ಮೊದಲ ಬಾರಿಗೆ ಕುಕ್ಕರ್ ರಾಗಿ ಮುದ್ದೆ, ಮೃದುವಾದ ಹಾಗೂ ಪರ್ಫೆಕ್ಟ್ ಅಳತೆಯಲ್ಲಿ…||
ಸಾಮಾನ್ಯವಾಗಿ ನಮ್ಮ ಬೆಂಗಳೂರು ಮೈಸೂರು ಭಾಗಗಳಲ್ಲಿ ಪ್ರತಿದಿನ ಮುದ್ದೆಯನ್ನು ಮಾಡುತ್ತಾರೆ. ಅದರಲ್ಲೂ ಹಳ್ಳಿಗಳಲ್ಲಿ ಪ್ರತಿದಿನ ಮುದ್ದೆಯನ್ನು ಮಾಡುತ್ತಲೇ ಇರುತ್ತಾರೆ. ಹಳ್ಳಿಯಲ್ಲಿ ಇರುವಂತಹ ಜನರು ತಾವು ಹೊಲಗದ್ದೆಗಳಿಗೆ ಹೋಗುವಂತಹ ಸಮಯದಲ್ಲಿ ಅವರು ರಾಗಿಮುದ್ದೆಯನ್ನು ಮಾಡಿಸಿಕೊಂಡು ಹೋಗಿ ಅಲ್ಲಿ ತಿನ್ನುತ್ತಾರೆ ಎನ್ನುವ ವಿಷಯ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಗೊತ್ತಿದೆ ಅದೇ ರೀತಿಯಾಗಿ.
ರಾಗಿಯನ್ನು ನಾವು ಹೆಚ್ಚಾಗಿ ತಿನ್ನುವುದರಿಂದ ನಮ್ಮ ಆರೋಗ್ಯವೂ ಕೂಡ ಅಷ್ಟೇ ಚೆನ್ನಾಗಿರುತ್ತೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಹಲವಾರು ಜನರಿಗೆ ಗೊತ್ತು. ಆದರೆ ಹೆಚ್ಚಾಗಿ ಕೆಲವೊಬ್ಬರು ಯಾರು ಕೂಡ ರಾಗಿಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದಿಲ್ಲ, ಆದ್ದರಿಂದಲೇ ಅಂತವರು ಈ ದಿನ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಬಹುದು.
ಇನ್ನು ಕೆಲವೊಬ್ಬರಿಗೆ ರಾಗಿ ಮುದ್ದೆಯನ್ನು ಹೇಗೆ ಮಾಡುವುದು ಮನೆಯಲ್ಲಿ ಎಷ್ಟು ಜನ ಇದ್ದಾರೆ? ಯಾವ ಪ್ರಮಾಣದಲ್ಲಿ ಅದನ್ನು ಮಾಡುವುದು? ಹೇಗೆ ಮಾಡುವುದು? ಎನ್ನುವುದು ಕೂಡ ತಿಳಿದಿಲ್ಲ ಹಾಗಾದರೆ ಇದೇ ವಿಷಯವಾಗಿ ಈ ದಿನ ರಾಗಿಮುದ್ದೆಯನ್ನು ಯಾವ ವಿಧಾನದಲ್ಲಿ ಮಾಡಿದರೆ ಅದು ಸರಿಯಾದ ಹದದಲ್ಲಿ ಬರುತ್ತದೆ? ಹಾಗೆಯೇ ಬೇರೆ ವಿಧಾನದಲ್ಲಿ ಹೇಗೆ ರಾಗಿ ಮುದ್ದೆಯನ್ನು ಸುಲಭವಾಗಿ ಮಾಡಬಹುದು.
ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ಮುದ್ದೆಯನ್ನು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಸ್ವಲ್ಪ ರಾಗಿ ಹಿಟ್ಟನ್ನು ಹಾಕಿ ಅದು ಕುದಿ ಬಂದ ನಂತರ ರಾಗಿ ಹಿಟ್ಟನ್ನು ಹಾಕಿ ಮತ್ತೆ ಜಡಿಯುವುದರ ಮೂಲಕ ಅದನ್ನು ಬೇಯಿಸಿ ನಂತರ ಅದನ್ನು ಉಂಡೆ ಮಾಡಿ ಸೇವನೆ ಮಾಡುತ್ತೇವೆ. ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವಿಧಾನ ಪ್ರತಿಯೊಬ್ಬರಿಗೂ ಕೂಡ ಸುಲಭವಾಗುತ್ತದೆ ಹಾಗೂ ಮುದ್ದೆ ಸರಿಯಾದ ಹದದಲ್ಲಿ ಹಾಗೂ ಚೆನ್ನಾಗಿ ಬೆಂದಿರುತ್ತದೆ. ಹಾಗಾದರೆ ಈ ದಿನ ಕುಕ್ಕರ್ ನಲ್ಲಿ ರಾಗಿಮುದ್ದೆಯನ್ನು ಹೇಗೆ ಮಾಡುವುದು ಎನ್ನುವ ಮಾಹಿತಿಯನ್ನು ನೋಡುವುದಾದರೆ.
ಮೊದಲು ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದಾರೆ ಅಷ್ಟು ಅಳತೆಗೆ ಕುಕ್ಕರ್ ನಲ್ಲಿ ನೀರನ್ನು ಹಾಕಿ ಅದಕ್ಕೆ ಸ್ವಲ್ಪ ಹಿಟ್ಟನ್ನು ಹಾಕಿ ಅದನ್ನು ಕುದಿಯಲು ಬಿಡಿ ನಂತರ ಒಂದು ಲೋಟ ನೀರಿಗೆ ಒಂದುವರೆ ಅಳತೆ ಯಷ್ಟು ಹಿಟ್ಟನ್ನು ಹಾಕುವಂತೆ ನೀವು ಆ ನೀರು ಕುದ್ದಿದ ನಂತರ ಹಿಟ್ಟನ್ನು ಹಾಕಿ ಕುಕ್ಕರ್ ನಲ್ಲಿ ಒಂದು ವಿಶಲ್ ಕೂಗಿಸಬೇಕು, ನಂತರ ಅದನ್ನು ಚೆನ್ನಾಗಿ ಎಲ್ಲಾ ಹದವಾಗಿ ಕಲಸಿ ಉಂಡೆಯನ್ನು ಮಾಡುವುದರಿಂದ ಕುಕ್ಕರ್ ಮುದ್ದೆ ನಿಮಗೆ ತಯಾರಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.