ಕೆಮ್ಮು ಎದೆಯಲ್ಲಿ ಕಟ್ಟಿದ ಕಫ ಶೀತ ನೆಗಡಿ 1 ಚಮಚ ರಸ ಸಾಕು.ಕಫಕ್ಕೆ ನಾಟಿ ಮನೆಮದ್ದು..ವಿಶೇಷ ಔಷಧಿ » Karnataka's Best News Portal

ಕೆಮ್ಮು ಎದೆಯಲ್ಲಿ ಕಟ್ಟಿದ ಕಫ ಶೀತ ನೆಗಡಿ 1 ಚಮಚ ರಸ ಸಾಕು.ಕಫಕ್ಕೆ ನಾಟಿ ಮನೆಮದ್ದು..ವಿಶೇಷ ಔಷಧಿ

ಶೀತ ನೆಗಡಿ ಕೆಮ್ಮು ಕಫಕ್ಕೆ ನಾಟಿ ಮನೆ ಮದ್ದು||ಎದೆಯಲ್ಲಿ ಕಟ್ಟಿದ ಕಫ ಕರಗಿಸಲು ಮದ್ದು||ಹೆಚ್ಚಿನ ಜನಕ್ಕೆ ಚಳಿಗಾಲ ಪ್ರಾರಂಭವಾಯಿತು ಎಂದ ತಕ್ಷಣ ಶೀತ ನೆಗಡಿ ಕೆಮ್ಮು ಕಫ ಈ ರೀತಿಯಾದಂತಹ ಸಮಸ್ಯೆಗಳು ಕಾಣಿಸಿ ಕೊಳ್ಳುವುದು ಸರ್ವೆ ಸಾಮಾನ್ಯ ವಾಗಿರುತ್ತದೆ ಹಾಗಾದರೆ ಯಾಕೆ ಇವರಿಗೆ ಈ ರೀತಿಯಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗೂ ಇದನ್ನು ಹೇಗೆ ಮನೆಯಲ್ಲಿಯೇ ಯಾವ ಮನೆಮದ್ದನ್ನು ಬಳಸಿ ನಿವಾರಣೆ ಮಾಡಿಕೊಳ್ಳಬಹುದುಹಾಗೂ ಇದಕ್ಕೆ ಯಾವ ರೀತಿಯಾದಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಹೀಗೆ ಈ ವಿಷಯಕ್ಕೆ ಸಂಬಂಧ ಪಟ್ಟಂತ ಕೆಲವೊಂದು ಮಾಹಿತಿಗಳನ್ನು ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ ಹಾಗಾದರೆ ಯಾವ ಒಂದು ಕಾರಣಕ್ಕೆ ಈ ಸಮಸ್ಯೆ ಅವರಿಗೆ ಬರುತ್ತದೆ ಎಂದು ನೋಡುವುದಾದರೆ ದೇಹದಲ್ಲಿ ರೋಗ ಪ್ರತಿ ರೋಧಕ ಶಕ್ತಿಯ ಕೊರತೆ ಉಂಟಾದಾಗ ಅವರಿಗೆ ಈ ರೀತಿಯಾದಂತಹ ಸಮಸ್ಯೆ ಪದೇ ಪದೇ ಕಾಣಿಸಿ ಕೊಳ್ಳುತ್ತಿರುತ್ತದೆ.

ಜೊತೆಗೆ ಅಜೀರ್ಣ ಮಲಬದ್ಧತೆ ಹಾಗೂ ಆಹಾರ ಪದ್ಧತಿಯಲ್ಲಾಗುವಂತಹ ದೋಷಗಳು ಮತ್ತು ಹೆಚ್ಚಾಗಿ ಎಣ್ಣೆಯಲ್ಲಿ ಕರಿದಂತಹ ಪದಾರ್ಥಗಳನ್ನು ಸೇವನೆ ಮಾಡುವುದು ಫ್ರಿಜ್ಜಿನಲ್ಲಿರುವಂತಹ ಆಹಾರ ಪದಾರ್ಥ ಗಳನ್ನು ತಿನ್ನುವುದು ಬೀದಿ ಬದಿಯಲ್ಲಿ ಮಾರುವಂತಹ ಆಹಾರ ಪದಾರ್ಥಗಳನ್ನು ತಿನ್ನುವುದು ಹೆಚ್ಚಾಗಿ ತಣ್ಣಗಿರುವಂತಹ ಆಹಾರಗಳನ್ನು ತಿನ್ನುವುದು ಹೀಗೆ ಈ ಎಲ್ಲಾ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಹಾಗಾದರೆ ಈಗಾಗಲೇ ಬಂದಿರುವಂತಹ ಶೀತ ಕೆಮ್ಮು ಕಫ ಇವು ಗಳನ್ನು ನಿವಾರಣೆ ಮಾಡಿಕೊಳ್ಳುವುದು ಹೇಗೆ ಎಂದು ನೋಡುವುದಾದರೆ ಈ ಔಷಧಿ ತಯಾರಿಸಲು ಬೇಕಾಗುವ ಪದಾರ್ಥಗಳು ತುಳಸಿ ಬಿಲ್ವಪತ್ರೆ ಅಮೃತ ಬಳ್ಳಿ ಈ ಮೂರು ಗಿಡದ ಎಲೆಯನ್ನು ನೆರಳಿ ನಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ ಈ ಪುಡಿಯ ಜೊತೆಗೆ ಕಾಳು ಮೆಣಸಿನ ಪುಡಿ ಒಣ ಶುಂಠಿಯ ಪುಡಿ ಇಷ್ಟನ್ನು ಮಿಶ್ರಣ ಮಾಡಿಟ್ಟುಕೊಳ್ಳಿ.

WhatsApp Group Join Now
Telegram Group Join Now
See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ

ನಂತರ ಇದನ್ನು ಒಂದು ಲೋಟ ನೀರಿಗೆ ಒಂದು ಚಮಚ ಈ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ಒಂದು ಲೋಟ ನೀರು ಅರ್ಧ ಲೋಟ ಆಗುವ ತನಕ ಕುದಿಸಿ ಇದರ ಕಷಾಯವನ್ನು ಬೆಳಿಗ್ಗೆ ಮತ್ತು ರಾತ್ರಿ ಸೇವನೆ ಮಾಡಬೇಕು ಇದಕ್ಕೆ ಸ್ವಲ್ಪ ಬೆಲ್ಲ ಮಿಶ್ರಣ ಮಾಡಿ ಸೇವನೆ ಮಾಡಬಹುದು ಹೀಗೆ ಇದನ್ನು ಸೇವನೆ ಮಾಡುವುದರಿಂದ ವಾದ ಪಿತ್ತ ಕಫ ಈ ಮೂರು ವಿಕಾರಗಳು ಕೂಡ ದೂರವಾಗುತ್ತದೆ ಹಾಗಾಗಿ ಈ ಒಂದು ಕಷಾಯವನ್ನು ಚಳಿಗಾಲದ ಸಮಯದಲ್ಲಿ ಪ್ರತಿನಿತ್ಯ ಸೇವನೆ ಮಾಡಲೇಬೇಕು ಎಂದು ಆಯುರ್ವೇದದಲ್ಲಿ ಹೇಳುತ್ತಾರೆ ಇದರ ಜೊತೆಗೆ ತಮ್ಮ ಆಹಾರ ಪದಾರ್ಥದಲ್ಲಿಯೂ ಕೂಡ ಕೆಲವೊಂದು ಬದಲಾವಣೆಯನ್ನು ಮಾಡಿಕೊಳ್ಳುವುದರಿಂದ ಈ ಎಲ್ಲಾ ಸಮಸ್ಯೆಯಿಂದ ದೂರ ಇರಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">