ನಾನು ರಜನಿಕಾಂತ್ ಕ್ಲಾಸ್ ಮೆಟ್ಸ್..ಆದರೆ ಅವನದ್ದು ವೈಭೋಗ ನನ್ನದು ಮಾತ್ರ ಭೋಗ... - Karnataka's Best News Portal

ನಾನು ರಜನಿಕಾಂತ್ ಕ್ಲಾಸ್ ಮೇಟ್ಸು ಅವನದ್ದು ರಾಜಯೋಗ ನಂದು ಬರೀ ಭೋಗ. ಇಳಿ ವಯಸ್ಸಿನಲ್ಲಿಯೂ ತಹ ತಮ್ಮ ಜೀವನವನ್ನು ತಾವೇ ನಡೆಸಿಕೊಂಡು ಹೋಗಿತ್ತಿರುವಂತಹ ಈ ಮಹಿಳೆಯ ಹೆಸರು ಈರಮ್ಮ ಇವರ ವಯಸ್ಸು 76 ಇವರು ಸುಮಾರು 53 ವರ್ಷಗಳಿಂದಲೂ ಸಹ ಸೊಪ್ಪು ಮಾರಾಟ ಮಾಡುತ್ತಾ ತಮ್ಮ ಜೀವನವನ್ನು ಕಳೆಯುತ್ತಾ ಇದ್ದಾರೆ. ಇವರ ಗಂಡ ಅರ್ಧ ಜೀವನಕ್ಕೆ ಉಸಿರು ಚೆಲ್ಲಿ ಇವರನ್ನು ಬಿಟ್ಟು ಹೊರಟಿದ್ದಾರೆ ಇನ್ನು ಇವರಿಗೆ ನಾಲ್ಕು ಜನ ಗಂಡು ಮಕ್ಕಳು ಇದ್ದಾರೆ.

ಈರಮ್ಮ ಅವರ ಮೇಲೆ ಅವಲಿಂಬಿತರಾಗದೆ ತಮ್ಮ ಜೀವನವನ್ನು ಸೊಪ್ಪು ಮಾರಾಟ ಮಾಡುತ್ತಾ ಸಾಗಿಸುತ್ತಾ ಹೋಗುತ್ತಿದ್ದಾರೆ. ತಮ್ಮ ಜೀವನದ ತಿರುವಿನಲ್ಲಿ ಕಷ್ಟ ಸುಖ ನೋವು ಎಲ್ಲವನ್ನು ಕಂಡಿರುವಂತಹ ಈರಮ್ಮ ಅವರ ಜೀವನ ಹಿಂದಿನ ಪೀಳಿಗೆಗೆ ಒಂದು ಮಾರ್ಗದರ್ಶನ ಎಂದೇ ಹೇಳಬಹುದು. ಬೆಳಿಗ್ಗೆ 3:30 ವರೆಗೆ ಎದ್ದು ಮಾರ್ಕೆಟ್ ಗೆ ಹೋಗಿ ತಮಗೆ ಬೇಕಾದಂತಹ ಸೊಪ್ಪು ತರಕಾರಿಗಳನ್ನು ತೆಗೆದುಕೊಂಡು ಇವರು ಕೈಗಾಡಿಯಲ್ಲಿ ವ್ಯಾಪಾರ ಮಾಡುತ್ತಾರೆ.


ಬೆಳಿಗ್ಗೆ 8:30 ನಂತರ ಇವರು ಬೀದಿ ಬೀದಿಗಳಿಗೆ ಹೋಗಿ ವ್ಯಾಪಾರವನ್ನು ನಡೆಸುತ್ತಾರೆ. ತಮ್ಮ ಎಷ್ಟೇ ಕಷ್ಟದ ಜೀವನದಲ್ಲಿಯೂ ಸಹ ಎದೆಗುಂದದೆ ಈರಮ್ಮ ಅವರು ಜೀವನವನ್ನು ಸಾಗಿಸುತ್ತಿರುವುದನ್ನು ನೋಡಿದರೆ ತುಂಬಾ ಹೆಮ್ಮೆಯಾಗುತ್ತದೆ ಇಂತಹ ಎಷ್ಟೋ ಜನ ಅಮಾಯಕ ಹೆಣ್ಣು ಮಕ್ಕಳು ಈ ಒಂದು ಈರಮ್ಮ ಅವರ ಜೀವನದ ಕಥೆಯನ್ನು ಕೇಳಿದರೆ ಅವರಲ್ಲಿಯೂ ಸಹ ಸ್ವಲ್ಪ ಉಮ್ಮಸ್ಸು ತುಂಬುತ್ತದೆ.

ಈರಮ್ಮ ಮತ್ತು ರಜನಿಕಾಂತ್ ಅವರು ಒಂದೇ ಸ್ಕೂಲ್ನಲ್ಲಿ ಓದುತ್ತಿದ್ದರು ಹಾಗೆಯೇ ಒಂದೇ ಬೆಂಚ್ ನಲ್ಲಿಯೂ ಸಹ ಕುಳಿತುಕೊಳ್ಳುತ್ತಿದ್ದರು ಜೊತೆಗೆ ಸಾಕಷ್ಟು ಆಟಗಳನ್ನು ಸಹ ಆಡುತ್ತಿದ್ದರು ಚಿಕ್ಕವಯಸಿನಲ್ಲಿ ಇಬ್ಬರು ಸಹ

ಶಾಲೆಗೆ ಹೋಗುವಂತಹ ಸಂದರ್ಭದಲ್ಲಿ ಸಾಕಷ್ಟು ವಿಷಯಗಳಲ್ಲಿ ಬೆರೆಯುತ್ತಾ ಇದ್ದರು ನಂತರದಲ್ಲಿ ರಜನಿಕಾಂತ್ ರವರು ಕಂಡಕ್ಟರ್ ಆಗಿ ಸೇರಿಕೊಳ್ಳುತ್ತಾರೆ ಅದಾದ ನಂತರ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸುತ್ತಾರೆ ದೊಡ್ಡ ಹೆಸರು ಹಣ ಸಂಪತ್ತು ಕೀರ್ತಿ ಎಲ್ಲ ಬಂದಿದೆ ಆದರೆ ನಾನಿನ್ನು ಹೀಗೆ ಸುತ್ತಿ ಮಾಡಿಕೊಂಡು ಜೀವನವನ್ನು ನಡೆಸುತ್ತಾ ಇದ್ದೇನೆ ಎಂದು ಈರಮ್ಮ ಅವರು ಹೇಳಿಕೊಂಡು ಅವರು ನನ್ನ ಸ್ನೇಹಿತ ಅವರು ಚೆನ್ನಾಗಿದ್ದರೆ ಸರಿ ಎಂದು ಸಹ ಹೇಳಿದ್ದಾರೆ.

ಜೀವನ ಎಷ್ಟು ವಿಚಿತ್ರ ಎಂದರೆ ಇಬ್ಬರೂ ಒಟ್ಟಿಗೆ ಓದಿದಂತಹ ಅವರು ಒಬ್ಬರು ಸ್ಟಾರ್ ಎನಿಸಿಕೊಂಡು ಜೀವನ ಮಾಡುತ್ತಿದ್ದರೆ ಇನ್ನೊಬ್ಬರು ಮತ್ತೊಬ್ಬರಿಗೆ ಮಾದರಿಯಾಗುವಂತಹ ರೀತಿಯಲ್ಲಿ ಜೀವನವನ್ನು ನಡೆಸುತ್ತಿದ್ದಾರೆ ಈರಮ್ಮ ಅವರ ಕಥೆಯನ್ನು ಕೇಳಿದರೆ ಅಂತಹವರಿಗು ಸಹ ನೋವನ್ನು ಉಂಟುಮಾಡುತ್ತದೆ ನಾಲ್ಕು ಜನ ಮಕ್ಕಳಿದ್ದರೂ ಸಹ ಇವರು ಕೈ ಹಿಡಿದು ನಡೆಸುವಂತಹ ಒಬ್ಬ ಮಗ ಕೂಡ ಇಲ್ಲ ಎನ್ನುವಂತಹದ್ದು ಬೇಸರದ ಸಂಗತಿ.

Leave a Reply

Your email address will not be published. Required fields are marked *