ಇವನು ಒಬ್ಬನು ಹೀರೋನಾ ಒಳ್ಳೆ ಓತಿಕ್ಯಾತ ಇದ್ದಂಗೆ ಇದ್ದಾನೆ ಇಂದು ಇವನಿಗಾಗಿ ಕ್ಯೂ ನಿಲ್ಲುವ ಹಾಗೆ ಬೆಳೆದ ಧನುಷ್ ಯಾರು ಗೊತ್ತಾ ? - Karnataka's Best News Portal

ಈ ಗುಬಾಲ್ಡ್ ನ ಎಲ್ಲಿಂದ ಹಿಡುಕೊಂಡು ಬಂದ್ರಿ ಅಂದವರು ಇವತ್ತು ಇವರ ಮನೆ ಕಾಯುತ್ತಿದ್ದಾರೆ…. ಯಾರು ಈ ಧನುಷ್…..?

ನಟ ಧನುಷ್ ಅವರ ನಿಜವಾದ ಹೆಸರು ವೆಂಕಟೇಶ್ ಪ್ರಭು ಕಸ್ತೂರಿ ರಾಜ ಎಂದು ಇವರು ಕಸ್ತೂರಿ ರಾಜ ಹಾಗೂ ವಿಜಯಲಕ್ಷ್ಮಿ ಎನ್ನುವ ದಂಪತಿಗೆ ಕಿರಿಯ ಮಗನಾಗಿ 1983 ರಲ್ಲಿ ಮದ್ರಾಸ್ ನಲ್ಲಿ ಜನಿಸುತ್ತಾರೆ. ಇವರ ತಂದೆ ತಮಿಳಿನಲ್ಲಿ ನಿರ್ದೇಶಕ ಹಾಗೂ.

ಕಥೆಗಾರರಾಗಿದ್ದರು. ಇವರದು ಮಧ್ಯಮ ವರ್ಗದ ಕುಟುಂಬ. ಪ್ರಾರಂಭದಲ್ಲಿ ಧನುಷ್ ಅವರು ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿ ಹೋಟೆಲ್ ಶಿಪ್ ಆಗಬೇಕು ಎಂದುಕೊಂಡಿದ್ದರು. ಇವರಿಗೆ ಸೆಲ್ವ ರಾಘವನ್ ಎನ್ನುವ ಹಿರಿ ಸಹೋದರ ಸಹ ಇದ್ದಾರೆ. ಪ್ರಶಕ್ತ ಅವರೀಗ ತಮಿಳಿನ ನಿರ್ದೇಶಕ ಸಹ ಹೌದು. ಅಣ್ಣನ ಒತ್ತಾಯದ ಮೇರೆಗೆ ಧನುಷ್ ನಟನೆಯ ಕಡೆ ಮುಖ ಮಾಡಬೇಕಾಗಿ ಬಂತು.

ಧನುಷ್ ಅವರಿಗೆ ನಟನೆಯಲ್ಲಿ ಸ್ವಲ್ಪವೂ ಸಹ ಒಲವು ಇರಲಿಲ್ಲ. ಹೀರೋ ಆಗಬೇಕು ಎಂದರೆ ಮೊದಲು ಜನರಿಗೆ ಇಷ್ಟವಾಗಬೇಕು, ಅವರಿಗೆ ಇಷ್ಟವಾಗಬೇಕು ಎಂದರೆ ನಾವು ನೋಡುವುದಕ್ಕೆ ಆಕರ್ಷಕವಾಗಿ ಹಾಗೂ ನೋಡಲು ಮೈ ಕೈ ತುಂಬಿಕೊಂಡು ನಷ್ಟಪುಷ್ಟವಾಗಿ ಇರಬೇಕು. ಇಲ್ಲವಾದರೆ ನನ್ನಂಥ ಕಡ್ಡಿ ಪೈಲ್ವಾನ್ ಅನ್ನು ಯಾರು ತಾನೆ ಇಷ್ಟಪಡುತ್ತಾರೆ ಎನ್ನುವುದು ಅವರ ಅಳುಕಾಗಿತ್ತು.

ಆದರೆ ಅವರ ತಂದೆ ಕಸ್ತೂರಿ ರಾಜ ತಮಿಳಿನ ಖ್ಯಾತ ಹಿರಿಯ ನಿರ್ದೇಶಕರಾಗಿದ್ದು ಎಷ್ಟೋ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದವರು. ಅವರಿಗೆ ತಮ್ಮ ಮಗ ಧನುಷ್ ಅವರನ್ನು ಸ್ಕ್ರೀನ್ ಗೆ ತರಬೇಕು ಎನ್ನುವ ಆಸೆ ಇತ್ತು. 1995ರಲ್ಲಿ ತೆರೆಗೆ ಬಂದಿದ್ದ ಕುರುತ್ತಿ ಪುನಾಲ್ ಎಂಬ ಚಿತ್ರದಿಂದ ಇನ್ಸ್ಪೈರ್ ಆಗಿ ಅವರು ತಮ್ಮ ಮಗನಿಗೆ ಧನುಷ್ ಎಂಬ ಹೊಸ ಹೆಸರನ್ನು ಇಡುತ್ತಾರೆ.

ಧನುಷ್ ನಟನೆಯ ಮೊಟ್ಟಮೊದಲ ಚಿತ್ರದ ಹೆಸರು ತುಳುವಾಡೋ ಇಳಮೈ ಎಂದು ಇದು 2002ರಲ್ಲಿ ತೆರೆಗೆ ಬಂದಿತು. ಇದರ ನಿರ್ದೇಶಕರು ಸ್ವತಹ ಅವರ ತಂದೆಯವರಾದ ಕಸ್ತೂರಿ ರಾಜ ಎಂಬುವವರು. ಅವರು ಈ ಕಥೆಯನ್ನು ತಮ್ಮ ಮಗನಿಗಾಗಿಯೇ ಬರೆದು ನಿರ್ದೇಶಿಸಿದ್ದರು. ಈ ಚಿತ್ರ ರಿಲೀಸ್ ಆದಾಗ ಆಗ ನೋಡಲು ತುಂಬಾ ಸಣ್ಣಗಿದ್ದ ಧನುಷ್ ಅವರನ್ನು ಅನೇಕರು ಲೇವಡಿ ಮಾಡಿದ್ದುಂಟು.

ಇಂತಹ ಹೀರೋ ನಂಬಿ ಹಣವನ್ನು ಹೂಡಿಕೆ ಮಾಡಿದರೆ ಅಷ್ಟೇ ಗತಿ ಎಂದು ಆಡಿಕೊಂಡವರು ಬಹಳಷ್ಟು ಜನ. ಆದರೆ ಈ ಚಿತ್ರವು ಸೂಪರ್ ಹಿಟ್ ಸಾಧಿಸುತ್ತದೆ. ಇದರ ಬಳಿಕ ಅವರು ತಮ್ಮ ಸಹೋದರರಾದ ಸೆಲ್ವ ರಾಘವನ್ ಅವರ ಮೊಟ್ಟ ಮೊದಲ ನಿರ್ದೇಶನದ ಚಿತ್ರವಾದ ಕಾದಲ್ ಕೊಂಡೇನ್ ಎಂಬ ಚಿತ್ರದಲ್ಲಿ ನಟಿಸಿದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *