ವೃಶ್ಚಿಕ ರಾಶಿ ಶನಿ ಪರಿವರ್ತನೆ..2023-25 ಈ ತಪ್ಪುಗಳನ್ನು ಮಾತ್ರ ಮಾಡಬೇಡಿ ಸಮಸ್ಯೆ ತಪ್ಪಿದ್ದಲ್ಲ - Karnataka's Best News Portal

ವೃಶ್ಚಿಕ ರಾಶಿ ರಾಶಿ ಪರಿವರ್ತನೆ 2023 – 2025 ||
ಜನವರಿ 17ನೇ ತಾರೀಖು ಶನಿ ಕುಂಭ ರಾಶಿಗೆ ಹೋಗುತ್ತಾನೆ ವೃಶ್ಚಿಕ ರಾಶಿಯಿಂದ ನಾಲ್ಕನೇ ರಾಶಿಗೆ ಅಂದರೆ ನಾಲ್ಕನೇ ಶನಿ ಚತುರ್ಥದ ಶನಿ ಅರ್ಧ ಅಷ್ಟಮ ಶನಿ ಹೀಗೆಲ್ಲ ಹೇಳುತ್ತೇವೆ ಇದಕ್ಕೆ ಇನ್ನೇನು ನಿಮಗೆ ಅರ್ಧ ಅಷ್ಟಮ ಶನಿ ಶುರುವಾಗುತ್ತದೆ ಹಾಗೂ 2025ರ ಮಾರ್ಚ್ ವರೆಗೂ ಕೂಡ ಇರುತ್ತದೆ.

ಹಾಗಾದರೆ ಶನಿಯ ಪ್ರಭಾವದಿಂದ ಏನೆಲ್ಲಾ ಬದಲಾವಣೆಗಳು ಆಗುತ್ತದೆ ಹಾಗೂ ಏನೆಲ್ಲಾ ಎಚ್ಚರಿಕೆಗಳನ್ನು ಕೊಡುತ್ತಾನೆ ಎಂದು ನೋಡುವುದಾ ದರೆ ಮೂರು ಮತ್ತು ನಾಲ್ಕನೇ ಭಾಗದ ಅಧಿಪತಿ ವೃಶ್ಚಿಕ ರಾಶಿ ಅಧಿಪತಿ ಕುಜನಿಗೆ ಶತ್ರುವಾಗುತ್ತಾನೆ ಅಂದರೆ ಮೂರನೇ ಭಾವದ ವಿಕ್ರಮ ಸ್ಥಾನದ ಅಧಿಪತಿಯಾಗುತ್ತಾನೆ ಅಂದರೆ ವೃಶ್ಚಿಕ ರಾಶಿಯವರಿಗೆ ಈ ಒಂದು ಪ್ರಭಾವದಿಂದ ಹೆಚ್ಚಿನ ಹಣಕಾಸು ಬರುತ್ತದೆ.


ಅದರಲ್ಲೂ ಹಣಕಾಸು ಸುಮ್ಮನೆ ಬರುವುದಿಲ್ಲ ಅದರ ಜೊತೆ ನಿಮ್ಮ ಶ್ರಮವೂ ಕೂಡ ಇರಬೇಕು ಆಗ ಮಾತ್ರ ನಿಮಗೆ ಹಣಕಾಸಿನ ಅಭಿವೃದ್ಧಿ ಆರ್ಥಿಕ ಅಭಿವೃದ್ಧಿ ಎನ್ನುವುದು ಹೆಚ್ಚಾಗುತ್ತದೆ ಬದಲಿಗೆ ಸುಮ್ಮನೆ ಕುಳಿತುಕೊಂಡರೆ ಯಾವುದೇ ರೀತಿಯಾಗಿ ಹಣಕಾಸಿನ ಒಳಹರಿವು ಹೆಚ್ಚಾಗುವುದಿಲ್ಲ. ಅದರಲ್ಲೂ ನೀವು ಹೆಚ್ಚಾಗಿ ಹಣವನ್ನು ಸಂಪಾದನೆ ಮಾಡಬೇಕು ಎಂದು ಹೆಚ್ಚು ಶ್ರಮ ವಹಿಸುತ್ತಿದ್ದರೆ ಇದರಿಂದ ಮಾನಸಿಕ ಒತ್ತಡವು ಕೂಡ ಹೆಚ್ಚಾಗುತ್ತದೆ.

ಇದರಿಂದ ನಿಮ್ಮ ಮನಸ್ಸಿಗೆ ಸ್ವಲ್ಪಮಟ್ಟಿಗೆ ಕಿರಿಕಿರಿ ಉಂಟಾಗುತ್ತದೆ ಹಾಗೆಯೇ ನೀವು ಮಾಡುವಂತಹ ಎಲ್ಲಾ ಕೆಲಸಗಳಲ್ಲಿಯೂ ಕೂಡ ಹೆಚ್ಚಿನ ಸಮಯ ಕೊಡಬೇಕಾಗುತ್ತದೆ ಆಗ ಮಾತ್ರ ನಿಮ್ಮ ಕೆಲಸದಲ್ಲಿ ಏಳಿಗೆಯನ್ನು ಕಾಣಬಹುದು. ಜೊತೆಗೆ ನೀವು ಅಂದು ಕೊಂಡಂತೆ ಚಿಕ್ಕಪುಟ್ಟ ಕೆಲಸಗಳಲ್ಲಿಯೂ ಕೂಡ ಹೆಚ್ಚು ಖುಷಿ ಪಡುವಂತಹ ಸನ್ನಿವೇಶಗಳು ಎದುರಾಗುವು ದಿಲ್ಲ ಕೇವಲ ನಿಮ್ಮ ಕೆಲಸದಲ್ಲಿಯೇ ನಿಮ್ಮ ಗಮನ ಇರುತ್ತದೆ.

ಹಾಗೂ ಶತ್ರು ಸ್ಥಾನದ ಮೇಲೆ ಶನಿಯ ದೃಷ್ಟಿ ಇರುವುದ ರಿಂದ ನಿಮಗೆ ಶತ್ರುಗಳು ಹೆಚ್ಚಾಗುತ್ತಾರೆ ಇದರಿಂದ ಮಿತ್ರರು ಕೂಡ ಶತ್ರುಗಳಾಗಿ ಬದಲಾಗುತ್ತಾರೆ ಹಾಗೂ ಈ ಒಂದು ತಿಂಗಳಲ್ಲಿ ವೃಶ್ಚಿಕ ರಾಶಿಯವರು ಕೆಲವೊಂದಷ್ಟು ವಿಚಾರಗಳಿಗೆ ಬೇರೆಯವರಿಂದ ಹಣವನ್ನು ಸಾಲದ ರೂಪವಾಗಿ ಪಡೆಯುವಂತಹ ಸನ್ನಿವೇಶಗಳು ಎದುರಾಗುತ್ತದೆ ಇದರ ಜೊತೆ ನಿಮ್ಮ ಆರೋಗ್ಯದಲ್ಲಿ ಕೆಲವೊಂದಷ್ಟು ತೊಂದರೆಗಳು ಕೂಡ ಬರಬಹುದು.

ಆದ್ದರಿಂದ ನೀವು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವುದು ಉತ್ತಮ ಮೇಲೆ ಹೇಳಿದಂತೆ ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದು ಎಂದು ಹೇಳಿದರು ಆದರೂ ಕೂಡ ಶನಿಯ ಕೆಲವೊಂದು ಬದಲಾವಣೆಯಿಂದ ನಿಮ್ಮಲ್ಲಿ ಎಷ್ಟೇ ಹಣ ಇದ್ದರೂ ಕೂಡ ಅದು ಕೆಲವೊಮ್ಮೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಇದೆಲ್ಲದಕ್ಕೂ ಶನಿಯ ಪ್ರಭಾವವೇ ಮೂಲ ಕಾರಣ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *