ಮೈಲಾರ ಕಾರಣಿಕ ಹೇಳೊ ಗೊರವಯ್ಯನ ಅತಿ ದೊಡ್ಡ ರಹಸ್ಯ ‌...ಈ ವಿಡಿಯೋ ನೋಡಿ - Karnataka's Best News Portal

ಮೈಲಾರ ಕಾರಣಿಕ ಹೇಳೋ ಗೊರವಯ್ಯನ ಅತಿ ದೊಡ್ಡ ರಹಸ್ಯ..!!ಗೊರವಯ್ಯ ಅಥವಾ ಗ್ವಾರಪ್ಪ ನುಡಿಯುವ ಭವಿಷ್ಯವನ್ನು ಹೆಚ್ಚಾಗಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಭಾರತದ ಜನಾಂಗದವರು ತುಂಬಾ ನಂಬುತ್ತಾರೆ ಜಾತ್ಯಾತೀಕವಾಗಿ ಜನರು ಮೈಲಾರ ಲಿಂಗೇಶ್ವರ ನನ್ನು ಇಲ್ಲಿ ಆರಾಧಿಸಿಕೊಂಡು ಬಂದಿದ್ದಾರೆ! ಜಾತ್ಯಾತೀಕವಾಗಿ ಗೊರವಯ್ಯ ದೀಕ್ಷೆ ಪಡೆಯಲು ಎಲ್ಲರಿಗೂ ಅವಕಾಶವಿದೆ ಆದರೆ! ಕುರುಬ ಹಾಲು ಮತದ ಗೊರವಯ್ಯ ಮಾತ್ರ.

ಕಾರಣಿಕ ನುಡಿಯಲು ಅರ್ಹರಾಗಿರುತ್ತಾರೆ ಸದ್ದಲೆ ಎಂದು ಹೇಳಿದ ಬಳಿಕ ಆ ವರ್ಷದ ಕಾರಣಿಕವನ್ನು ನುಡಿಯುವುದು ಸಂಪ್ರದಾಯ ಕಾರಣ ನುಡಿಯುವ ಗೊರವಯ್ಯ ಅಲ್ಲಿಂದ ಕೈ ಬಿಡುತ್ತಾನೆ ಮೇಲಿಂದ ಬೀಳುವ ಗೊರವಯ್ಯನನ್ನು ಕೆಳಗೆ ಭಕ್ತರು ಹಿಡಿಯುತ್ತಾರೆ, ಗೊರವಯ್ಯ ನುಡಿಯುವ ಕಾರಣಿಕ ವನ್ನು ಭವಿಷ್ಯ ಎನ್ನುವುದಕ್ಕಿಂತ ದೈವವಾಣಿ ಎಂದು ಇಲ್ಲಿನ ಭಕ್ತರು ಅತಿಯಾದ ನಂಬಿಕೆ ಇದೆ. ದೈವವಾಣಿಯನ್ನು ಬೇರೆ ಬೇರೆ ಕ್ಷೇತ್ರದ ಜನದವರು


ಬೇರೆ ಬೇರೆ ಅರ್ಥವನು ವಿಶ್ಲೇಷಿಸಿಕೊಳ್ಳುತ್ತಾರೆ. ರೈತರು ಮಳೆ, ಬೆಳೆ, ಆರೋಗ್ಯ, ಜಾನುವಾರುಗಳ ಆರೋಗ್ಯದ ಬಗ್ಗೆ ಸಂಬಂಧಿಸಿದಂತೆ ಭವಿಷ್ಯವನ್ನು ವಿಶ್ಲೇಷಿಸಿಕೊಂಡರೆ, ಹಾಗೆಯೇ ಕಾರಣಿಕದ ರಾಜಕೀಯದ ವಿಶ್ಲೇಷಣೆ ಕೂಡ ನಡೆಯುತ್ತದೆ. ವ್ಯಾಪಾರಿಗಳು ತಮ್ಮದೇ ಆದ ರೀತಿಯಲ್ಲಿ ಈ ದೈವ ವಾಣಿಯನ್ನು ವಿಶ್ಲೇಷಿಸಿಕೊಳ್ಳುತ್ತಾರೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮೈಲಾರ ಜಾತ್ರೆ ಅತಿ ವಿಶೇಷ.

ಪ್ರತಿ ವರ್ಷ ಲಕ್ಷಾಂತರ ಜನರು ಮೈಲಾರದಲ್ಲಿ ನಡೆಯುವ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಗೊರವನನ್ನು ದಕ್ಷಿಣ ಕರ್ನಾಟಕದಲ್ಲಿ ಗೊರವ ಎಂದು ಹೇಳಿದರೆ ಉತ್ತರ ಕರ್ನಾಟಕದಲ್ಲಿ ಗ್ವಾರಪ್ಪ ಎಂದು ಕರೆಯುವ ರೂಢಿ ಇದೆ. ಗೊರವ ಶಬ್ದಕ್ಕೆ ಕಿಟೆಲ್ ನಿಘಂಟಿನಲ್ಲಿ ಒಂದು ಬಗೆಯ ಶೈವ ಭಿಕ್ಷುಕರು ಎಂದು ಹೇಳಲಾಗಿದೆ ಗುರು ಎಂಬುದು ಗೊರವ ಶಬ್ದದ ಮೂಲ ಎಂಬುದು ಕೆಲವರ ಅಭಿಪ್ರಾಯವಾಗಿದೆ.

ಗೊಗ್ಗ ಎಂದರೆ ಮೈಲಾರ ಲಿಂಗೇಶ್ವರನ ಹಿಂಬಾಲಕರು ಎಂದು ಕಿಟೆಲ್ ನಿಘಂಟು ಅಂದರೆ ಡಿಕ್ಷ್ಣರಿಯಲ್ಲಿ ವಿವರಣೆಯನ್ನು ನೀಡಲಾಗಿದೆ. ಮಕ್ಕಳನ್ನು ಹೆದರಿಸಲು ಗೊಗ್ಗ ಬಂದ ಗೊಗ್ಗಯ್ಯ ಬಂದ ಎಂದು ತಾಯಂದಿರು ಹಿಂದೆ ಹೇಳುವ ವಾಡಿಕೆ ಇತ್ತು. ಗೊರವರು ಮೇಳ ನಡೆಸುವುದು ಇದೆ ರಾತ್ರಿ ನಡೆಯುವ ಈ ಮೇಳದಲ್ಲಿ ಮೂರು ಜನ ಭಾಗವಹಿಸುತ್ತಾರೆ ನಡುವೆ ಇರುವ ಕಥೆಗಾರ ಡಮರುಗ ಆಡಿಸುವ ಕಥೆಯನ್ನು ನಿರೂಪಿಸುತ್ತಾ ಹೋದರೆ.

ಉಳಿದ ಇಬ್ಬರು ಅದೇ ರೀತಿ ನುಡಿಸುತ್ತಾ ಹಿಮ್ಮೇಳದಲ್ಲಿ ಹಾಡುತ್ತಾರೆ. ಈ ಸಂದರ್ಭದಲ್ಲಿ ಮೈಲಾರ ಲಿಂಗನ ಲೀಲೆಗಳನ್ನು ಪ್ರಮುಖವಾಗಿ ಹಾಡುತ್ತಾರೆ ಆದರೆ ಮೈಸೂರು ಕೆಲವು ಭಾಗಗಳಲ್ಲಿ ಮಾದೇಶ್ವರ ಹಾಗೂ ಮಂಟೇಸ್ವಾಮಿಗಳ ಕಾವ್ಯಗಳನ್ನು ಹಾಡುವುದಿದೆ, ಭಕ್ತರ ಮನೆಯಲ್ಲಿ ಹಿಂದೆ ಇಂತಹ ಮೇಳಗಳು ಮದುವೆಯಲ್ಲಿ ಹುಟ್ಟಬ್ಬಗಳಲ್ಲಿ ನಡೆಸಲಾಗುತ್ತಿತ್ತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *