ಥಿಯೇಟರ್ ನಲ್ಲಿ ನಡೆಯಿತು ಪವಾಡ ಮುಂಬೈನಲ್ಲಿ ಸಿನಿಮಾ ಆದರೂ ಕೇವಲ ಹಿಂದಿಯಲ್ಲಿ 100 ಕೋಟಿ..ಇಷ್ಟಕ್ಕೆ ನಿಲ್ಲೊಲ್ಲ ಇದು... - Karnataka's Best News Portal

ಥಿಯೇಟರ್ ನಲ್ಲಿ ಕಾಂತಾರ ದೈವ ಮಾಡಿದ ಪವಾಡ ನೋಡಿ||ಹಿಂದಿ ಟ್ರೈಲರ್ ರಿಲೀಸ್ ಆದ ಮೇಲೆ ಆಗಿದ್ದೇನು??
ಮುಂಬೈನಲ್ಲಿ ಈ ಕಾಂತರಾ ಸಿನಿಮಾ ಪವಾಡವನ್ನು ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಯಾಕೆ ಎಂದರೆ ಈ ಕಾಂತಾರ ಸಿನಿಮಾವನ್ನು ಡೈರೆಕ್ಟ್ ಆಗಿ ಕನ್ನಡದಲ್ಲಿಯೇ ಮೊಟ್ಟ ಮೊದಲನೆಯದಾಗಿ ಎಲ್ಲಾ ಕಡೆಯಲ್ಲಿಯೂ ರಿಲೀಸ್ ಮಾಡಿದ್ದರು ಮೊದಲೆರಡು ದಿನ ಮುಂಬೈ ಥಿಯೆಟರ್ ನಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಈ ಸಿನಿಮಾವನ್ನು ನೋಡುವುದಕ್ಕೆ ಬಂದಿದ್ದರು ಆದರೆ ಇವತ್ತು ನೂರಕ್ಕೂ ಹೆಚ್ಚು ಶೋಗಳು ಮುಂಬೈನ ಲ್ಲಿ ರನ್ ಆಗುತ್ತಿದೆ ಅದರಲ್ಲೂ ಯಾವುದೇ ಕನ್ನಡ ಸಿನಿಮಾ ಕನ್ನಡ ಭಾಷೆಯಲ್ಲಿ ರಿಲೀಸ್ ಆದಂತಹ ಸಿನಿಮಾ ಮುಂಬೈನಲ್ಲಿ ಈ ಒಂದು ರೆಕಾರ್ಡ್ ಅನ್ನು ಮಾಡಿಯೇ ಇರಲಿಲ್ಲ ಆದರೆ ರಿಷಬ್ ಶೆಟ್ಟಿ ಅವರು ಕನ್ನಡದ ಕಾಂತಾರ ಸಿನಿಮಾವನ್ನು ಹಿಂದಿಯವರು ಕನ್ನಡದಲ್ಲಿಯೇ ನೋಡಿ ಮೆಚ್ಚುವಂತೆ ಮಾಡಿದ್ದಾರೆ.

ಇವಾಗ ನಾರ್ತ್ ಇಂಡಿಯಾ ಸೈಡ್ ಕಾಂತರಾ ಸಿನಿಮಾ ವು ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ ಸಿನಿಮಾ ಮುಗಿದರೂ ಕೂಡ ಯಾರು ಕೂಡ ಥಿಯೇಟರ್ ನಲ್ಲಿ ಸೀಟ್ ನಿಂದ ಎದ್ದೇಳುವುದಕ್ಕೆ ಮನಸ್ಸು ಮಾಡುತ್ತಿಲ್ಲ ಅಷ್ಟು ಭಾವನಾತ್ಮಕವಾಗಿ ಹತ್ತಿರ ಆಗುತ್ತಿದೆ ಈ ಕಾಂತಾರ ಸಿನಿಮಾ ಕನ್ನಡ ಭಾಷೆ ಬಾರದಿರುವವರು ಕೂಡ ಕಾಂತಾರ ಸಿನಿಮಾವನ್ನು ನೋಡುವಾಗ ಮೈ ರೋಮಾಂಚನ ಆಗುತ್ತದೆ ಎಂದರೆ ನಿಜಕ್ಕೂ ಇದೊಂದು ಪವಾಡ ಆ ದೈವವೇ ರಿಷಬ್ ಶೆಟ್ಟಿ ಅವರ ಕೈಯಿಂದ ಈ ಸಿನಿಮಾವನ್ನು ಮಾಡಿಸಿದೆ ಎನ್ನುವ ರೀತಿ ಮೂಡಿ ಬಂದಿದೆ ಹಾಗಾಗಿ ಈ ವರ್ಷದಲ್ಲಿ ರಿಷಬ್ ಶೆಟ್ಟಿ ಅವರಿಗೆ ನ್ಯಾಷನಲ್ ಅವಾರ್ಡ್ ಬರುವುದು ನೂರಕ್ಕೆ ನೂರು ಸತ್ಯ ಎನ್ನುವಂತೆ ಇದೆ.

ಬುಕ್ ಮೈ ಶೋನಲ್ಲಿ 99% ರೇಟಿಂಗ್ ಪಡೆದು ಅಮೋಘ ದಾಖಲೆಯನ್ನು ಮಾಡಿದೆ ಈ ಕಾಂತಾರ ಸಿನಿಮಾ ಇನ್ನು ಬಾಕ್ಸ್ ಆಫೀಸ್ ವಿಚಾರಕ್ಕೆ ಬರುವುದಾ ದರೆ ಈಗಾಗಲೇ 55 ಕೋಟಿಗೂ ಹೆಚ್ಚಿನ ಹಣವನ್ನು ಗಳಿಸಿಕೊಂಡಿದೆ ಇವತ್ತು ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ ಹಾಗೂ ಅಕ್ಟೋಬರ್ 15ನೇ ತಾರೀಖಿನಂದು ತೆಲುಗಿನ ಲ್ಲಿ ಹಾಗೂ ಅಕ್ಟೋಬರ್ 14ನೇ ತಾರೀಖಿನಂದು ಹಿಂದಿ ಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ ಕೆ ಜಿ ಎಫ್ 2 ಚಿತ್ರ ಹೇಗೆ ಎಲ್ಲ ಭಾಷೆಯಲ್ಲಿಯೂ ಹೆಚ್ಚಿನ ಹೆಸರನ್ನು ಪಡೆದುಕೊಂಡಿತು ಅದೇ ರೀತಿ ಈ ಕಾಂತಾರ ಸಿನಿಮಾ ಕೂಡ ಅದಕ್ಕಿಂತ ಹೆಚ್ಚಿನ ದಾಖಲೆಯನ್ನು ಬರೆಯುತ್ತದೆ ಎಂದು ಹೆಚ್ಚಿನ ಜನ ಅಭಿಪ್ರಾಯವನ್ನು ಹೇಳುತ್ತಾರೆ. ಅಷ್ಟೇ ಅಲ್ಲದೆ ಒಬ್ಬ ವ್ಯಕ್ತಿ ಈ ಸಿನಿಮಾವನ್ನು ನೋಡಿ ಇನ್ನೂ 10 ಜನಕ್ಕೆ ಹೇಳುವಂತಹ ಒಳ್ಳೆಯ ಸಿನಿಮಾ ಆಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *