ತೂಕ ಇಳಿಸುವವರು ತಪ್ಪದೇ ಈ ತಪ್ಪುಗಳನ್ನು ಇಂದೇ ನಿಲ್ಲಿಸಿ ಜಗತ್ತಿನ ವೇಗವಾಗಿ ಬೊಜ್ಜು ಕರಗಿಸುವ ಟೆಕ್ನಿಕ್.. - Karnataka's Best News Portal

ತೂಕ ಇಳಿಸುವವರು ಈ ತಪ್ಪುಗಳನ್ನು ಇಂದೇ ನಿಲ್ಲಿಸಿ, ತೂಕ ಇಳಿಸುವ ಸುಲಭ ವಿಧಾನ.ಕ್ರಮ ತಪ್ಪಿದ ಆಹಾರ ಪದ್ಧತಿ, ಸಮಯ ತಪ್ಪಿದ ಆಹಾರ ಪದ್ಧತಿ ಕ್ರಮ ತಪ್ಪಿದ ಜೀವನದಿಂದಾಗಿ ಈ ಒಂದು ಸಮಸ್ಯೆ ಉಂಟಾಗುತ್ತದೆ ಇನ್ನೂ ಕೆಲವರಿಗೆ ವಂಶಾನುಗತವಾಗಿ ಈ ಸಮಸ್ಯೆ ಬಂದಿರುತ್ತದೆ. ಫ್ರಿಜ್ ನಲ್ಲಿ ಇಟ್ಟು ಆಹಾರ ಸೇವನೆ ಮಾಡುವುದು ತುಂಬಾ ಅಪಾಯಕಾರಿ. ತಣ್ಣಗೆ ಇರುವುದನ್ನು ತಕ್ಷಣ ಬಿಸಿ ಮಾಡುವುದರಿಂದ ವಿಷಕಾರಿ ಅಂಶಗಳು ಉತ್ಪತ್ತಿಯಾಗಿ ಅದರಿಂದ ಬೊಜ್ಜು ಕೊಲೆಸ್ಟ್ರಾಲ್ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳು ಬರಲು ಕಾರಣವಾಗುತ್ತದೆ.

ಯಾವ ಆಹಾರದಲ್ಲಿ ಸತ್ವ ಇರುತ್ತದೆ ಆ ಆಹಾರ ನಮ್ಮ ಶರೀರಕ್ಕೆ ಧಾತು ಉತ್ಪತ್ತಿ ಮಾಡುತ್ತದೆ ಯಾವ ಆಹಾರದಲ್ಲಿ ಸತ್ವ ಇರುವುದಿಲ್ಲವೋ ಬಾಯಿ ರುಚಿಗಾಗಿ ತಿನ್ನುವಂತಹ ಆಹಾರದಲ್ಲಿ ಕೊಬ್ಬು ಕೊಲೆಸ್ಟ್ರಾಲ್ ಎನ್ನುವಂತಹದ್ದು ಇರುತ್ತದೆ. ನಮ್ಮ ಜೀರ್ಣಾಂಗ ವ್ಯವಸ್ಥೆ ಕ್ರಿಯಾಶೀಲವಾದಾಗ ಈ ರೀತಿಯಾದಂತಹ ಬೊಜ್ಜಿನ ಸಮಸ್ಯೆ ಬರುವುದಿಲ್ಲ, ಕುಕ್ಕರ್ ನಲ್ಲಿ ಬೇಯಿಸಿರುವಂತಹ ಆಹಾರದಲ್ಲಿ ಪೋಷಕಾಂಶಗಳು ಇರುವುದಿಲ್ಲ


ಆದ್ದರಿಂದ ಕುಕ್ಕರ್ ನಲ್ಲಿ ಮಾಡಿದ್ದು ಆಹಾರಗಳನ್ನು ಸೇವಿಸುವುದರಿಂದ ಬೊಜ್ಜಿನ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಪರಿಹಾರ ಮಾರ್ಗಗಳು ಆಹಾರಕ್ಕಿಂತ ಮೊದಲು ಶುಂಠಿ ಮತ್ತು ಶೈಂದವ ಲವಣವನ್ನು ಅಗಿದು ಸೇವನೆ ಮಾಡುವುದರಿಂದ ಜಟರ ಚೆನ್ನಾಗಿ ಕ್ರಿಯಾಶೀಲವಾಗುತ್ತದೆ ಆಗ ತಿಂದ ಆಹಾರ ಜೀರ್ಣವಾಗುತ್ತದೆ. ನಾವು ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇರುವುದರಿಂದ ನಮಗೆ ಅನೇಕ ರೀತಿಯಾದಂತಹ ಸಮಸ್ಯೆಗಳು ಉಂಟಾಗುತ್ತದೆ

ಆದ್ದರಿಂದ ನಾವು ಬೆಳಿಗ್ಗೆ 8 ರಿಂದ 9 ಮಧ್ಯಾಹ್ನ 1 ರಿಂದ 2 ಸಂಜೆ 6 ರಿಂದ 6:30 ಒಳಗಡೆ ಆಹಾರ ಸೇವನೆಯನ್ನು ಮಾಡಬೇಕು. ಹಸಿ ಶುಂಠಿ ರಸ ಒಂದು ಟೇಬಲ್ ಸ್ಪೂನ್, ನಿಂಬೆಹಣ್ಣಿನ ರಸ ಎರಡು ಟೇಬಲ್ ಸ್ಪೂನ್, ಹಿಂಗು 4 ಚಿಟಿಕೆ, ಶೈಂದವ ಲವಣ ನಾಲ್ಕು ಚಿಟಿಕೆ, ಕಾಳುಮೆಣಸಿನ ಪುಡಿ ಆರು ಚಿಟಿಕೆ ಇದನ್ನು ಹಾಕಿ

ಆಹಾರಕ್ಕಿಂತ 15 ನಿಮಿಷದ ಮೊದಲು ಸೇವನೆ ಮಾಡುವುದರಿಂದ ಜಠರಾಗ್ನಿ ಕ್ರಿಯಾಶೀಲವಾಗುತ್ತದೆ ಮೆಟಬಾಲಿಸಂ ರೇಟ್ ಹೆಚ್ಚಾಗುತ್ತದೆ‌. ಜೀರ್ಣಾಂಗ ವ್ಯವಸ್ಥೆ ಎಲ್ಲ ದೋಷಗಳು ನಿವಾರಣೆಯಾಗಿ ನಿಮ್ಮ ತೂಕ ಸಮತೋಲನದಲ್ಲಿ ಇರುತ್ತದೆ. ಬೆಳಿಗ್ಗೆ ಎದ್ದು ಹೊಟ್ಟೆ ತುಂಬಾ ಹಣ್ಣು ತರಕಾರಿಗಳನ್ನು ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಹಾಗೆ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.

ಮಧ್ಯಾನ ಅನ್ನ, ಮುದ್ದೆ, ಚಪಾತಿ ರೊಟ್ಟಿ ಇದು ಕಡಿಮೆ ಇರಬೇಕು ಸಾಂಬಾರ್ ಹಾಗೆ ಪಲ್ಯ ಹೆಚ್ಚಿನ ಪ್ರಮಾಣದಲ್ಲಿ ಇರಬೇಕು. ರಾತ್ರಿ ಮಲಗುವಂತಹ ಸಮಯದಲ್ಲಿ ದ್ರವ ಆಹಾರಗಳನ್ನು ಸೇವನೆ ಮಾಡಬೇಕು ಅಂದರೆ ಗಂಜಿ ಸೇವನೆ ಮಾಡಬೇಕು ಘನ ಆಹಾರಗಳನ್ನು ಸೇವನೆ ಮಾಡಬಾರದು. ಹೀಗೆ ಮಾಡಿದರೆ ನಿಮ್ಮ ದೇಹದ ತೂಕವನ್ನು ಅತಿ ವೇಗವಾಗಿ ನೀವು ಕಳೆದುಕೊಳ್ಳಬಹುದು.

Leave a Reply

Your email address will not be published. Required fields are marked *