ದೇಹ ತ್ಯಜಿಸುವಾಗ ಆ 12 ನಿಮಿಷ ಆತ್ಮ ಏನ್ಮಾಡುತ್ತೆ ಗೊತ್ತಾ ? ಆತ್ಮಕ್ಕೆ ಕೊಡೊ ಆ ಕೊನೆ ಅವಕಾಶ ಹೇಗಿರುತ್ತೆ ಗೊತ್ತಾ ? - Karnataka's Best News Portal

ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ ಆತ್ಮದ ಕಟು ಸತ್ಯ. ಆತ್ಮರೋಧಿಸುವುದನ್ನ ನೋಡಿದ್ದೀರಾ ಯಾರಾದ್ರು.
ಗರುಡ ಪುರಾಣದಲ್ಲಿ ನಮ್ಮ ಜೀವನದ ಬಗ್ಗೆ ಅನೇಕ ನಿಗೂಢ ವಿಷಯಗಳನ್ನು ಹೇಳಲಾಗಿದೆ ಒಬ್ಬ ವ್ಯಕ್ತಿ ತಿಳಿಯಬೇಕಾಗಿರುವುದರ ಬಗ್ಗೆ ಆತ್ಮಜ್ಞಾನದ ಚರ್ಚೆಯು ಗರುಡ ಪುರಾಣದ ಮುಖ್ಯ ವಿಷಯವಾಗಿದೆ. ಗರುಡ ಪುರಾಣದ 19,000 ಶ್ಲೋಕಗಳಲ್ಲಿ ಜ್ಞಾನ, ಧರ್ಮ, ನೀತಿ, ರಹಸ್ಯ, ಪ್ರಾಯೋಗಿಕ ಜೀವನ, ಸ್ವಯಂ, ಸ್ವರ್ಗ, ನರಕ ಮತ್ತು ಇತರ ಲೋಕಗಳ ವಿವರಣೆಯು ಗರುಡ ಪುರಾಣದಲ್ಲಿ ಕಂಡು ಬರುತ್ತದೆ.

ಅದರಲ್ಲಿಯೂ ಗರುಡ ಪುರಾಣ ಮನುಷ್ಯ ಬದುಕಿದ್ದಾಗ ಆತ ಮಾಡುವ ಕರ್ಮಗಳು ಆತ ಸತ್ತ ನಂತರ ಯಾವ ರೀತಿಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬುದನ್ನು ಸವಿಸ್ತಾರವಾಗಿ ವಿವರಣೆ ನೀಡುತ್ತದೆ. ಅಲ್ಲದೆ ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯ ದೇಹವನ್ನು ಆತ್ಮ ತೊರೆದ ನಂತರ ಆ ವ್ಯಕ್ತಿಯ ಆತ್ಮ ಸ್ವರ್ಗ ಅಥವಾ ನರಗಕ್ಕೆ ಹೋಗುತ್ತದೆ.


ಅಲ್ಲಿ ಮನುಷ್ಯ ಬದುಕಿದ್ದಾಗ ಯಾವ ಯಾವ ಪಾಪ ಕರ್ಮಗಳನ್ನು ಮಾಡಿದ್ದಾನೆ ಎಷ್ಟು ಪುಣ್ಯದ ಕೆಲಸ ಮಾಡಿದ್ದಾನೆ ಎಂಬುದರ ಪ್ರಕಾರ ಆತನಿಗೆ ಹಿಂಸೆ ಹಾಗೂ ಆತನ ಸದ್ಗುಣಗಳಿಗೆ ಉತ್ತಮ ಸನ್ಮಾನ ಮಾಡಲಾಗುತ್ತದೆ. ಗರುಡ ಪುರಾಣದ ಪ್ರಕಾರ ಮನುಷ್ಯ ಬದುಕಿದ್ದಾಗ ಮಾಡುವ ತಪ್ಪುಗಳು ಸತ್ತ ನಂತರ ಆತ್ಮಕ್ಕೆ ನೀಡಲಾಗುತ್ತದೆ ಆದರೆ ದೇಹ ಅನುಭವಿಸಿದರು ಮನಸ್ಸು ಪ್ರೇರಣೆ ನೀಡುತ್ತದೆ. ಇಂದ್ರಿಯಗಳನ್ನು ಪ್ರಚೋದಿಸುತ್ತದೆ ಕೊನೆಗೆ ಸುಖ ಅನುಭವವು ತೃಪ್ತಿಯು ಎಲ್ಲವೂ ಸಮನಾಗಿಬಿಡುತ್ತದೆ.

ಆದರೆ ದೇಹ ಮಣ್ಣಾದರೆ ಮನಸ್ಸು ಅಸ್ತಿತ್ವ ಕಳೆದುಕೊಳ್ಳುತ್ತದೆ ಎಲ್ಲಾವನ್ನು ಅನುಭವಿಸಿದ ಮನ ತೃಪ್ತಿಯಿಂದ ಗಾಳಿಯಲ್ಲಿ ಲೀನವಾಗಿ ಬಿಡುತ್ತದೆ ಎಲ್ಲವೂ ಅರಿವಿಗೆ ಬಂದರೂ ಬಾರದಂತೆ ಕುಳಿತು ಆತ್ಮಾ ತೃಪ್ತಿ ಪಟ್ಟಿಕೊಂಡಿದ್ದಕ್ಕೆ ಎಲ್ಲವನ್ನು ಅನುಭವಿಸಬೇಕಾಗುತ್ತದೆ. ಯಾಕೆಂದರೆ ತಪ್ಪು ಯಾರೇ ಮಾಡಿದರು ಆಶ್ರಯ ಕೊಟ್ಟಿದ್ದು ಆತ್ಮ ಹಾಗಾಗಿ ಕೊನೆಗೆ ಅದೆಲ್ಲ ಶಿಕ್ಷೆಯು ಆತ್ಮವೇ ಅನುಭವಿಸುತ್ತದೆ ಅದು ಈ ಭೂಮಿಯ ಮೇಲೆ ಮೊದಲ ಶಿಕ್ಷೆಯ ಅನುಭವ.

ಮನುಷ್ಯನಿಗೆ ಹುಟ್ಟು-ಸಾವು ನೋವು-ನಲಿವು ಸುಖ-ದುಃಖ ಎಲ್ಲವೂ ಪ್ರಕೃತಿಯ ಸಹಜ ಗುಣ. ಒಂದು ಮಗು ಹುಟ್ಟಿದೆ ಎಂದಾಗ ಇಡೀ ಸಂಸಾರ ಸಂಬಂಧಿಕರು ಸ್ನೇಹಿತರು ಎಲ್ಲರೂ ಖುಷಿಪಡುತ್ತಾರೆ ಆದರೆ ಅದೇ ಸಾವು ಸಂಭವಿಸಿದರೆ ಆ ದುಃಖಕ್ಕೆ ಪಾರವೇ ಇರುವುದಿಲ್ಲ ಹುಟ್ಟು ಎಷ್ಟು ಆತ್ಮೀಯವೋ ಸಾವು ಅಷ್ಟೇ ಭೀಕರ.

ಸಾಯೋ ಆ 12 ನಿಮಿಷ ಆತ್ಮ ತನ್ನ ದೇಹದ ಹಿಡಿತವನ್ನು ಕಳೆದುಕೊಳ್ಳುತ್ತದೆ ಆ ವೇಳೆ ದ್ವನಿ ಕಮರಿರುತ್ತದೆ ಕಿವಿಗಳು ಸಣ್ಣಪುಟ್ಟ ಮಾತುಗಳನ್ನು ಗ್ರಹಿಸುವುದನ್ನು ನಿಲ್ಲಿಸುತ್ತಿರುತ್ತದೆ ಉಸಿರು ಬೆಂಕಿಯ ಹಬೆಯಂತೆ ಬಿಸಿ ಬಿಸಿಯಾಗಿರುತ್ತದೆ ಪಾದಗಳು ಅಲುಗಾಡುತ್ತವೆ ಹಾಗೆ ಎದೆಗೂಡು ಭಾರವಾಗಿರೋಕೆ ಶುರುವಾಗುತ್ತದೆ ಹೀಗೆ ದೇಹದಿಂದ ಆತ್ಮ ಹೊರ ಬರುವಾಗ ಸಾಕಷ್ಟು ಯಾತನೆಯನ್ನು ಪಡುತ್ತದೆ ಗಾಬರಿಯಿಂದ ಏನಾಗುತ್ತಿದೆ ಎಂದು ತಿಳಿಯದೆ ವಿಲವಿಲ ಎಂದು ಒದ್ದಾಡುತ್ತದೆ.

Leave a Reply

Your email address will not be published. Required fields are marked *