ಅಪ್ಪಿತಪ್ಪಿಯೂ ಕೂಡ ಈ ಹೂಗಳಿಂದ ದೇವರಿಗೆ ಪೂಜೆಯನ್ನು ಮಾಡಬೇಡಿ.ದೋಷ ಉಂಟಾಗುತ್ತೆ.ದೇವರ ಪೂಜೆಗೆ ಯಾವ ಹೂವು ಶ್ರೇಷ್ಠ ನೋಡಿ - Karnataka's Best News Portal

ಅಪ್ಪಿತಪ್ಪಿಯೂ ಕೂಡ ಈ ಹೂಗಳಿಂದ ದೇವರಿಗೆ ಪೂಜೆಯನ್ನು ಮಾಡಬೇಡಿ.ದೋಷ ಉಂಟಾಗುತ್ತೆ.ದೇವರ ಪೂಜೆಗೆ ಯಾವ ಹೂವು ಶ್ರೇಷ್ಠ ನೋಡಿ

ಯಾವ ದೇವರಿಗೆ ಯಾವ ಹೂವಿನ ಪೂಜೆ ನಿಷಿದ್ಧ ಗೊತ್ತಾ?
ಹೂವುಗಳೆಂದರೆ ಎಲ್ಲರಿಗೂ ಇಷ್ಟ ಮೃದುವಾದ ಹಾಗೂ ಒಳ್ಳೆಯ ಸುವಾಸನೆ ಬೀರುವ ಬಣ್ಣಗಳಿಂದ ಕೂಡಿದ ಈ ಹೂಗಳನ್ನು ನೋಡಿದರೆ ಮನಸ್ಸಿಗೆ ಬಹಳ ಸಂತೋಷ ಆಗುತ್ತದೆ. ಅಲ್ಲದೆ ಹೂವುಗಳು ಪ್ರಮುಖವಾಗಿ ದೇವರ ಪೂಜೆಗೆ ಎಂದೆ ಹೆಚ್ಚಿನ ಜನರು ಬಳಸುತ್ತಾರೆ ಹಾಗೂ ಅಲಂಕಾರಕ್ಕೆ ಕೂಡ ಹೂವುಗಳನ್ನು ಬಳಸುತ್ತಾರೆ ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳು ಮತ್ತು ಔಷಧಿಯ ಕಾರಣದಿಂದ ಕೂಡ ಹೂವುಗಳನ್ನು ಬಳಕೆ ಮಾಡುತ್ತಿದ್ದರು ಕೂಡ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೂಗಳು ಎಂದರೆ ಅದು ದೇವರ ಪೂಜೆಗೆ ಅರ್ಪಿಸುವುದು ಎಂದೇ ಭಾವನೆ ಇದೆ. ಆದರೆ ಯಾವ ದೇವರಿಗೆ ಯಾವ ಹೂವುಗಳಿಂದ ಪೂಜೆ ಮಾಡಿದರೆ ಶೀಘ್ರವಾಗಿ ಫಲ ಸಿಗುತ್ತದೆ ದೇವರು ಬೇಗ ಪ್ರಸನ್ನರಾಗುತ್ತಾರೆ ಎಂದು ತಿಳಿದುಕೊಳ್ಳುವುದು ಮುಖ್ಯ, ಅಲ್ಲದೆ ಕೆಲವು ದೇವರುಗಳಿಂದ ಕೆಲವು ಪುಷ್ಪಗಳಿಂದ ಪೂಜೆ ಮಾಡಲೇಬಾರದು. ಅವುಗಳನ್ನು ಕೂಡ ತಪ್ಪದೆ ತಿಳಿದುಕೊಳ್ಳಬೇಕು.

ಮೊದಲಿಗೆ ಗಣೇಶನಿಗೆ ಯಾವುದೇ ಕಾರಣಕ್ಕೂ ತುಳಸಿ ದಳದಿಂದ ಪೂಜೆ ಮಾಡಲೇಬಾರದು ಕಾರಣ ಏನೆಂದರೆ, ಧರ್ಮಚ ಎನ್ನುವ ರಾಕ್ಷಸ ಯುವರಾಣಿಯು ಗಣೇಶನನ್ನು ಕುರಿತು ತಪಸ್ಸು ಮಾಡುತ್ತಾಳೆ ಹಾಗೂ ಅವಳ ಕೋರಿಕೆ ಗಣೇಶನನ್ನು ಮದುವೆ ಆಗುವುದು ಆಗಿರುತ್ತದೆ. ಆದರೆ ಗಣೇಶ ಬ್ರಹ್ಮಚಾರಿ ಆದ ಕಾರಣ ಅವಳ ಕೋರಿಕೆಯನ್ನು ಪೂರೈಸುವುದಿಲ್ಲ ಬಳಿಕ ತನ್ನ ತಪ್ಪಿನ ಅರಿವು ಮಾಡಿಕೊಂಡ ಆ ರಾಕ್ಷಸ ಯುವರಾಣಿಯು ಗಣೇಶನ ಬಳಿ ಶಾಪವಿಮೋಚನೆ ಕೇಳುತ್ತಾಳೆ. ಆಗ ಗಣೇಶನು ಮುಂದಿನ ಜನ್ಮದಲ್ಲಿ ನೀನು ತುಳಸಿ ದಳವಾಗಿ ಜನ್ಮ ತಾಳು ಎಂದು ಹೇಳಿರುತ್ತಾರೆ. ಈ ಕಾರಣಕ್ಕಾಗಿ ಯಾವುದೇ ಕಾರಣಕ್ಕೂ ವಿನಾಯಕನಿಗೆ ತುಳಸಿ ದಳಗಳಿಂದ ಪೂಜೆ ಮಾಡಬಾರದು ಅದು ಗಣೇಶನಿಗೆ ಇಷ್ಟ ಆಗುವುದಿಲ್ಲ ಇದರ ಬದಲು ಕೆಂಪು ಬಣ್ಣದ ಪುಷ್ಪಗಳು ದಾಸವಾಳ ಗುಲಾಬಿ ಮತ್ತು ಮುಖ್ಯವಾಗಿ ಗರಿಕೆ ಹೂವಿನಿಂದ ಗಣೇಶನನ್ನು ಪೂಜಿಸಿದರೆ ವಿಶೇಷ ಫಲಗಳು ಸಿಗುತ್ತವೆ.

WhatsApp Group Join Now
Telegram Group Join Now
See also  ಶ್ರೀಶೈಲ ಪಾದಯಾತ್ರೆಗೆ ಹೋದವರ ಪರಿಸ್ಥಿತಿ ಹೇಗಿದೆ ಗೊತ್ತಾ ? ಈ ವಿಡಿಯೋ ನೋಡಿ ಯಾವುದು ಸತ್ಯ ಸುಳ್ಳು ನೀವೆ ನಿರ್ಧರಿಸಿ

ದುರ್ಗಾ ಮಾತೆಗೆ ಗರಿಕೆ ಹಾರವನ್ನು ಅರ್ಪಿಸಬಾರದು ಅದರ ಬದಲು ಚೆಂಡು ಹೂವು ಸೇವಂತಿಗೆ ಹೂವು ಮಲ್ಲೆ ಮುಂತಾದ ಹೂಗಳಿಂದ ಪೂಜಿಸಬಹುದು. ಭೈರವ ದೇವರಿಗೆ ಯಾವುದೇ ಕಾರಣಕ್ಕೂ ಮಲ್ಲಿಗೆ ಹೂಗಳನ್ನು ಅರ್ಪಿಸಬಾರದು ಎಂದು ಆಧ್ಯಾತ್ಮ ಚಿಂತಕರು ತಿಳಿಸಿದ್ದಾರೆ. ಹಾಗೆ ವಿಷ್ಣು ಅಲಂಕಾರ ಪ್ರಿಯ ಆದರೆ ವಿಷ್ಣುವಿನ ಅಲಂಕಾರಕಾಗಲಿ ಪೂಜೆಗಾಗಲಿ ಯಾವುದೇ ಕಾರಣಕ್ಕೂ ಗಣಗಲೆ ಹೂವನ್ನು ಬಳಸಬಾರದು. ಶಿವನಿಗೆ ಸುವಾಸನೆ ಇರದ ಹೂಗಳಿಂದ ಪೂಜಿಸಬಾರದು ಹಾಗೂ ಬಿಲ್ವಪತ್ರೆ ಮತ್ತು ತುಂಬೆ ಹೂಗಳು ಶಿವನಿಗೆ ಬಹಳ ಪ್ರಿಯವಾದ ಹೂಗಳಾಗಿವೆ. ಅಮ್ಮನವರಿಗೆ ಗರಿಕೆಯಿಂದ ಪೂಜಿಸಬಾರದು, ಇದರ ಬದಲು ಮಲ್ಲಿಗೆ ಹೂವು ಮೂಲೆ ಹೂವು ಸಣ್ಣ ಜಾಜಿ ಹೂವು ಸೇವಂತಿಗೆ ಹೂವು ಈ ರೀತಿಯ ಹೂಗಳಿಂದ ಪೂಜಿಸಬಹುದು. ಸೂರ್ಯದೇವನಿಗೆ ಯಾವುದೇ ಕಾರಣಕ್ಕೂ ಬಿಲ್ವಪತ್ರೆಯಿಂದ ಪೂಜಿಸಬಾರದು. ಇವೆಲ್ಲವನ್ನು ತಿಳಿದುಕೊಂಡು ಪಾಲಿಸುವುದರಿಂದ ಅನೇಕ ತಪ್ಪುಗಳನ್ನು ತಿದ್ದುಕೊಂಡ ರೀತಿ ಆಗುತ್ತದೆ. ಹಾಗೂ ದೇವರ ಕೃಪೆಗೆ ಬೇಗ ಪಾತ್ರರಾಗುತ್ತೀರಿ.

[irp]


crossorigin="anonymous">