ಶ್ರೀ ರಾಮನಿಗಾಗಿ ಬರುತ್ತಿದೆ ನೇಪಾಳದ ಶಿಲೆ ಆ ಪುಟ್ಟ ಊರಿಂದಲೇ ಹುಟ್ಟಿ ಬರುತ್ತಿದ್ದಾನೆ ಶ್ರೀ ರಾಮ ಏನಿದು 6 ಲಕ್ಷ ವರ್ಷಗಳ ಹಿಂದಿನ ಸಾಲಿ ಗ್ರಾಮ. - Karnataka's Best News Portal

ಶ್ರೀರಾಮನಿಗಾಗಿ ಬರುತ್ತಿದೆ ನೇಪಾಳದ ಶಿಲೆ…! ಏನಿದು 6 ಲಕ್ಷ ವರ್ಷಗಳ ಹಿಂದಿನ ಸಾಲಿಗ್ರಾಮ…!!
ಅಯೋಧ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿದೆ ಇದೀಗ ನೇಪಾಳದಿಂದ ರಾಮ ಹಾಗೂ ಸೀತಾಮಾತೆಯ ವಿಗ್ರಹಗಳನ್ನು ಕೆತ್ತಲು ಸಾಲಿಗ್ರಾಮ ಕಲ್ಲುಗಳನ್ನು ತರಲಾಗಿದೆ ಇದು ಸಾಮಾನ್ಯ ಶಿಲೆಗಳಲ್ಲ ಇದರಲ್ಲಿ ತುಂಬಾ ವಿಶೇಷತೆಗಳು ಇದೆ ಈ ಶಿಲೆಗಳು ಸುಮಾರು 60 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಶಿಲೆಗಳು.

ಅಂದರೆ ಕೋಟಿ ವರ್ಷಗಳಷ್ಟು ಹಳೆಯದಾದ ಕಲ್ಲುಗಳು ಇವು ಇದೀಗ ಇದೆ ಬಂಡೆಗಳನ್ನು ನೇಪಾಳದಿಂದ ಅಯೋಧ್ಯೆಗೆ ತರಿಸಿಕೊಳ್ಳಲಾಗಿದೆ ಅದರಲ್ಲಿ ಒಂದು ಬಂಡೆ 26 ಟನ್ ಹಾಗೂ ಇನ್ನೊಂದು ಬಂಡೆ 14 ಟನ್ ತೂಕವಿದೆ. ಇನ್ನು ಈ ಬಂಡೆಗಳು ಕೋಟ್ಯಾಂತರ ವರ್ಷಗಳಿಂದ ನದಿಯ ನೀರಿನಲ್ಲಿ ಇದ್ದ ಬಂಡೆಗಳು ನೇಪಾಳದ ಮಸ್ತಾoಗ್ ಜಿಲ್ಲೆಯ ಸಾಲಿಗ್ರಾಮ ಅಥವಾ ಮುಕ್ತಿನಾಥ ಸಮೀಪವಿರುವ ಸ್ಥಳದಲ್ಲಿ.


ಗಂಡಕ್ಕಿ ಎಂಬ ನದಿ ಹರಿಯುತ್ತದೆ ಇದೇ ನದಿಯಿಂದ ಕಾಳಿಕಂಡಕಿ ಎನ್ನುವ ಜಲಪಾತ ಕೂಡ ಧುಮ್ಮಿಕುತ್ತದೆ. ಇದು ಗಣೇಶ್ವರಧಾಮ್ ಗಣ್ಕಿಯಿಂದ ಉತ್ತರಕ್ಕೆ 85km ದೂರದಲ್ಲಿರುವ ದಾಮೋದರ್ಕುಂಡ್ ನಿಂದ ಹುಟ್ಟುತ್ತದೆ ಇಲ್ಲಿಂದಲೇ ಈ ಎರಡು ಬಂಡೆಗಳನ್ನು ತರಲಾಗಿದೆ ಈ ಶಿಲೆಗಳಿಂದ ಬಾಲ ರಾಮ ವಿಗ್ರಹಗಳನ್ನು ಕೆತ್ತಲಾಗುತ್ತದೆ ಈ ವಿಗ್ರಹ ಕೆತ್ತಲು ಬರೋಬ್ಬರಿ ಒಂದು ವರ್ಷಗಳ ಕಾಲ ತೆಗೆದುಕೊಳ್ಳುತ್ತದೆ.

ಮುಂದಿನ ಮಕರ ಸಂಕ್ರಾಂತಿಯ ಹೊತ್ತಿಗೆ ಈ ಕಾರ್ಯ ಪೂರ್ಣಗೊಳ್ಳ ಬಹುದು. ಈ ಸಾಲಿಗ್ರಾಮ ಶಿಲೆಗಳು ಸಾಮಾನ್ಯ ಶಿಲೆಗಳಲ್ಲ ವೈಜ್ಞಾನಿಕ ವಾಗಿ ಈ ಸಾಲಿಗ್ರಾಮಕಲ್ಲುಗಳು ಒಂದು ರೀತಿಯಲ್ಲಿ ಪಳೆಯುಳಿಕೆ ಶಿಲೆಗಳಾಗಿದೆ ಇದರಲ್ಲಿ ಆಶ್ಚರ್ಯಕರ ಸಂಗತಿ ಏನು ಎಂದರೆ ಇದು ನೇಪಾಳದ ಕಾಳಿಕಂಡಕಿ ಎನ್ನುವ ನದಿ ತೀರಗಳಲ್ಲಿ ಮಾತ್ರ ಸಿಗುವ ಅಪರೂಪದ ಶಿಲೆಗಳು ಇಲ್ಲಿ ಬಿಟ್ಟರೆ ಜಗತ್ತಿನ ಬೇರೆಲ್ಲೂ ಕೂಡ ಈ ರೀತಿಯಾದಂತಹ ಅಪರೂಪದ ಶಿಲೆ ಕಲ್ಲು ಸಿಗುವುದಿಲ್ಲ.

ಇನ್ನು ನಮ್ಮ ಹಿಂದೂ ಧರ್ಮದಲ್ಲಿ ಸಾಲಿಗ್ರಾಮ ಕಲ್ಲುಗಳಿಗೆ ಪವಿತ್ರ ಸ್ಥಾನವಿದೆ ಇವುಗಳನ್ನು ದೈವಶಿಲೆ ಎಂದೇ ಕರೆಯಲಾಗುತ್ತದೆ ಈ ಶಿಲೆಗಳು ವಿಷ್ಣುವಿನ ಕೈಯಲ್ಲಿರುವ ಶಂಖವನ್ನು ಹೋಲುತ್ತವೆ ಪುರಾಣದಲ್ಲಿ ದಾಖಲಾಗಿರುವ ಪ್ರಕಾರ ವ್ಯಾಸ ದೇವರಿಂದ ಈ ಪವಿತ್ರ ಕಲ್ಲುಗಳನ್ನು ಮಧ್ವಾಚಾರ್ಯರು ಪಡೆದಿದ್ದರಂತೆ ಇಲ್ಲಿ ನಿಮಗೆ ಗೊತ್ತಿರಬೇಕಾದ ಮತ್ತೊಂದು ಸಂಗತಿ ಏನೆಂದರೆ

ಉಡುಪಿಯ ಕೃಷ್ಣ ಮಠದಲ್ಲಿರುವ ಕೃಷ್ಣನ ವಿಗ್ರಹ, ತಿರುವನಂತಪುರಂನ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ವಿಷ್ಣುವಿನ ವಿಗ್ರಹ, ಬೃಂದಾವನ ರಾಧಾ ರಮಣ ದೇವಸ್ಥಾನದ ಮೂರ್ತಿ ಮತ್ತು ಗಡವಾಲ್ ನ ಬದ್ರಿನಾಥ ಮಂದಿರದಲ್ಲಿರುವ ವಿಷ್ಣುವಿನ ವಿಗ್ರಹವನ್ನು ಸಹ ಸಾಲಿಗ್ರಾಮ ಶಿಲೆಗಳಿಂದಲೇ ನಿರ್ಮಿಸಲಾಗಿದೆ ಇನ್ನು ಪುರಾಣದ ಹಲವು ಕಥೆಗಳಲ್ಲಿಯೂ ಸಹ ಈ ಸಾಲಿಗ್ರಾಮ ಕಲ್ಲುಗಳ ಉಲ್ಲೇಖ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *