ ಸಮ್ಮತಿಯನ್ನು ಪಡೆದು ಜಿಲ್ಲಾ ಆಸ್ಪತ್ರೆ ಯಲ್ಲಿ ಕೆಲವೊಂದು ಪ್ರಕ್ರಿಯೆಗಳನ್ನು ನಡೆಸಲಾಯಿತು ಹಾಗೂ ಇದಕ್ಕೆ ತಜ್ಞರ ತಂಡ ಆಗಮಿಸುತ್ತಿದ್ದು ಇವರು ಬೆಳಿಗ್ಗೆ 8 ಗಂಟೆ ಯಿಂದ 11 ಗಂಟೆಯವರೆಗೆ ರಕ್ಷಿತಾ ಅವರ ಅಂಗಾಂಗಗಳನ್ನು ತೆಗೆಯುವಂತಹ ಪ್ರಕ್ರಿಯೆಯನ್ನು ಮಾಡುತ್ತಿದ್ದಾರೆ.

ಹಾಗೂ ರಕ್ಷಿತಾಳಿಂದ ತೆಗೆದಂತಹ ಅಂಗಾಂಗಗಳನ್ನು ಒಂಬತ್ತು ಮಂದಿಗೆ ಜೋಡಣೆ ಮಾಡಲಾಗಿದ್ದು ಹೃದಯ ಯಕೃತ್ ಮೂತ್ರಕೋಶ ಕಣ್ಣು ಇವುಗಳನ್ನು ಒಂಬತ್ತು ಮಂದಿಗೆ ಜೋಡಿಸಲಿದ್ದಾರೆ ಹಾಗೂ ಸಾವಿನಲ್ಲಿ ಸಾರ್ಥಕತೆಯನ್ನು ಮೆರೆದಂತಹ ರಕ್ಷಿತಾ ಳನ್ನು ಪ್ರತಿಯೊಬ್ಬರೂ ಮೆಚ್ಚಲೇಬೇಕು ಹಾಗೂ ಈಕೆ ಓದುತ್ತಿದ್ದ ನಗರದ ಬಸವನಹಳ್ಳಿಯ ಪಿಯು ಕಾಲೇಜಿನ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು ರಕ್ಷಿತಾ ಅವರ ದೇಹವನ್ನು ನೋಡಲು ಗ್ರಾಮದ ಗ್ರಾಮಸ್ಥರು ಶಾಲೆಯ ಶಿಕ್ಷಕರು ಮತ್ತು ರಕ್ಷಿತಾಳ ಆಪ್ತ ಸ್ನೇಹಿತರು ಎಲ್ಲರೂ ಕೂಡ ರಕ್ಷಿತಾಳ ಮೃತ ದೇಹವನ್ನು ನೋಡಲು ಆಗಮಿಸಿದ್ದರು ರಕ್ಷಿತಾಳ ಮೃತ ದೇಹವನ್ನು ನೋಡುತ್ತಾ ಶಿಕ್ಷಕರು ಮತ್ತು ಸ್ನೇಹಿತರು ಎಲ್ಲರೂ ಕೂಡ ಭಾವನಾತ್ಮಕವಾಗಿ ಕಂಬನಿಯನ್ನು ಮಿಡಿದರು ಇಂತಹ ದೃಶ್ಯವನ್ನು ನೋಡಲು ಎಲ್ಲರಿಗೂ ಕೂಡ ಒಂದು ವೇಳೆ ಕರುಳು ಕಿತ್ತಹಾಗೆ ಅನುಭವ ಆಗುತ್ತದೆ.

ರಕ್ಷಿತಾ ಅವರು ಕಡೂರು ತಾಲೂಕಿನ ಸೋಮನ ಹಳ್ಳಿಯ ತಾಂಡ್ಯದವರು ಇವರ ತಂದೆ ಶೇಖರ್ ನಾಯಕ್ ತಾಯಿ ಲಕ್ಷ್ಮೀಬಾಯಿ ಇವರ ತಾಯಿ ಲಕ್ಷ್ಮಿ ಬಾಯಿ ನನ್ನ ಮಗಳನ್ನು ಕಳೆದುಕೊಂಡು ಬಹಳ ದುಃಖದಿಂದ ಇದ್ದೇವೆ ಆದರೆ ಅವಳ ಅಂಗಾಂಗವನ್ನು ದಾನ ಮಾಡುವುದರ ಮೂಲಕ ಸ್ವಲ್ಪ ಮಟ್ಟಿಗೆ ನಾವು ಖುಷಿಯನ್ನು ಪಡುತ್ತೇವೆ ಆದರೆ ಅವಳ ಸಾವಿನ ದುಃಖವನ್ನು ಯಾರಿಂದಲೂ ಕೂಡ ತುಂಬಲು ಆಗುವುದಿಲ್ಲ ಎಂದು ಹೇಳಿದ್ದಾರೆ ಹಾಗೂ ರಕ್ಷಿತಾಳನ್ನು ಕಳೆದುಕೊಂಡಂತಹ ಸ್ನೇಹಿತರು ಅವಳ ಶರೀರವನ್ನು ನೋಡುತ್ತಿದ್ದಂತೆ ಎಲ್ಲರೂ ಮೌನರಾಗಿ ಕಣ್ಣೀರನ್ನು ಹಾಕುತ್ತಿದ್ದರು ಇಂತಹ ದೃಶ್ಯವನ್ನು ನೋಡಿದರೆ ಕರುಳು ಹಿಂಡುವ ಹಾಗೆ ಇತ್ತು ರಕ್ಷಿತಾಳ ಸಾವಿನ ಸುದ್ದಿಯನ್ನು ತಿಳಿದಂತಹ ಪ್ರತಿಯೊಬ್ಬರೂ ಕೂಡ ಗ್ರಾಮಸ್ಥರು ಈಗಲೂ ಕೂಡ ಸ್ವಲ್ಪ ಸಮಯ ಮೌನರಾಗಿ ಬಿಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *