ಮಕರ ರಾಶಿ ಡಿಸೆಂಬರ್ ತಿಂಗಳ ಭವಿಷ್ಯ 2022 ಶನಿಯಿಂದ ತುಂಬಾ ದೊಡ್ಡ ತೊಂದರೆ ಏನು ಇಲ್ಲ ಗುರುವಿನಿಂದ ಬಹಳ ಲಾಭ ಪಡೆಯುತ್ತಾರೆ... - Karnataka's Best News Portal

ಮಕರ ರಾಶಿ ಡಿಸೆಂಬರ್ ತಿಂಗಳ ಮಾಸ ಭವಿಷ್ಯ 2022||
ಮಕರ ರಾಶಿಯ ಮಾಸ ಭವಿಷ್ಯವನ್ನು ನೋಡುವು ದಕ್ಕೂ ಮೊದಲು ಈ ಮಾಸದ ವಿಶೇಷತೆಗಳು ಏನು ಎಂದು ನೋಡುವುದಾದರೆ ಅದಕ್ಕೂ ಮೊದಲು ಗ್ರಹಗಳ ಬದಲಾವಣೆಯ ಬಗ್ಗೆ ತಿಳಿದುಕೊಳ್ಳಬೇಕು ಹಾಗಾದರೆ ಗ್ರಹಗಳ ಬದಲಾವಣೆ ಏನು ಎಂದು ನೋಡುವುದಾದರೆ ಮೊದಲನೆಯದಾಗಿ ಡಿಸೆಂಬರ್ ಮೂರನೇ ತಾರೀಖು ಧನಸ್ಸು ರಾಶಿಗೆ ಬುಧ ಪ್ರವೇಶ ಆಗುತ್ತಿದ್ದಾರೆ ಅಂದರೆ ವೃಶ್ಚಿಕ ರಾಶಿಯಿಂದ ದನಸು ರಾಶಿಗೆ ಬುಧ ಪ್ರವೇಶ ಆಗುತ್ತಿದ್ದಾರೆ ಇದು ಮೊದಲ ನೆಯ ಬದಲಾವಣೆ ಆದರೆ ಎರಡನೆಯದ್ದು ಐದನೇ ತಾರೀಖು ಶುಕ್ರ ಧನಸ್ಸು ರಾಶಿಗೆ ಪ್ರವೇಶ ಆಗುತ್ತಿದ್ದಾರೆ ಮೂರನೆಯ ಬದಲಾವಣೆ ಹದಿನಾರನೇ ತಾರೀಖು ರವಿ ಅಂದರೆ ಸೂರ್ಯ ವೃಶ್ಚಿಕ ರಾಶಿ ಅಂದರೆ ತನ್ನ ಮಿತ್ರನ ಮನೆಯಿಂದ ಧನಸ್ಸು ರಾಶಿ ಅಂದರೆ ತನ್ನ ಇನ್ನೊಂದು ಮಿತ್ರನ ಮನೆಗೆ ಪ್ರವೇಶ ಆಗುತ್ತಾ ಇದ್ದಾರೆ.

ಇನ್ನು ಈ ಮಾಸದ ವಿಶೇಷತೆ ಏನು ಎಂದು ನೋಡುವು ದಾದರೆ ಮೊದಲನೆಯದಾಗಿ 7ನೇ ತಾರೀಖು ದತ್ತಾತ್ರೇಯ ಸ್ವಾಮಿಯ ಜಯಂತಿ ಎಂಟನೇ ತಾರೀಖು ಪೌರ್ಣಮಿ ಇದೆ ಇನ್ನು 15ನೇ ತಾರೀಖು ಶಾರದಾ ದೇವಿಯ ಜಯಂತಿ ನಡೆಯುತ್ತದೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಏನಾದರೂ ತೊಂದರೆಗಳು ಇದ್ದರೆ ಅಂಥವರು ಶಾರದಾ ದೇವಿಯ ಮಂದಿರಕ್ಕೆ ಹೋಗಿ ಕುಂಕುಮ ಅರ್ಚನೆಯನ್ನು ಮಾಡಿಸಿದರೆ ಉತ್ತಮ ಈಗಾಗಲೇ ಮೂರು ಗ್ರಹಗಳು ತಮ್ಮ ಬದಲಾವಣೆ ಯನ್ನು ಮಾಡುತ್ತಿದ್ದು ಇದರಿಂದ ಮಕರ ರಾಶಿಯವರಿಗೆ ಏನು ಫಲ ಎಂದು ನೋಡೋಣ ಮೊದಲಿಗೆ ಮಕರ ರಾಶಿಯವರಿಗೆ ಸಾಡೇ ಸಾಥ್ ನಡೆಯುತ್ತಿದ್ದು ಇದರ ಜೊತೆಗೆ ಜನ್ಮ ಶನಿಯು ನಡೆಯುತ್ತಿದೆ ಹಾಗಾದರೆ ಇದರಿಂದ ಭಯಪಡುವಂತಹ ಅವಶ್ಯಕತೆ ಇಲ್ಲ ಬದಲಾಗಿ ಡಿಸೆಂಬರ್ ತಿಂಗಳಿನಲ್ಲಿ ಈ ಜನ್ಮ ಶನಿಯು ನಿಮ್ಮಿಂದ ದೂರ ಆಗಲಿದ್ದಾನೆ.

ಮಕರ ರಾಶಿಗೆ ಅಧಿಪತಿ ಆಗಿರುವಂತಹ ಶನಿ ಮಕರ ರಾಶಿಯಲ್ಲಿಯೇ ಇರುವುದರಿಂದ ಜನ್ಮ ಶನಿಯ ಪ್ರಭಾವ ಎನ್ನುವಂತದ್ದು ಹೆಚ್ಚಾಗಿ ನಿಮಗೆ ತಾಕುವುದಿಲ್ಲ.ಇನ್ನು ಕುಜ ಪ್ರಸ್ತುತ ನಿಮ್ಮ ರಾಶಿಯಿಂದ 5ನೇ ಮನೆಯಲ್ಲಿ ಅಂದರೆ ನಿಮ್ಮ ಮಿತ್ರನ ಮನೆಯಲ್ಲಿ ಇದ್ದಾರೆ ಹೀಗೆ ಯಾವಾಗ ಕುಜ ಐದನೇ ಮನೆಯಲ್ಲಿ ಇರುತ್ತಾರೋ ಆಗ ಸ್ವಲ್ಪ ವಿಳಂಬತನ ಹೆಚ್ಚಾಗಿ ಇರುತ್ತದೆ ಅಂದರೆ ಮುಖ್ಯವಾಗಿ ಸಂತಾನ ಅಪೇಕ್ಷಿತ ದಂಪತಿಗಳಿಗೆ ಡಿಸೆಂಬರ್ ತಿಂಗಳಿನಲ್ಲಿ ಒಳ್ಳೆಯ ಫಲಗಳು ಇಲ್ಲ ಅದರಲ್ಲೂ ಕುಜ ಭೂಮಿಕಾರಕ ಇದರಿಂದ ದಾಯಾದಿಗಳಲ್ಲಿ ಜಗಳ ಭೂಮಿ ವಿಚಾರ ದಲ್ಲಿ ಕೋರ್ಟ್ ಗೆ ಸಂಬಂಧಿಸಿದಂತಹ ಕೆಲವೊಂದು ವಿಚಾರಗಳು ಇವೆಲ್ಲವೂ ಕೂಡ ಅಷ್ಟೊಂದು ಒಳ್ಳೆಯ ಪರಿಸ್ಥಿತಿಯಲ್ಲಿ ಇಲ್ಲ.ಬುಧ ವ್ಯಯದ ಸ್ಥಾನಕ್ಕೆ ಬರುತ್ತಿರುವುದರಿಂದ ನಿಮ್ಮ ಎಲ್ಲಾ ಕೆಲಸಗಳಲ್ಲಿ ಸ್ವಲ್ಪ ವಿಳಂಬ ಏರ್ಪಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *