ಕ್ರೇಜಿಸ್ಟಾರ್ ಖಡಕ್ ಮಾತಿಗೆ ಎಲ್ರೂ ಸ್ಟನ್ ಕೆಜಿಎಫ್ ಕಾನ್ಪಿಡೆನ್ಸ್ ಕಾಂತಾರ ಎಮೋಷನ್ ಯಶ್ ರಿಷಬ್ & ನಿರ್ಮಾಪಕರು ದೊಡ್ಡ ಭವಿಷ್ಯ ನುಡಿದ ರವಿಚಂದ್ರನ್ - Karnataka's Best News Portal

ಕನ್ನಡ ಚಿತ್ರರಂಗದ ಶುಕ್ರ ದೆಶೆ ಬಗ್ಗೆ ಭವಿಷ್ಯ ಹೇಳಿದ ಕ್ರೇಜಿಸ್ಟಾರ್…ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಿನಿಮಾಕ್ಕಾಗಿಯೇ ಜೀವನ ಸವೆಸಿದವರು. ತನ್ನ ಬದುಕಿನ ಬಹು ಭಾಗವನ್ನು ಅವರು ಸಿನಿಮಾ ಬಗ್ಗೆ ಕನಸು ಕಾಣುತ್ತಲೇ ಕಳೆದವರು. ಹೀಗಾಗಿ ಕನ್ನಡ ಚಿತ್ರರಂಗ ಅವರಿಗೆ ಬಹಳ ದೊಡ್ಡ ಮಟ್ಟದಲ್ಲಿ ಗೌರವ ನೀಡುತ್ತದೆ. ಸದ್ಯಕ್ಕೆ ಕನ್ನಡದ ಕಲಾವಿದರಲ್ಲಿ ಹಿರಿಯ ತಲೆ ಎನಿಸಿರುವ ಇವರು ಕನ್ನಡ ಚಿತ್ರರಂಗ ಎನ್ನುವ ಕುಟುಂಬಕ್ಕೆ ಹಿರಿಯ ಸದಸ್ಯ ಇದ್ದಂತೆ. ಅಲ್ಲದೆ ತಮ್ಮ ಈಶ್ವರಿ ಪ್ರೊಡಕ್ಷನ್ ಮೂಲಕ ಸಾಕಷ್ಟು ಕಲಾವಿದರಿಗೆ ಬದುಕು ಕಟ್ಟಿಕೊಟ್ಟಿರುವ ಅನ್ನಕ್ಕೆ ದಾರಿ ಮಾಡಿ ಕೊಟ್ಟಿರುವ ಚಿಕ್ಕಜಮಾನರಾದ ರವಿಚಂದ್ರನ್ ಅವರನ್ನು ಲಕ್ಕಿ ಹ್ಯಾಂಡ್ ಎಂದು ನಂಬಲಾಗಿದೆ. ಈ ಕಾರಣದಿಂದ ಸಿನಿಮಾದ ಮುಹೂರ್ತ ಕಾರ್ಯಕ್ರಮ ಇರಲಿ ಅಥವಾ ಪ್ರೀ ರಿಲೀಸ್ ಇವೆಂಟ್ ಇರಲಿ ರವಿಚಂದ್ರನ್ ಅವರನ್ನು ಕರೆಸಿ, ಅವರ ಕೈಯಿಂದ ಬಿಡುಗಡೆಗೊಳಿಸಲು ಚಿತ್ರ ತಂಡದವರು ಇಷ್ಟಪಡುತ್ತಾರೆ.

ಹೀಗೆ ತನಗೆ ಬಂದ ಎಲ್ಲಾ ಆಹ್ವಾನಕ್ಕೂ ಓಗೊಟ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ರವಿಚಂದ್ರನ್ ಅವರು ಈಗ ಬಿಡುಗಡೆಗೆ ತಯಾರಿ ನಿಂತಿರುವ ಇಶಾನ್ ನಾಯಕ ನಟನಾಗಿ ಅಭಿನಯಿಸಿ ಆಶಿಕಾ ರಂಗನಾಥ್ ಹೀರೋಯಿನ್ ಆಗಿರುವ ಮನೋಹರ್ ಅವರ ನಿರ್ಮಾಣದಲ್ಲಿ ಪವನ್ ಒಡೆಯರ್ ಅವರು ನಿರ್ದೇಶನ ಮಾಡಿರುವ ರೆಮೋ ಚಿತ್ರದ ಪ್ರಿ ರಿಲೀಸ್ ಇವೆಂಟ್ ಅಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸಿನಿಮಾ ಬಗ್ಗೆ ಮಾತನಾಡಿದ ರವಿಚಂದ್ರನ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿ ಸೇರಿದಂತೆ ರೆಮೋ ಚಿತ್ರದ ಬಗ್ಗೆ ಕೂಡ ಹಲವು ಮಾತುಗಳನ್ನು ಆಡಿದರು. ಚಿತ್ರಕ್ಕೆ ಹಾಡುಗಳನ್ನು ಬರೆದಿರುವ ಕವಿರಾಜ್ ಅವರ ಕಲೆಯನ್ನು ಗುರುತಿಸಿ ನಿಮ್ಮ ಕೆಲವು ಹಾಡುಗಳನ್ನು ಕೇಳಲು ಸಾಧ್ಯವಾಗಲಿಲ್ಲ ಆದರೆ ನಿಮ್ಮ ಮೇಲೆ ಬಹಳ ನಂಬಿಕೆ ಇದೆ ಯಾಕೆಂದರೆ ನೀವು ಹೃದಯಪೂರ್ವಕವಾಗಿ ಅಚ್ಚುಕಟ್ಟಾಗಿ ನಿಮ್ಮ ಕೆಲಸವನ್ನು ಮಾಡುತ್ತೀರಾ ಹಾಗಾಗಿ ಅದು ಚೆನ್ನಾಗಿರುತ್ತೆ ಎಂದು ಹೊಗಳಿದ್ದಾರೆ.

ಅಲ್ಲದೆ ಇಮ್ರಾನ್ ಸರ್ದಾರಿಯಾ ಅವರ ನೃತ್ಯ ಸಂಯೋಜನೆ ಸಿನಿಮಾಕಿರುವ ಕಾರಣ ಇವನು ನನ್ನ ಶಿಷ್ಯ ಖಂಡಿತ ಚೆನ್ನಾಗಿ ಮಾಡಿರುತ್ತಾನೆ, ನಿನಗೂ ಒಳ್ಳೆಯದಾಗಲಿ ಎಂದು ಹರಸಿದ್ದಾರೆ ಮತ್ತು ಸಿನಿಮಾದ ನಿರ್ದೇಶಕ ನಿರ್ಮಾಪಕ ನಾಯಕ ಎಲ್ಲರ ಬಗ್ಗೆಯೂ ಮಾತನಾಡಿ ಉದಾಹರಣೆ ಕೊಡುವ ಸಂದರ್ಭದಲ್ಲಿ ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳನ್ನು ನೆನೆದಿದ್ದಾರೆ. ಕೆಜಿಎಫ್ ಎನ್ನುವ ಸಿನಿಮಾವು ಕನ್ನಡದಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿತು. ಯಶ್ ಅವರು ನಿರ್ದಿಷ್ಟ ಗುರಿ ಇಟ್ಟುಕೊಂಡು ಅದನ್ನು ಮೀರಿ ಹೋದರು. ಇಂದು ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುತ್ತಿದ್ದೆ. ಕಾಂತರಾ ಸಿನಿಮಾ ಕೂಡ ಅದಕ್ಕೆ ಮತ್ತೊಂದು ಉದಾಹರಣೆ ಇದು ಸಣ್ಣ ಬಜೆಟ್ ಸಿನಿಮಾ ಆಗಿರಬಹುದು, ಯಾವುದೇ ನಿರೀಕ್ಷೆ ಇಲ್ಲದೆ ಅದು ಬಹುದೊಡ್ಡ ಹಿಟ್ ಆಯಿತು ಯಾಕೆಂದರೆ ಅದು ಹೃದಯದ ಭಾವನೆಗಳನ್ನು ಸ್ಪರ್ಶಿಸಿರುವ ಸಿನಿಮಾ.

Leave a Reply

Your email address will not be published. Required fields are marked *