50 ರಲ್ಲಿಯೂ 25 ರಂತೆ ಕಾಣಬೇಕಾ ? ಇದನ್ನು ಕೂದಲಿಗೆ ಬಳಸಿ ನೋಡಿ ನೀವೆ ಚಮತ್ಕಾರ - Karnataka's Best News Portal

50ರಲ್ಲಿಯೂ 25ರಂತೆ ಕಾಣಬೇಕಾ ಈ ಟ್ರಿಕ್ ನಿಮ್ಮ ಕೂದಲಿಗೆ ಬಳಸಿ ನೋಡಿ. ಕೂದಲು ಉದ್ದ ಆಗಲು ಇದು ಸಹಾಯ ಮಾಡುತ್ತದೆ.ನಮ್ಮ ಕೂದಲಿನ ಬೆಳವಣಿಗೆ ಹಾಗೂ ಬಿಳಿ ಕೂದಲನ್ನು ಕಪ್ಪಾಗಿಸುವಿಕೆ ಇನ್ನಿತರ ಯಾವುದೇ ಕೂದಲಿನ ಸಮಸ್ಯೆ ಇದ್ದರೂ ಸಹ ಈ ಒಂದು ಪ್ಯಾಕನ್ನು ನೀವು ಹಚ್ಚಿದರೆ ಖಂಡಿತವಾಗಿಯೂ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ನೀರನ್ನು ಹಾಕಿ ಬೆಚ್ಚಗಾಗುವ ತನಕ ಬಿಡಿ ನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ಟೀ ಪೌಡರ್, ಒಂದು ಟೇಬಲ್ ಸ್ಪೂನ್ ನಷ್ಟು ಕಾಫಿ ಪೌಡರ್ ಅನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಿ ಶೋಧಿಸಿ ತಣ್ಣಗಾಗಲು ಬಿಡಿ.

ನಂತರ ಎರಡು ರಿಂದ ಮೂರು ಟೇಬಲ್ ಸ್ಪೂನ್ ನಷ್ಟು ಆಲುವೆರಾ ಜೆಲ್ ಹಾಗೆ ಅರ್ಧ ಬೌಲ್ ನಷ್ಟು ಕರಿಬೇವನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಒಂದು ಮಿಕ್ಸಿ ಜಾರಿನಲ್ಲಿ ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ.


ನಂತರ ಒಂದು ಕಬ್ಬಿಣದ ಪಾತ್ರೆಯಲ್ಲಿ 4 ಟೇಬಲ್ ಸ್ಪೂನ್ ನಷ್ಟು ಹೆನ್ನಾ ಪೌಡರ್ ಅನ್ನು ಹಾಕಿ ಅದಕ್ಕೆ ಶೋಧಿಸಿ ಇಟ್ಟುಕೊಂಡಿರುವಂತಹ ಕಾಫಿ ಮತ್ತು ಟೀ ಡಿಕಾಕ್ಷನ್ ಹಾಗು ಅಲೋವೆರಾ ಮತ್ತು ಕರಿ ಬೇವಿನ ಸೊಪ್ಪಿನ ಪೇಸ್ಟ್ ಅನ್ನು ಸಹ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ರಾತ್ರಿ ಹಾಗೆ ಬಿಡಿ ನಂತರ ಬೆಳಗ್ಗೆ ಎದ್ದು ಅದಕ್ಕೆ ಒಂದು ಮೊಟ್ಟೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬಹುದು. ಮೊಟ್ಟೆಯ ಬೇಡ ಎನ್ನುವವರು ಮೊಸರನ್ನು ಸಹ ಸೇರಿಸಬಹುದು.

ಈ ಒಂದು ಪ್ಯಾಕ್ ನಿಮಗೆ ನಿಮ್ಮ ಕೂದಲು ಸ್ಮೂತ್ ಆಗುವಂತೆ ಮಾಡುತ್ತದೆ. ಈ ಒಂದು ಪ್ಯಾಕ್ ಅನ್ನು ನೀವು ಕೂದಲಿನ ಬುಡ ಹಾಗೆಯೇ ಪೂರ್ತಿ ಕೂದಲಿಗೆ ಹಚ್ಚಿ ಮೂರು ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ನೀರಿನಿಂದ ವಾಶ್ ಮಾಡಿಕೊಳ್ಳಬೇಕು ಯಾವುದೇ ಶಾಂಪನ್ನು ಉಪಯೋಗ ಮಾಡಬಾರದು.

ಅದೇ ದಿನ ರಾತ್ರಿ ಸಮಯದಲ್ಲಿ ನಿಮ್ಮ ಕೂದಲಿಗೆ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ತುಂಬಾ ಒಳ್ಳೆಯದು ಸಾಸಿವೆ ಎಣ್ಣೆ ಉಪಯೋಗಿಸುವುದರಿಂದ ನಿಮಗೆ ಮೊದಲೇ ಬೆಳಿ ಕೂದಲಿನ ಸಮಸ್ಯೆ ಇದ್ದರೆ ಅದನ್ನು ಕಪ್ಪಾಗಿಸಲು ಇದು ಸಹಾಯ ಮಾಡುತ್ತದೆ. ನಂತರ ಬೆಳಗ್ಗೆ ಎದ್ದು ನೀವು ಶಾಂಪೂ ಇಂದ ತಲೆ ಕೂದಲನ್ನು ವಾಶ್ ಮಾಡಿಕೊಳ್ಳಬಹುದು.

ಕಡಿಮೆ ಕೆಮಿಕಲ್ ಇರುವಂತಹ ಶಾಂಪೂವನ್ನು ಬಳಸುವುದು ತುಂಬಾ ಒಳ್ಳೆಯದು ಇದನ್ನು ನೀವು ತಿಂಗಳಿಗೆ ಎರಡರಿಂದ ಮೂರು ಬಾರಿ ಹಚ್ಚಿಕೊಳ್ಳುವುದರಿಂದ ನಿಮ್ಮ ಬಿಳಿಯಾಗಿರುವ ಕೂದಲುಗಳು ಕಪ್ಪಾಗಿಸುತ್ತದೆ ಸಹಾಯಮಾಡುತ್ತದೆ ಅಷ್ಟೆ ಅಲ್ಲದೇ ಉತ್ತಮವಾದಂತಹ ಗುಣಗಳನ್ನು ಹೊಂದಿರುವ ಈ ಒಂದು ಪ್ಯಾಕ್ ತುಂಬಾ ಉಪಯುಕ್ತವಾಗಿದೆ.

Leave a Reply

Your email address will not be published. Required fields are marked *