ಯಾವತ್ತು ಸಹ ಹೆಂಡತಿಯ ಜೊತೆ ಹಂಚಿಕೊಳ್ಳಬಾರದ ಈ ನಾಲ್ಕು ಅಂಶಗಳು ಯಾವುದು ಗೊತ್ತಾ? - Karnataka's Best News Portal

ಯಾವತ್ತೂ ಸಹ ಹೆಂಡತಿಯ ಜೊತೆ ಹಂಚಿಕೊಳ್ಳಬಾರದ ಈ 4 ಅಂಶಗಳು…||ಚಾಣಕ್ಯನ ನೀತಿ ಪ್ರಕಾರ ಗಂಡ ಯಾವತ್ತಿಗೂ ಕೂಡ ಹೆಂಡತಿಯ ಜೊತೆ ಈ ನಾಲ್ಕು ವಿಷಯಗಳನ್ನು ಹಂಚಿಕೊಳ್ಳಬಾರದಂತೆ. ಆಚಾರ್ಯ ಚಾಣಕ್ಯ ತಮ್ಮಚಾಣಕ್ಯ ನೀತಿ ಪುಸ್ತಕದಲ್ಲಿ ಇಂತಹ 4 ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಅದನ್ನು ಯಾವಾಗಲೂ ಪತಿಯಾದವನು ಗಮನದಲ್ಲಿಟ್ಟುಕೊಳ್ಳಬೇಕು. ಹೆಂಡತಿಗೆ ಇಂತಹ ಕೆಲ ವಿಷಯಗಳನ್ನು ಹೇಳುವುದರಿಂದ ಮುಂದೆ ದಾಂಪತ್ಯ ಕಲಹ ಉಂಟಾಗಬಹುದು, ಎಚ್ಚರ.

ಹಾಗಾದರೆ ಆಚಾರ್ಯ ಚಾಣಕ್ಯ ಹೇಳಿದ ಆ ವಿಷಯಗಳು ಯಾವುದು ಎಂದರೆ. ನಿಮಗೆ ಎಲ್ಲಿಯಾದರೂ ಅವಮಾನವಾದರೆ, ಅದನ್ನೇ ನಿಮ್ಮ ಜೀವನದ ಪಾಠವಾಗಿ ತೆಗೆದುಕೊಳ್ಳಿ ಬದಲಿಗೆ ನಿಮಗೆ ಅವಮಾನ ವಾದಂತಹ ವಿಷಯವನ್ನು ಯಾರಿಗೂ ಕೂಡ ಹೇಳಬೇಡಿ ಇದರಿಂದ ನಿಮಗೆ ಆದಂತಹ ಅವಮಾನ ಹಿಂದಕ್ಕೆ ಹೋಗುವುದಿಲ್ಲ ಹಾಗೂ ಅದನ್ನು ಸರಿಪಡಿಸುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ.


ಮೇಲೆ ಹೇಳಿದಂತೆ ಈ ಮಾತನ್ನು ನಿಮ್ಮ ಹೆಂಡತಿಯ ಬಳಿಯೂ ಕೂಡ ಹೇಳಿಕೊಳ್ಳಬಾರದು. ಏಕೆಂದರೆ ಕೆಲವೊಮ್ಮೆ ನಿಮ್ಮಲ್ಲೇನಾದರೂ ತಪ್ಪನ್ನು ಹುಡುಕಬೇಕು ನಿಮಗೆ ಏನಾದರೂ ನೋವನ್ನು ಉಂಟು ಮಾಡಬೇಕು ಎನ್ನುವಂತಹ ಸಮಯದಲ್ಲಿ ನಿಮ್ಮ ಹೆಂಡತಿಯು ಆ ವಿಷಯವಾಗಿ ಅದನ್ನು ಹೇಳುತ್ತಾ, ನಿಮಗೆ ಕೆಲವೊಮ್ಮೆ ಬೇರೆಯವರ ಮುಂದೆ ಅವಮಾನವನ್ನು ಮಾಡಬಹುದು, ಹಾಗೂ ಎಲ್ಲರ ಮುಂದೆ ನಿಮ್ಮ ಬಗ್ಗೆ ಕೀಳಾಗಿ ಮಾತನಾಡುತ್ತಾಳೆ.

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ನೀವು ಯಾವುದೇ ಒಂದು ವಿಷಯದ ಬಗ್ಗೆ ಅಂದರೆ ಅದರಲ್ಲೂ ಬೇರೆಯವರಿಗೆ ಏನಾದರೂ ದಾನ ಮಾಡಿದರೆ, ಹಾಗೂ ಧರ್ಮಕಾರ್ಯಗಳನ್ನು ರಹಸ್ಯವಾಗಿ ಮಾಡಿದಾಗ ಮಾತ್ರ ಅದರ ಪಾತ್ರ ಮುಖ್ಯವಾಗುತ್ತದೆ. ಅಂದರೆ ನೀವು ಯಾವುದೇ ಸಹಾಯವನ್ನು ಎಲ್ಲರಿಗೂ ತಿಳಿಸಿ ಮಾಡುವುದಕ್ಕಿಂತ ಯಾರಿಗೂ ತಿಳಿಸದೆ ತಿಳಿಯದೆ ಮಾಡುವುದರಿಂದ ನಿಮಗೂ ಕೂಡ ಸಂತೋಷವಾಗುತ್ತದೆ, ಹಾಗೂ ಒಳ್ಳೆಯ ಅನುಭವ ಉಂಟಾಗುತ್ತದೆ.

ಇದಕ್ಕೆ ಒಂದು ಮಾತು ಕೂಡ ಇದೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೂ ತಿಳಿಯಬಾರದು ಎಂದು. ಅದೇ ರೀತಿಯಾಗಿ ನೀವು ಯಾವುದೇ ಕೆಲಸವನ್ನು ಮಾಡಿದರೆ ಅದರಿಂದ ಸಂತೋಷವಾಗಲಿ ದುಃಖವಾಗಲಿ ಯಾವುದನ್ನು ಕೂಡ ನೀವು ಬೇರೆಯವರಿಂದ ಅನುಭವಿಸುವ ಪರಿಸ್ಥಿತಿ ಬರುವುದಿಲ್ಲ. ಅದರಂತೆ ಈ ವಿಷಯವನ್ನು ಕೂಡ ನೀವು ನಿಮ್ಮ ಹೆಂಡತಿಗೆ ಹೇಳಬಾರದು. ಇದರಿಂದ ನಿಮ್ಮ ದಾನಕ್ಕೆ ದಕ್ಕುವ ಪ್ರಾಮುಖ್ಯತೆ ಕ್ಷೀಣಿಸುತ್ತದೆ.

ಪತಿ ಯಾವುದೇ ಕಾರಣಕ್ಕೂ ತಾನು ಸಂಪಾದನೆ ಮಾಡುವಂತಹ ಹಣದ ವಿಚಾರವಾಗಿ ಹೇಳಬಾರದು ಇದರಿಂದ ಪತ್ನಿಯು ಹಣವನ್ನು ಖರ್ಚು ಮಾಡಲು ಮುಂದಾಗುತ್ತಾಳೆ, ಹಾಗೂ ನೀವು ಮಾಡುತ್ತಿರುವಂತಹ ಖರ್ಚುಗಳ ಮೇಲು ಕಡಿವಾಣ ಹಾಕಲು ಪ್ರಯತ್ನಿಸುತ್ತಾಳೆ. ಇದರಿಂದ ಕೆಲವೊಮ್ಮೆ ನೀವು ಕೈಗೊಳ್ಳಬೇಕಾದ ಮಹತ್ವದ ಕೆಲಸಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗೆ ಗಂಡನಲ್ಲಿ ಏನಾದರೂ ದೌರ್ಬಲ್ಯವಿದ್ದರೆ ಅದನ್ನು ಗಂಡ ತನ್ನಲ್ಲಿಗೆ ಅಡಗಿಸಿಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ ಚಾಣಕ್ಯ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *