ಗಂಗ ಕಲ್ಯಾಣ ಯೋಜನೆ 2023 ಹೊಸ ಅರ್ಜಿ ಆಹ್ವಾನಿಸಲಾಗಿದೆ ನಿಮ್ಮ ಜಮೀನಿನಲ್ಲಿ ಉಚಿತ ಬೋರ್ವೆಲ್ ಕೊರೆಸಲು ಹೀಗೆ ಮಾಡಿ - Karnataka's Best News Portal

ರೈತರಿಗೆ 2023 ಕ್ಕೆ ಸರ್ಕಾರದಿಂದ ಬೋರ್ವೆಲ್ ಕೊರೆಸುವವರಿಗೆ ಉಚಿತವಾಗಿ 3 ಲಕ್ಷ ಹಣ ಸಿಗುತ್ತದೆ. ಅರ್ಜಿಯನ್ನು ಆಹ್ವಾನಿಸಲಾಗಿದೆ!!ನಮ್ಮಲ್ಲಿ ಭೂಮಿಯನ್ನು ನಂಬಿ ಹಲವಾರು ಜನ ಕೆಲಸವನ್ನು ಮಾಡುತ್ತಿದ್ದು ಅದರಲ್ಲೂ ರೈತರನ್ನು ನಮ್ಮ ದೇಶದ ಬೆನ್ನೆಲುಬು ಎಂದೇ ಹೇಳುತ್ತಾರೆ ಆದರೆ ರೈತರಿಗೆ ಕೆಲವೊಂದು ಸಮಯ ಯಾವುದೇ ರೀತಿಯಾದಂತಹ ಉಪಯೋಗಗಳು ಸಿಗುವುದಿಲ್ಲ ಇದರಿಂದ ಅವರು ತಮ್ಮ ಪ್ರಾಣವನ್ನು ಕೂಡ ಕಳೆದುಕೊಳ್ಳುತ್ತಾರೆ.

ಆದ್ದರಿಂದ ನಮ್ಮ ಕರ್ನಾಟಕ ಸರ್ಕಾರವು ರೈತರಿಗೆ ಕೆಲವೊಂದಷ್ಟು ಉಪಯೋಗವಾಗುವಂತೆ ಅವರಿಗೆ ಕೃಷಿಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುವುದಕ್ಕೆ ಕೆಲವೊಂದು ವಿಷಯಗಳಿಗೆ ಸಂಬಂಧಿಸಿದಂತೆ ಅವರಿಗೆ ಉತ್ತೇಜನ ಕೊಡುವಂತೆ ಅವರಿಗೆ ಸಹಾಯವನ್ನು ಮಾಡುತ್ತಿದ್ದಾರೆ ಅದೇನಂದರೆ ಪ್ರತಿಯೊಬ್ಬರ ಭೂಮಿಯಲ್ಲಿಯೂ ಕೂಡ ನೀರು ಸುಲಭವಾಗಿ ಸಿಕ್ಕರೆ ಆ ರೈತ ಎಷ್ಟೇ ಕಷ್ಟಪಟ್ಟಾದರೂ ಕೂಡ ಕೃಷಿಯನ್ನು ಅಭಿವೃದ್ಧಿಪಡಿಸುತ್ತಾನೆ.


ಆದರೆ ಅವನಿಗೆ ಅವನ ಜಮೀನಿನಲ್ಲಿ ಅಥವಾ ಹೊಲದಲ್ಲಿ ಯಾವುದೇ ರೀತಿಯಾದಂತಹ ನೀರಿನ ಸರಬರಾಜು ಇಲ್ಲ ಎಂದರೆ ಅವನು ಯಾವುದೇ ರೀತಿಯಾದಂತಹ ಕೆಲಸದಲ್ಲೂ ಕೂಡ ಆಸಕ್ತಿ ಹೊಂದುವುದಿಲ್ಲ ಬದಲಿಗೆ ಅವನು ಮಳೆಯನ್ನು ನಂಬಿ ಯಾವುದೇ ಬೆಳೆಯನ್ನು ಬೆಳೆದರೆ ಕೆಲವೊಮ್ಮೆ ಮಳೆ ಸರಿಯಾದ ಸಮಯಕ್ಕೆ ಬರಲಿಲ್ಲ ಎಂದರೆ ಅವೆಲ್ಲವೂ ಕೂಡ ವ್ಯರ್ಥವಾಗುತ್ತದೆ ಇದರಿಂದ ಆ ರೈತ ಸಾಲವನ್ನು ತೀರಿಸಲಾಗದೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ.

ಇವೆಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಸಹಾಯ ವಾಗುವಂತೆ ಕರ್ನಾಟಕ ಗಂಗಾ ಕಲ್ಯಾಣ ಯೋಜನೆಯ ವತಿಯಿಂದ ಪ್ರತಿಯೊಬ್ಬರ ಹೊಲಗಳಲ್ಲಿಯೂ ಕೂಡ ಬೋರ್ವೆಲ್ ಕೊರೆಸುವುದಕ್ಕೆ 3 ಲಕ್ಷದವರೆಗೆ ಉಚಿತವಾಗಿ ಹಣವನ್ನು ನೀಡುತ್ತಿದ್ದು ರೈತರು ಇದರಿಂದ ಯಾವುದೇ ರೀತಿಯ ಸಮಸ್ಯೆಗೆ ಒಳಗಾಗಬಾರದು ಅವರು ಕೂಡ ನೀರನ್ನು ಪಡೆಯುವುದರ ಮುಖಾಂತರ ತಮ್ಮ ಖುಷಿಯನ್ನು ಅಭಿವೃದ್ಧಿ ಪಡಿಸಲಿ ಎನ್ನುವ ಉದ್ದೇಶದಿಂದ ಗಂಗಾ ಕಲ್ಯಾಣ ಯೋಜನೆ ರೈತರಿಗೆ ಬೋರ್ವೆಲ್ ಕೊರಸುವುದಕ್ಕೆ 3 ಲಕ್ಷದವರೆಗೆ ಹಣವನ್ನು ಉಚಿತವಾಗಿ ಕೊಡುತ್ತಿದೆ.

ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ರೀತಿಯಾದಂತಹ ದಾಖಲಾತಿಗಳು ಬೇಕು ಯಾರೆಲ್ಲ ರೈತರು ಈ ಒಂದು ಅರ್ಜಿಯನ್ನು ಹಾಕಬಹುದು ಎಂದು ಈ ಕೆಳಗಿನಂತೆ ತಿಳಿದುಕೊಳ್ಳೋಣ ಈ ಒಂದು ಅರ್ಜಿಯನ್ನು ಪ್ರತಿಯೊಬ್ಬ ರೈತರು ಕೂಡ ಹಾಕಬಹುದು. ಆನ್ಲೈನ್ ಮುಖಾಂತರ ಹಾಗೂ ಆಫ್ಲೈನ್ ಮುಖಾಂತರವೂ ಕೂಡ ಈ ಒಂದು ಅರ್ಜಿಯನ್ನು ಹಾಕಬಹುದು.

ಈ ಒಂದು ಯೋಜನೆಯ ಮುಖ್ಯ ಉದ್ದೇಶ ಏನು ಎಂದರೆ ಪ್ರತಿಯೊಂದು ಭೂಮಿಯಲ್ಲಿಯೂ ಕೂಡ ನೀರಾವರಿ ಯೋಜನೆಯ ಸೌಲಭ್ಯವನ್ನು ಒದಗಿಸುವುದಾಗಿದೆ. ಯಾವ ಅರ್ಹತೆಗಳು ಇರಬೇಕು ಎಂದರೆ ಸಣ್ಣ ಹಾಗೂ ಅತಿ ಸಣ್ಣ ರೈತರಾಗಿರಬೇಕು ಹಾಗೂ ಇವರ ವಾರ್ಷಿಕ ಆದಾಯ 96,000 ಕ್ಕಿಂತ ಕಡಿಮೆ ಇರಬೇಕು ಈ ಒಂದು ಯೋಜನೆಗೆ ಅರ್ಜಿ ಹಾಕುವ ಅರ್ಜಿದಾರರು 18 ವರ್ಷ ಮೇಲೆ ಹಾಗೂ 55 ವರ್ಷ ಒಳಗಿನವರಾಗಿರಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *