ಕಾಂತಾರ ನೋಡಿ ರಾಜ ಮೌಳಿ ಶಾಕ್ ಸಿನಿಮಾ ಮಗಿದರು ಅಲ್ಲೇ ನಿಂತು ಇದು ಕನ್ನಡಿಗರ ತಾಕತ್ತು ಅಂದರೆ..ತೆಲುಗಿನಲ್ಲಿ ಮಾಡುತ್ತಿರುವ ಸದ್ದು ನೋಡಿದ್ರೆ ಆಸ್ಕರ್ ಪಕ್ಕ - Karnataka's Best News Portal

ಕಾಂತರಾ ಸಿನಿಮಾ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಖ್ಯಾತ ನಿರ್ದೇಶಕ ರಾಜ ಮೌಳಿ…ರಿಷಬ್ ಶೆಟ್ಟಿ ಅವರ ನಿರ್ದೇಶನದ ಮತ್ತು ನಟನೆಯ ಕಾಂತಾರ ಒಂದು ದಂತಕಥೆ ಸಿನಿಮಾವು ಎರಡು ವಾರಗಳಿಂದ ಬಹಳ ಸದ್ದು ಮಾಡುತ್ತಿದೆ. ಮೊದಲು ಕನ್ನಡ ಭಾಷೆಯಲ್ಲಿಯೇ ಬಿಡುಗಡೆ ಆದ ಈ ಸಿನಿಮಾಗೆ ಸಿನಿಮಾ ಅಭಿಮಾನಿಗಳಿಂದ ಬಹಳ ಉತ್ತಮವಾಗಿ ರೆಸ್ಪಾನ್ಸ್ ಸಿಗುತ್ತಿದ್ದು ಈಗ ಪರಭಾಷೆಗಳಲ್ಲೂ ಕೂಡ ಡಬ್ ಆಗಿದೆ. ಕಾಂತರಾ ಸಿನಿಮಾ ವನ್ನು ನೋಡಿ ಹೊಗಳದವರಿಲ್ಲ, ಅಭಿಮಾನಿಗಳು ಮತ್ತು ಚಿತ್ರಕಲಾ ರಸಿಕರು ಅಲ್ಲದೆ ಇಂಡಸ್ಟ್ರಿಯ ಡೈರೆಕ್ಟರ್ಗಳು, ತಂತ್ರಗಳು, ಇನ್ನಿತರ ನಟ ನಟಿಯರು ಸೇರಿದಂತೆ ಎಲ್ಲರೂ ಕೂಡ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂತಾರ ಸಿನಿಮಾ ಇಡೀ ಭಾರತವನ್ನು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. ಕನ್ನಡದ ಈ ಒಂದು ಸಿನಿಮಾ ಕರ್ನಾಟಕಕ್ಕೆ ಒಂದು ಮೆರುಗು ತಂದಿದೆ.

ಈ ಸಿನಿಮಾದ ಬಗ್ಗೆ ಪರಭಾಷಿಕರಲ್ಲಿ ತಮಿಳಿನ ಧನುಷ್ ಅವರು ಮೊದಲು ಮಾತನಾಡಿದರು. ಈಗ ನೆನ್ನೆ ಅಷ್ಟೇ ತೆಲಗಿನಲ್ಲಿ ಕೂಡ ಕಾಂತರಾ ಸಿನಿಮಾ ರಿಲೀಸ್ ಆಗಿದೆ. ಸಿನಿಮಾವನ್ನು ಅಲ್ಲು ಅರ್ಜುನ್ ಪ್ರಭಾಸ್ ಸೇರಿದಂತೆ ಅನೇಕ ನಟರು ನೋಡಿದ್ದಾರೆ. ಪ್ರಭಾಸ್ ಅವರಂತೂ ನಾನು ಎರಡು ಬಾರಿ ಸಿನಿಮಾ ನೋಡಿದೆ ಸಿನಿಮಾ ಮನಸ್ಸಿಗೆ ತುಂಬಾ ಹತ್ತಿರವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ದಿನೇ ದಿನೇ ಕಾಂತರಾ ಸಿನಿಮಾದ ಕ್ರೇಜ್ ಎಲ್ಲೆಡೆ ಹೆಚ್ಚಾಗುತ್ತಿದ್ದು ಸಿನಿಮಾ ಕಲೆಕ್ಷನ್ ವಿಚಾರವಾಗಿ ಹಾಗೂ ಇನ್ನು ಅನೇಕ ವಿಚಾರವಾಗಿ ದಿನೇ ದಿನೇ ಸುದ್ದಿ ಆಗುತ್ತಿದೆ. ಈಗ ತೆಲುಗಿನ ಖ್ಯಾತ ನಿರ್ದೇಶಕರಾದ ಮಗಧೀರ, ಬಾಹುಬಲ, RRR ಇಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ರಾಜಮೌಳಿ ಅವರು ಸಹ ಕನ್ನಡದ ಕಾಂತರಾ ಸಿನಿಮಾವನ್ನು ಕುಟುಂಬ ಸಮೇತವಾಗಿ ಹೋಗಿ ನೋಡಿದ್ದಾರೆ. ಅವರ ಇಡೀ ಕುಟುಂಬವೇ ಕಾಂತರಾ ಸಿನಿಮಾವನ್ನು ಬಹಳ ಮೆಚ್ಚಿಕೊಂಡಿದೆ.

ಸಿನಿಮಾಗಳನ್ನು ವಿಮರ್ಶನೆ ಮಾಡುವ ವಿಚಾರದಲ್ಲಿ ಡೈರೆಕ್ಟರ್ ಗಳ ಮಾತು ಬಹಳ ಗಟ್ಟಿಯಾಗಿರುತ್ತದೆ. ಈವರೆಗೆ ಭಾರತ ಸಿನಿಮಾ ಇಂಡಸ್ಟ್ರಿಯು ಹೆಮ್ಮೆ ಪಡುವಂತ ಸಿನಿಮಾಗಳನ್ನು ಕೊಟ್ಟಿರುವ ಖ್ಯಾತ ನಿರ್ದೇಶಕ ರಾಜ ಮೌಳಿ ಅವರು ಕಾಂತರಾ ಸಿನಿಮಾದ ನಿರ್ದೇಶನವನ್ನು ಹಾಡಿ ಹೊಗಳಿದ್ದಾರೆ ಮತ್ತು ಕನ್ನಡದ ನೆಲದ ಸೊಬಗನ್ನು ತೋರಿಸಿರುವ ಈ ಸಿನಿಮಾವನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ರಿಷಬ್ ಶೆಟ್ಟಿ ಅವರ ಅಭಿನಯದ ಬಗ್ಗೆ ಮಾತನಾಡಿರುವ ರಾಜ ಮೌಳಿ ಅವರು ಈ ವರ್ಷ ಭಾರತದಿಂದ ಆಸ್ಕರ್ ಪ್ರಶಸ್ತಿಗೆ ಆರ್ ಆರ್ ಆರ್ ಸಿನಿಮಾ ನಾಮಿನೇಟ್ ಆಗುತ್ತಿದೆ. ಅದರ ಬದಲು ಕಾಂತರಾ ಸಿನಿಮಾ ಆದರೆ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ನಿಜವಾಗಿಯೂ ರಾಜ ಮೌಳಿ ಅಂತಹ ನಿರ್ದೇಶಕರ ಕಡೆಯಿಂದ ಇಂತಹ ಮಾತುಗಳನ್ನು ಕೇಳಿದ್ದು ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾಕ್ಕೆ ಮಾಡಿದ ಶ್ರಮಕ್ಕೆ ಸಂದ ಪ್ರತಿಫಲ ಮತ್ತು ಸಾರ್ಥಕತೆ ಎಂದು ಹೇಳಬಹುದು.

ಇತ್ತೀಚೆಗೆ ಸೌತ್ ಇಂಡಿಯಾ ಸಿನಿಮಾಗಳು ಒಂದಕ್ಕಿಂತ ಒಂದು ವಿಭಿನ್ನ ರೀತಿಯಲ್ಲಿ ಮೂಡಿ ಬರುತ್ತಿದ್ದು ಒಂದರ ದಾಖಲೆಯನ್ನು ಮುರಿಯುತ್ತ ಮತ್ತೊಂದು ಸಾಗುತ್ತಿದೆ. ಇದುವರೆಗೆ ಭಾರತೀಯ ಚಿತ್ರರಂಗ ಎಂದರೆ ಬರಿ ಬಾಲಿವುಡ್ ಸಿನಿಮಾಗಳನ್ನೇ ನೋಡಲಾಗುತ್ತಿತ್ತು. ಈ ಸಂಪ್ರದಾಯವನ್ನು ಮುರಿದು ಸೌತ್ ಇಂಡಿಯಾ ಸಿನಿಮಾಗಳು ಈಗ ವಿಶ್ವಮಟ್ಟಕ್ಕೆ ಬೆಳೆಯುತ್ತಿವೆ. ಕಾಂತಾರ ಈ ನೆಲದ ಸತ್ವವನ್ನು ಸಾರುವ ಸಿನಿಮಾಗವಾಗಿದ್ದು ನೈಜತೆ ತುಂಬಿರುವುದರಿಂದ ಹಾಗೂ ಸಹಜ ಅಭಿನಯದಿಂದ ಮತ್ತು ಉತ್ತಮವಾದ ಸಿನಿಮಾಟೋಗ್ರಫಿ ದಂತ ಕಥೆಯಾಗಿ ಹೆಸರು ಮಾಡುತ್ತಿದೆ.

Leave a Reply

Your email address will not be published. Required fields are marked *