ಇವರು ಇಲ್ಲ ಅಂದರೆ ಡೈರೆಕ್ಟರ್ ಸಿನಿಮಾನೇ ಮಾಡುತ್ತಿಲ್ಲ ಹೀರೋಗು ಇಲ್ಲಾರಿ ಇವರಿಗಿರುವ ಡಿಮ್ಯಾಂಡ್ ಯಾರು ಗೊತ್ತಾ ಕನ್ನಡಡ ಅಚ್ಯುತ್ ಕುಮಾರ್... - Karnataka's Best News Portal

ಇವರು ಇಲ್ಲ ಅಂದ್ರೆ ಡೈರೆಕ್ಟರ್ ಗಳು ಸಿನಿಮಾನೇ ಮಾಡುತ್ತಿಲ್ಲ…! ಯಾರು ಗೊತ್ತಾ ಈ ಕನ್ನಡದ ಅತ್ಯುತ್ ಕುಮಾರ್…?ಕಾಂತಾರ ಈ ಸಿನಿಮಾವು ಕನ್ನಡ ಇಂಡಸ್ಟ್ರಿಯಲ್ಲಿ ಹೆಚ್ಚಿನ ಯಶಸ್ಸನ್ನೇ ಸಾಧಿಸಿದೆ ಬಿಡುಗಡೆಯಾಗುವಾಗ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲದೆ ಹೋದರು ಈಗ ಪ್ಯಾನ್ ಇಂಡಿಯಾ ಸಿನಿಮಾ ವಾಗಿ ಬದಲಾಗಿದೆ ದೇಶದ ಮೂಲೆ ಮೂಲೆಯಲ್ಲಿಯೂ ಕಾಂತಾರದ ಕಾಡ್ಗಿಚ್ಚು ಆವರಿಸಿದೆ ಇಂತಹ ಒಂದು ಚಿತ್ರವೇ ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆ ತೆರೆಕಂಡಿಲ್ಲ ವೆಂಬ ಮಾತುಗಳು ದೇಶದೆಲ್ಲೆಡೆ ಕೇಳಿ ಬರುತ್ತಿದೆ ಇದು ನಿಜಕ್ಕೂ ಕನ್ನಡಿಗರೆಲ್ಲರೂ ಗರ್ವದಿಂದ ಹೇಳಿಕೊಳ್ಳ ಬಹುದಾದಂತಹ ಸಂಗತಿ ಈ ಕಾಂತಾರ ಚಿತ್ರದಲ್ಲಿ ಕೇವಲ ನಾಯಕ ನಟ ಮಾತ್ರವಲ್ಲದೆ ಈ ಚಿತ್ರದಲ್ಲಿ ನಟಿಸಿರುವಂತಹ ಅನೇಕ ನಟರು ಸಹ ಚಿತ್ರದ ಜೀವಂತಿಕೆಗೆ ತನ್ನದೇ ಆದ ವಿಶಿಷ್ಟ ಪಾಲನ್ನು ನೀಡಿದೆ ಅದು ಲೀಲಾ ಆಗಿ ನಟಿಸಿರುವಂತಹ ಸಪ್ತಮಿ ಗೌಡ ಅವರಿರಬಹುದು.

ಫಾರೆಸ್ಟ್ ರೇಂಜರ್ ಆಗಿ ನಟಿಸಿದ ಕಿಶೋರ್ ಅವರಿರಬಹುದು ಸುಧಾಕರನಾಗಿ ನಟಿಸಿರುವಂತಹ ಪ್ರಮೋದ್ ಶೆಟ್ಟಿ ಇರಬಹುದು ಹಾಗೂ ದೇವೇಂದ್ರ ಸುತ್ತೂರ್ ಹಾಗೆ ನಟಿಸಿರುವಂತಹ ವಿಶಿಷ್ಟ ನಟ ಅತ್ಯುತ್ ಕುಮಾರ್ ಅವರೇ ಇರಬಹುದು ಈ ಒಬ್ಬೊಬ್ಬರ ಪಾತ್ರ ಹಾಗೂ ಅವರ ನಟನೆಯಲ್ಲಿ ತೊಡಗಿಸಿಕೊಳ್ಳುವುದರ ಬಗ್ಗೆ ಎರಡು ಮಾತಿಲ್ಲ ಸಿನಿಮಾ ಸಕ್ಸಸ್ ಗೆ ಇವರೆಲ್ಲ ಸಮಭಾಗಿಗಳೇ ವಿಶೇಷವಾಗಿ ನಾವು ಇಂದು ಅದ್ಭುತವಾದ ನಟ ಅಚ್ಯುತ್ ಕುಮಾರ್ ಅವರ ಬಗ್ಗೆ ಈ ದಿನ ತಿಳಿದು ಕೊಳ್ಳೋಣ ಕಾಂತಾರಾ ಸಿನಿಮಾದಲ್ಲಿ ಇವರು ವಿಶ್ವಾಸ ಘಾತಕ ಉಳಿಗ ಮಾನ್ಯ ದೊರೆ ದೇವೇಂದ್ರ ಸುತ್ತೂರು ಪಾತ್ರವನ್ನು ಅತ್ಯಂತ ಮನಮೋಹನವಾಗಿ ನಿರ್ವಹಿಸಿ ದ್ದಾರೆ ಚಿತ್ರದಲ್ಲಿ ಬರುವ ಬುಡಕಟ್ಟು ಸಮುದಾಯಕ್ಕೆ ಸಹಾಯ ಮಾಡುವ ನೆಪದಲ್ಲಿಯೇ ಮೆಲ್ಲನೆ ಅವರಿರುವ ಜಾಗವನ್ನು ಕಬಳಿಸುವ ಪಾತ್ರದಲ್ಲಿ ಇವರ ನಟನೆ ಮನೋಗ್ನವಾಗಿ ಮೂಡಿ ಬಂದಿದೆ.

ಅದ್ಭುತ ರಂಗಭೂಮಿ ಕಲಾವಿದರಾಗಿರುವಂತಹ ಅಚ್ಯುತ್ ಕುಮಾರ್ ಅವರಿಗೆ ಯಾವ ಪಾತ್ರವಾದರೂ ಸಹ ಅದು ನೀರು ಕುಡಿದಷ್ಟೇ ಸುಲಭ ಎನ್ನುವಂತೆ ಅವರು ನಟಿಸಿರುತ್ತಾರೆ ಅಥವಾ ಅದನ್ನು ನಟನ ಜೀವಂತಿಕೆ ನಟನೆ ಎನ್ನಬಹುದು ಅವರ ನಟನೆಯನ್ನು ಗಮನಿಸಿದಂತಹ ಯಾರಿಗೆ ಆಗಲಿ ಹೀಗೊಮ್ಮೆ ಅನ್ನಿಸದೇ ಇರಲು ಸಾಧ್ಯವಿಲ್ಲ ಅಷ್ಟರ ಮಟ್ಟಿಗೆ ಇವರು ತಮ್ಮ ಪಾತ್ರದಲ್ಲಿಯೇ ತಲ್ಲೀನರಾಗಿರುತ್ತಾರೆ ಇವರು ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಇರುವುದು ಪ್ರತಿಯೊಬ್ಬ ಕಲಾವಿದರು ಮತ್ತು ಪ್ರತಿಯೊಬ್ಬ ಪ್ರೇಕ್ಷಕರಿಗೂ ಕೂಡ ಹೆಮ್ಮೆಯ ವಿಚಾರವಾಗಿದೆ ಮತ್ತು ಇವರು ಪೋಷಕ ನಟನ ಪಾತ್ರದಲ್ಲಿಯೂ ಕೂಡ ಅಷ್ಟೇ ಅದ್ಭುತವಾಗಿ ನಟಿಸುವಂತಹ ಇವರು ನಮ್ಮ ಕನ್ನಡದ ಹಲವಾರು ಚಿತ್ರಗಳಲ್ಲಿಯೂ ಕೂಡ ನಟನೆ ಯನ್ನು ಮಾಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *