ಕರ್ನಾಟಕದ ಆದಿ ಮಧ್ಯ ಅಂತ್ಯ ಸುಬ್ರಹ್ಮಣ್ಯ ಸ್ವಾಮಿಯ ಕ್ಷೇತ್ರಗಳು ಇಲ್ಲಿವೆ ನೋಡಿ - Karnataka's Best News Portal

ಕರ್ನಾಟಕದ ಆದಿ ಮದ್ಯ ಅಂತ್ಯ ಸುಬ್ರಹ್ಮಣ್ಯ ಕ್ಷೇತ್ರಗಳು||
ಸಾಮಾನ್ಯವಾಗಿ ಮನುಷ್ಯರ ಜಾತಕದಲ್ಲಿ ಹಲವಾರು ದೋಷಗಳು ಕಂಡುಬರುತ್ತದೆ ಅಂತಹ ದೋಷಗಳಲ್ಲಿ ಮುಖ್ಯವಾಗಿ ನಾಗದೋಷ ಅಥವಾ ಸರ್ಪ ದೋಷ ಸೇರಿಕೊಂಡಿರುತ್ತದೆ ಈ ಸರ್ಪದೋಷ ಪೂರ್ವಜರ ಕರ್ಮದಿಂದಲೋ ಅಥವಾ ಪ್ರಸ್ತುತ ಜನ್ಮದಲ್ಲಿ ಸರ್ಪಗಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತೊಂದರೆ ಕೊಟ್ಟಿದ್ದಕ್ಕಾಗಿಯೋ ನಮಗೆ ಬಂದಿರುತ್ತದೆ ನಾಗ ದೋಷವುಳ್ಳವರು ಸಾಮಾನ್ಯವಾಗಿ ಜೀವನಪೂರ್ತಿ ಸಾಕಷ್ಟು ಅಡೆತಡೆಗಳನ್ನು ಕಷ್ಟಕಾರ್ಪಣ್ಯಗಳನ್ನು ಅನುಭವಿಸಬೇಕಾಗುತ್ತದೆ ಮುಖ್ಯವಾಗಿ ನಾಗದೋಷ ನಿವಾರಣೆಗೆ ಸುಬ್ರಮಣ್ಯ ದೇವರನ್ನು ಕಟ್ಟುನಿಟ್ಟಿನ ವಿಧಿ ವಿಧಾನದ ಮೂಲಕ ಪೂಜಿಸಲಾಗುತ್ತದೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಸರ್ಪ ದೋಷವನ್ನು ಪರಿಹರಿಸುವಂತಹ ಹಲವಾರು ಸುಬ್ರಮಣ್ಯ ಕ್ಷೇತ್ರಗಳು ಇವೆ ಅವುಗಳಲ್ಲಿ ಮೂರು ಕ್ಷೇತ್ರಗಳು ಬಹಳ ಶಕ್ತಿಶಾಲಿ ಎನ್ನಿಸಿದ್ದು ಈ ಕ್ಷೇತ್ರಗಳನ್ನು ನಮ್ಮ ಹಿರೀಕರು ಆದಿ ಸುಬ್ರಹ್ಮಣ್ಯ ಮಧ್ಯ ಸುಬ್ರಮಣ್ಯ ಮತ್ತು ಅಂತ್ಯ ಸುಬ್ರಮಣ್ಯ ಎಂದು ಕರೆದು ಪೂಜಿಸಿದ್ದಾರೆ.

ಈ ಆದಿ ಮದ್ಯ ಮತ್ತು ಅಂತ್ಯ ಸುಬ್ರಹ್ಮಣ್ಯ ದೇವಸ್ಥಾನ ಗಳನ್ನು ಶಶ್ಟಿ ಆಶ್ಲೇಷ ನಕ್ಷತ್ರ ಹಾಗೂ ಕೃತಿಕ ನಕ್ಷತ್ರಗಳ ಸಂದರ್ಭಗಳಲ್ಲಿ ಒಂದೇ ದಿನದಲ್ಲಿ ಸಾಧ್ಯವಾದರೆ ದರ್ಶನವನ್ನು ಪಡೆದುಕೊಂಡರೆ ಉತ್ತಮವಾದಂತಹ ಫಲ ದೊರೆಯುತ್ತದೆ ಎನ್ನುವ ಭಾವನೆ ಇದೆ ಹಾಗಾದರೆ ಈ ದಿನ ಕರ್ನಾಟಕದ ಆದಿ ಮದ್ಯ ಮತ್ತು ಅಂತ್ಯ ಸುಬ್ರಮಣ್ಯ ದೇವಸ್ಥಾನಗಳ ಬಗ್ಗೆ ವಿಸ್ತೃತ ಮಾಹಿತಿ ಯನ್ನು ತಿಳಿದುಕೊಳ್ಳುತ್ತಾ ಹೋಗೋಣ.ಆದಿ ಸುಬ್ರಹ್ಮಣ್ಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಆದಿ ಸುಬ್ರಹ್ಮಣ್ಯ ಕ್ಷೇತ್ರ ಎಂದೇ ಪ್ರಸಿದ್ಧಿಯನ್ನು ಪಡೆದಿದೆ ಪರಶುರಾಮ ಸೃಷ್ಟಿಯ ಸಪ್ತಮೌಕ್ಷ ಕ್ಷೇತ್ರಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಸಹ ಪ್ರಮುಖದ್ದು ಎಂದೆನಿಸಿಕೊಂಡಿದೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುರಿತು ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಉಲ್ಲೇಖಿಸಲಾಗಿದೆ.

ಶಿವ ಪಾರ್ವತಿಯ ಪುತ್ರರಾದಂತಹ ಸುಬ್ರಹ್ಮಣ್ಯ ಸ್ವಾಮಿಯ ತಾರಕಾದಿ ರಕ್ಕಸರನ್ನು ತಮ್ಮ ಶಕ್ತಿ ಆಯುಧ ದಿಂದ ಸಂಹರಿಸಿ ಅನಂತರ ಆ ಆಯುಧವನ್ನು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರವಹಿಸುವಂತಹ ದಾರಾ ನದಿಯಲ್ಲಿ ಶುಭ್ರಗೊಳಿಸುತ್ತಾರೆ ಆ ಬಳಿಕ ಕ್ಷೇತ್ರದ ಸಮೀಪದಲ್ಲಿಯೇ ಇರುವಂತಹ ಕುಮಾರ ಪರ್ವತ ಶ್ರೇಣಿಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ ಇಂದ್ರ ತನ್ನ ಪುತ್ರಿ ದೇವಸೇನೆಯನ್ನು ಸುಬ್ರಹ್ಮಣ್ಯ ಸ್ವಾಮಿಗೆ ಕೊಟ್ಟು ವಿವಾಹ ಮಾಡಿಸುತ್ತಾರೆ ಗರುಡನಿಂದ ಪ್ರಾಣಭಯ ವನ್ನು ಎದುರಿಸುತ್ತಿದ್ದಂತಹ ಸರ್ಪರಾಜ ವಾಸುಕಿಯ ಕೋರಿಕೆಯ ಮೇರೆಗೆ ಸುಬ್ರಹ್ಮಣ್ಯ ಸ್ವಾಮಿಯು ವಾಸುಕಿಯು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿಯೇ ನೆಲೆ ನಿಲ್ಲುತ್ತಾರೆ ಈ ಕ್ಷೇತ್ರದಲ್ಲಿ ಕುಕ್ಕೆ ಸುಬ್ರಮಣ್ಯನಿಗೆ ಸಲ್ಲಿಸಿದಂತಹ ಪೂಜೆ ಸರ್ಪ ರಾಜ ವಾಸುಕಿಗೂ ಕೂಡ ಸಲ್ಲುತ್ತದೆ ಹಾಗಾಗಿಯೇ ಅನಾದಿ ಕಾಲದಿಂದಲೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ನಾಗರಾಧನೆಗೆ ಪ್ರಸಿದ್ಧಿಯನ್ನು ಪಡೆದಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *